- ಸರ್ಕಾರಿ ಶಾಲೆ ಮೇಲ್ಚಾವಣಿ ಕುಸಿದು ಬಾಲಕಿ ಕಾಲಿಗೆ ತ್ರೀವ ಗಾಯ

| Published : Jan 26 2024, 01:46 AM IST

- ಸರ್ಕಾರಿ ಶಾಲೆ ಮೇಲ್ಚಾವಣಿ ಕುಸಿದು ಬಾಲಕಿ ಕಾಲಿಗೆ ತ್ರೀವ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ದೇವದುರ್ಗದ ಸರ್ಕಾರಿ ಶಾಲೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕೊಠಡಿಯಲ್ಲಿ ಪಾಠ ಮಾಡುವ ವೇಳೆ ಘಟನೆ. ಮುಖ್ಯಶಿಕ್ಷಕ ಹಾಗೂ ಸಿಆರ್‌ಪಿಗೆ ನೋಟಿಸ್‌ ಜಾರಿ

ಕನ್ನಡಪ್ರಭ ವಾರ್ತೆ ದೇವದುರ್ಗ

ಪಟ್ಟಣದ ಹಳೆ ಅಂಚೆ ಕಚೇರಿ ಪಕ್ಕದಲ್ಲಿರುವ ಸರ್ಕಾರಿ ಬಾಲಕಿಯರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದರಿಂದ 7ನೇ ತರಗತಿ ಶ್ರೀದೇವಿ ಕಾಲಿನ ಕಿರು ಬೆರಳಿಗೆ ತ್ರೀವ ಗಾಯವಾಗಿದೆ.

ಸ್ಥಳೀಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಬೆರಳಿಗೆ ತ್ರೀವ ಪೆಟ್ಟು ಬಿದ್ದಿದ್ದರಿಂದ ನಾಲ್ಕು ಹೊಲಿಗೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ಮಕ್ಕಳಿಗೆ ಬೋಧನೆ ಮಾಡದಂತೆ ಅಧಿಕಾರಿಗಳು ಆದೇಶಿಸಿದ್ದಾರೆ. ಶಿಕ್ಷಕರ ಬೇಜವಾಬ್ದಾರಿಯೆ ಘಟನೆಗೆ ಕಾರಣ ಎಂದು ಪಾಲಕರು ಆರೋಪಿಸಿದರು.

ಆಸ್ಪತ್ರೆಗೆ ಬಿಇಒ ಭೇಟಿ

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸುಖದೇವ್ ಆಸ್ಪತ್ರೆಗೆ ಭೇಟಿ ನೀಡಿ, ಬಾಲಕಿಯ ಆರೋಗ್ಯ ವಿಚಾರಿಸಿದರು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಬಿಇಒ ತಿಳಿಸಿದರು.

ನೋಟಿಸ್ ಜಾರಿ

ಯಾವುದೇ ಕಾರಣಕ್ಕೆ ಶಿಥಿಲಗೊಂಡ ಕೊಠಡಿಗಳಲ್ಲಿ ಬೋಧನೆ ಮಾಡಬಾರದೆಂದು ಆದೇಶಿಸಲಾಗಿದೆ. ಉರ್ದು ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವ ಕಾರಣ ಸರ್ಕಾರಿ ಹಿರಿಯ ಶಾಲೆಯನ್ನು ಪಟೇಲ್ ಓಣಿ ಶಾಲೆಗೆ ಸ್ಥಳಾಂತರ ಮಾಡಿ ಬಳಕೆಗೆ ಯೋಗ್ಯವಿಲ್ಲ ಎಂದು ಬೀಗ ಜಡಿಯಲಾಗಿತ್ತು. ಆದರೂ ಬೀಗ ಹಾಕಿದ ಕೊಠಡಿಗಳನ್ನು ತೆಗೆದು ಮಕ್ಕಳಿಗೆ ಪಾಠ ಹೇಳುತ್ತಿರುವಾಗ ಏಕಾಏಕಿ ಮೇಲ್ಚಾವಣಿ ಕುಸಿದು ಬಿದ್ದಿದೆ. ಮುಖ್ಯಶಿಕ್ಷಕ ಹಾಗೂ ಸಿಆರ್‌ಪಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.