ಗೌಡ ಸಮಾಜದಲ್ಲಿ ಸಂಖ್ಯಾ ಶಕ್ತಿ ಹೆಚ್ಚಿದ್ದರೂ ನೇತೃತ್ವದ ಶಕ್ತಿಯಿಲ್ಲ: ಸಂಜೀವ ಮಠಂದೂರು

| Published : Nov 07 2024, 11:55 PM IST

ಗೌಡ ಸಮಾಜದಲ್ಲಿ ಸಂಖ್ಯಾ ಶಕ್ತಿ ಹೆಚ್ಚಿದ್ದರೂ ನೇತೃತ್ವದ ಶಕ್ತಿಯಿಲ್ಲ: ಸಂಜೀವ ಮಠಂದೂರು
Share this Article
  • FB
  • TW
  • Linkdin
  • Email

ಸಾರಾಂಶ

ದಾಂಪತ್ಯ ಜೀವನದಲ್ಲಿ ೫೦ ವರ್ಷ ಮೇಲ್ಪಟ್ಟ ಹಿರಿಯರಾದ ಮಾದರಿ ದಂಪತಿಗಳಾದ ಬಲ್ನಾಡು ಗ್ರಾಮದ ಕಾಂತಿಲ ಮುತ್ತಪ್ಪ ಗೌಡ ಮತ್ತು ದಮಯಂತಿ ದಂಪತಿ, ಕೆಲ್ಲಾಡಿ ಮಾಂಕು ಗೌಡ ಮತ್ತು ಪದ್ಮಾವತಿ ದಂಪತಿ, ಬ್ರಹ್ಮರಕೋಡಿ ಬಾಬು ಗೌಡ ಮತ್ತು ಚಂದ್ರಾವತಿ ದಂಪತಿ, ಮುದಲಾಜೆ ಶೇಷಪ್ಪ ಗೌಡ ಮತ್ತು ಯಮುನಾ ದಂಪತಿಗಳನ್ನು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸನ್ಮಾನಿಸಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಕರ್ನಾಟಕ ರಾಜ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೌಡ ಸಮಾಜ ಸಂಖ್ಯಾ ಶಕ್ತಿ ಹೆಚ್ಚಾಗಿರುವ ಬಲಿಷ್ಠ ಸಮಾಜವಾಗಿದ್ದು, ಆದರೆ ನೇತೃತ್ವದ ಶಕ್ತಿ ಇಲ್ಲ. ಅಂತಹ ನೇತೃತ್ವದ ಶಕ್ತಿಯನ್ನು ತುಂಬಿಸಲು ಯುವ ಸಮುದಾಯ ಒಂದಷ್ಟು ಮಾಹಿತಿ ಪಡೆಯುವ ಕೆಲಸ ಆಗಬೇಕಾಗಿದೆ. ಇತರ ಸಮುದಾಯವನ್ನು ಸೇರಿಸಿಕೊಂಡು ಮುಂದೆ ಹೋಗಬೇಕಾಗಿದೆ ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸ್ವ ಸಹಾಯ ಸಂಘಗಳಿರುವ ಎಲ್ಲ ಗ್ರಾಮಗಳಲ್ಲಿನ ದಾಂಪತ್ಯ ಜೀವನವನ್ನು ೫೦ ವರ್ಷ ಪೂರೈಸಿದ ಮಾದರಿ ದಂಪತಿಗಳ ಸನ್ಮಾನ ಕಾರ್ಯಕ್ರಮಕ್ಕೆ ಗುರುವಾರ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಕಾಂತಿಲ ಮನೆಯಲ್ಲಿ ಚಾಲನೆ ನೀಡಿ ಮಾತನಾಡಿದರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ ಅಧ್ಯಕ್ಷ ಮನೋಹರ್ ಗೌಡ ಡಿ.ವಿ., ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮಾತನಾಡಿದರು. ನಾಲ್ವರು ದಂಪತಿಗಳಿಗೆ ಸನ್ಮಾನ: ದಾಂಪತ್ಯ ಜೀವನದಲ್ಲಿ ೫೦ ವರ್ಷ ಮೇಲ್ಪಟ್ಟ ಹಿರಿಯರಾದ ಮಾದರಿ ದಂಪತಿಗಳಾದ ಬಲ್ನಾಡು ಗ್ರಾಮದ ಕಾಂತಿಲ ಮುತ್ತಪ್ಪ ಗೌಡ ಮತ್ತು ದಮಯಂತಿ ದಂಪತಿ, ಕೆಲ್ಲಾಡಿ ಮಾಂಕು ಗೌಡ ಮತ್ತು ಪದ್ಮಾವತಿ ದಂಪತಿ, ಬ್ರಹ್ಮರಕೋಡಿ ಬಾಬು ಗೌಡ ಮತ್ತು ಚಂದ್ರಾವತಿ ದಂಪತಿ, ಮುದಲಾಜೆ ಶೇಷಪ್ಪ ಗೌಡ ಮತ್ತು ಯಮುನಾ ದಂಪತಿಗಳನ್ನು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸನ್ಮಾನಿಸಿ ಗೌರವಿಸಿದರು. ಸನ್ಮಾನಿತರ ಪರವಾಗಿ ಮುತ್ತಪ ಗೌಡ ಕಾಂತಿಲ ಅನಿಸಿಕೆ ವ್ಯಕ್ತಪಡಿಸಿದರು.

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಅಧ್ಯಕ್ಷ ಡಿ.ವಿ. ಮನೋಹರ್ ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಸಲಹಾ ಸಮಿತಿ ಸದಸ್ಯ ಜಿನ್ನಪ್ಪ ಗೌಡ, ದಶಮಾನೋತ್ಸವ ಸಮಿತಿ ಗೌರವಧ್ಯಕ್ಷ ಎ.ವಿ. ನಾರಾಯಣ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಮತ್ತಿತರರು ಉಪಸ್ಥಿತರಿದ್ದರು.

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎ.ವಿ. ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮಾಧವ ಗೌಡ ಕಾಂತಿಲ ಸ್ವಾಗತಿಸಿದರು. ನಾರಾಯಣ ಗೌಡ ವಂದಿಸಿದರು. ಮೇಲ್ವಿಚಾರಕಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು.