ನಾಳೆಯಿಂದ ಜಿಪಿಐಇಆರ್ ರಂಗ ತಂಡದಿಂದ ರಾಷ್ಟ್ರೀಯ ರಂಗೋತ್ಸವ

| Published : Mar 26 2024, 01:16 AM IST

ಸಾರಾಂಶ

ರಂಗೋತ್ಸವವನ್ನು ಮಾ.27ರ ಸಂಜೆ 6ಕ್ಕೆ ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಉದ್ಘಾಟಿಸುವರು. ಹಿರಿಯ ರಂಗ ನಿರ್ದೇಶಕ ಪ್ರೊ.ಎಚ್.ಎಸ್. ಉಮೇಶ್ ಅಧ್ಯಕ್ಷತೆ ವಹಿಸುವರು. ಭರತನಾಟ್ಯ ಕಲಾವಿದೆ ಡಾ. ವಸುಂಧರಾ ದೊರೆಸ್ವಾಮಿ, ಚಲನಚಿತ್ರ ಕಲಾವಿದ ಅರುಣ್ ಸಾಗರ್, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಹಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಅತಿಥಿಯಾಗುವರು. ಇದೇ ವೇಳೆ ಪದ್ಮಶ್ರೀ ಪುರಸ್ಕೃತ ಸೋಮಣ್ಣ ಅವರನ್ನು ಗೌರವಿಸಲಾಗುವುದು

ಕನ್ನಡಪ್ರಭ ವಾರ್ತೆ ಮೈಸೂರು

ಜಿಪಿಐಇಆರ್ ರಂಗ ತಂಡದಿಂದ ಮಾ.27 ರಿಂದ 31 ರವರೆಗೆ ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ರಾಷ್ಟ್ರೀಯ ರಂಗೋತ್ಸವವನ್ನು ಆಯೋಜಿಸಲಾಗಿದೆ ಎಂದು ರಂಗ ತಂಡದ ನಿರ್ದೇಶಕ ಹಾಗೂ ಹಿರಿಯ ರಂಗಕರ್ಮಿ ಮೈಮ್ ರಮೇಶ್ ತಿಳಿಸಿದರು.

ಈ ರಂಗೋತ್ಸವವನ್ನು ಮಾ.27ರ ಸಂಜೆ 6ಕ್ಕೆ ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಉದ್ಘಾಟಿಸುವರು. ಹಿರಿಯ ರಂಗ ನಿರ್ದೇಶಕ ಪ್ರೊ.ಎಚ್.ಎಸ್. ಉಮೇಶ್ ಅಧ್ಯಕ್ಷತೆ ವಹಿಸುವರು. ಭರತನಾಟ್ಯ ಕಲಾವಿದೆ ಡಾ. ವಸುಂಧರಾ ದೊರೆಸ್ವಾಮಿ, ಚಲನಚಿತ್ರ ಕಲಾವಿದ ಅರುಣ್ ಸಾಗರ್, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಹಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಅತಿಥಿಯಾಗುವರು. ಇದೇ ವೇಳೆ ಪದ್ಮಶ್ರೀ ಪುರಸ್ಕೃತ ಸೋಮಣ್ಣ ಅವರನ್ನು ಗೌರವಿಸಲಾಗುವುದು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾ.31ರ ಸಂಜೆ 6ಕ್ಕೆ ಸಮಾರೋಪ ಸಮಾರಂಭದಲ್ಲಿ ಹಿರಿಯ ರಂಗ ನಿರ್ದೇಶಕ ಹಾಗೂ ಕಲಾವಿದ ಬಿ. ಸುರೇಶ್ ಸಮಾರೋಪ ನುಡಿಗಳನ್ನಾಡುವರು. ಹಿರಿಯ ರಂಗ ನಿರ್ದೇಶಕರಾದ ಪ್ರೊ.ಎಸ್.ಆರ್. ರಮೇಶ್, ಎಚ್. ಜನಾರ್ಧನ್, ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಅಧ್ಯಕ್ಷ ಎಚ್.ಎಸ್. ಸುರೇಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅತಿಥಿಯಾಗುವರು ಎಂದರು.

ರಂಗೋತ್ಸವ- ನಾಟಕಗಳು

ಮಾ.27ರ ಸಂಜೆ 7ಕ್ಕೆ ಕೇರಳದ ಜ್ವಾಲ ಕುರುವಾಕೋಡ್ ತಂಡದಿಂದ ಬಾವಲ್ ಮಲೆಯಾಳಂ ನಾಟಕ, 28ರ ಸಂಜೆ 5.30ಕ್ಕೆ ದೇವಾನಂದ್ ವರಪ್ರಸಾದ್ ತಂಡದಿಂದ ಅರಿವು ತೋರಿದ ದುರು- ತತ್ವಪದ ಗಾಯನ, ಸಂಜೆ 7ಕ್ಕೆ ಜಿಪಿಐಇಆರ್ ತಂಡದಿಂದ ಮಂಟೇಸ್ವಾಮಿ ಕಥಾ ಪ್ರಸಂಗ- ಕನ್ನಡ ಜಾನಪದ ನಾಟಕ ಪ್ರದರ್ಶನವಿದೆ ಎಂದರು.

ಮಾ.29ರ ಸಂಜೆ 5.30ಕ್ಕೆ ಡಾ. ಮೈಸೂರು ಗುರುರಾಜ್ ತಂಡದಿಂದ ತಂಬೂರಿ ಜಾನಪದ ಗಾಯನ, ಸಂಜೆ 7ಕ್ಕೆ ಉಡುಪಿಯ ಅಮೋಘ ತಂಡದಿಂದ ರೈಲು ಭೂತ ಎಂಬ ತುಳು ನಾಟಕ ಪ್ರದರ್ಶನವಿದೆ. ಮಾ.30ರ ಸಂಜೆ 5.30ಕ್ಕೆ ವಾಸು ದೀಕ್ಷಿತ್ ಕಲೆಕ್ಟಿವ್ ಸಂಗೀತ ಸಂಜೆ, ಸಂಜೆ 7ಕ್ಕೆ ಕಹೆ ವಿದುಶಕ್ ಫೌಂಡೇಷನ್ ತಂಡದಿಂದ ಸಕಲ್ ಜಾನಿ ಹೇ ನಾಥ್ ಎಂಬ ಹಿಂದಿ ನಾಟಕ ಪ್ರದರ್ಶನವಿದೆ. ಮಾ.31ರ ಸಂಜೆ 5.30ಕ್ಕೆ ಮಂಗಳೂರಿನ ತಂಡದಿಂದ ತತ್ವಮಸಿ ಸಿಂಗಾರಿ ಮೇಳಂ, 7ಕ್ಕೆ ಬೆಂಗಳೂರಿನ ರಂಗ ಪಯಣ ತಂಡದಿ0ದ ನವರಾತ್ರಿಯ ಕೊನೆ ದಿನ ಎಂಬ ಕನ್ನಡ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಪ್ರತಿ ನಾಟಕಕ್ಕೆ 100 ರೂ. ಪ್ರವೇಶ ದರ ನಿಗದಿಪಡಿಸಲಾಗಿದ್ದು, ಎಲ್ಲಾ ನಾಟಕಗಳಿಗೆ ಒಂದು ಬಾರಿಯ ಸೀಜನ್ ಟಿಕೆಟ್ ಗೆ 400 ರೂ. ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಜಿಪಿಐಇಆರ್ ರಂಗತಂಡದ ಡಾ.ಎಚ್.ಎಂ. ಕುಮಾರಸ್ವಾಮಿ, ಬಸವಣ್ಣ, ಲೋಹಿತ್, ಎಂ.ಪಿ. ಹರಿದತ್ತ ಇದ್ದರು.