ಅಪಘಾತದಲ್ಲಿ ಗ್ರಾಪಂ ಸದಸ್ಯ ಸಾವು

| Published : Dec 17 2023, 01:45 AM IST

ಸಾರಾಂಶ

ಹಾರೂಗೇರಿ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮರಣ ಹೊಂದಿದ್ದಾರೆ.

ರಾಯಬಾಗ: ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದ ಮಗದುಮ್ಮ (40) ಅಪಘಾತದಲ್ಲಿ ಅಸುನೀಗಿದ್ದಾರೆ.

ಶುಕ್ರವಾರ ರಾತ್ರಿ ಸುಮಾರು 7 ಗಂಟೆಗೆ ಸುಮಾರಿಗೆ ಪಟ್ಟಣದ ಅಂಬೇಡ್ಕರ್‌ ವೃತ್ತದಿಂದ ಸ್ವಗ್ರಾಮ ನಾಗರಾಳಕ್ಕೆ ಸ್ಕೂಟಿ ಮೇಲೆ ತೆರಳುವಾಗ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಅವರನ್ನು ಹಾರೂಗೇರಿ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮರಣ ಹೊಂದಿದ್ದಾರೆ.