ಪದವೀದರರು ಕಾಂಗ್ರೆಸ್‌ ತಿರಸ್ಕರಿ, ಬಿಜೆಪಿಯನ್ನು ಪುರಸ್ಕರಿಸಬೇಕು

| Published : May 29 2024, 01:00 AM IST / Updated: May 29 2024, 01:01 AM IST

ಪದವೀದರರು ಕಾಂಗ್ರೆಸ್‌ ತಿರಸ್ಕರಿ, ಬಿಜೆಪಿಯನ್ನು ಪುರಸ್ಕರಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಜೂ.೩ರಂದು ನಡೆಯಲಿರುವ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯೂ ಅತ್ಯಂತ ವಿಶೇಷವಾದ ಚುನಾವಣೆಯಾಗಿದ್ದು,ನಿಮ್ಮ ಸಮಸ್ಯೆಗಳ ಬಗ್ಗೆ ಧ್ವನಿಯಾಗಿರುವ ಅಭ್ಯರ್ಥಿಯನ್ನು ವಿಧಾನ ಪರಿಷತ್ತಿನ ಒಳಗಡೆ ಕೇಳಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಮುಂಬರುವ ಜೂ.೩ರಂದು ನಡೆಯಲಿರುವ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯೂ ಅತ್ಯಂತ ವಿಶೇಷವಾದ ಚುನಾವಣೆಯಾಗಿದ್ದು,ನಿಮ್ಮ ಸಮಸ್ಯೆಗಳ ಬಗ್ಗೆ ಧ್ವನಿಯಾಗಿರುವ ಅಭ್ಯರ್ಥಿಯನ್ನು ವಿಧಾನ ಪರಿಷತ್ತಿನ ಒಳಗಡೆ ಕೇಳಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮನವಿ ಮಾಡಿದರು.

ಮಂಗಳವಾರ ಅವರು ನಗರದ ಖಮಿತಕರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಹಕಾರಿಗಳು/ಸಾಹಿತಿಗಳು/ನ್ಯಾಯವಾದಿಗಳು/ವೈದ್ಯರು/ಶಿಕ್ಷಕರು ಇತರೆ ಪದವೀಧರರ ಸಂಯುಕ್ತಾಶ್ರಯದಲ್ಲಿ ಪ್ರಬುದ್ಧ ಪದವೀಧರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಸೂಕ್ತ ಅಭ್ಯರ್ಥಿಯ ಆಯ್ಕೆ ಮಾಡುವುದಿದೆ.

ಹಿಂದೆಯೂ ಅಮರನಾಥ ಪಾಟೀಲ್ ಅವರು ಈ ಭಾಗದ ಧ್ವನಿಯಾಗಿ ಹೋರಾಟ ಮಾಡಿದ್ದಾರೆ. ಭಾಗದ ಶೈಕ್ಷಣಿಕ ಬೆಳವಣಿಗೆಗೆ ಸದನದಲ್ಲಿ ಸಾಕಷ್ಟು ಚರ್ಚೆ ಮಾಡಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಶೂನ್ಯವಾಗಿದೆ. ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿದೆ.ಇಲ್ಲಿಯವರೆಗೆ ಒಂದೇ ಒಂದು ಗುದ್ದುಲಿ ಪೂಜೆ ನೆರವೇರಿಸಿಲ್ಲ. ಬರೀ ಗ್ಯಾರಂಟಿಗಳ ಭ್ರಮೆಯಲ್ಲಿ ಕಾಂಗ್ರೆಸ್ ಮುಳುಗಿರುವ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ, ಬಿಜೆಪಿ ಗೆ ಬೆಂಬಲಿಸಿ ಎಂದರು.

ಅಭ್ಯರ್ಥಿ ಅಮರನಾಥ ಪಾಟೀಲ್ ಮಾತನಾಡಿ, ಮುಂಬರುವ ಜೂನ್ ೩ರಂದು ನಡೆಯಲಿರುವ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ನನಗೆ ಮೊದಲನೇ ಪ್ರಾಶಸ್ತ್ಯ ಮತ ನೀಡುವ ಮೂಲಕ ಆಶೀರ್ವಾದ ಮಾಡಬೇಕು. ಕಡ್ಡಾಯವಾಗಿ ನೀವು ಮತದಾನ ಮಾಡುವುದಲ್ಲದೇ, ನಿಮಗೆ ಪರಿಚಯವಿರುವ ಹಲವು ಪದವೀಧರಿಗೆ ಮತದಾನ ಮಾಡುವಂತೆ ತಿಳಿಸಬೇಕು ಎಂದು ಮನವಿ ಮಾಡಿದ ಅವರು,ನಿಮ್ಮ ಭರವಸೆಗೆ ಚ್ಯುತಿ ಬಾರದಂತೆ ಈ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು,ನಿಶ್ಚಿತವಾಗಿ ಹೇಳುವೆ ಈ ಬಾರಿ ಕಾಂಗ್ರೆಸ್ ಮನೆಗೆ ಹೋಗಲಿದ್ದು, ಬಿಜೆಪಿ ಅತೀ ಹೆಚ್ಚಿನ ಲಿಡ್ ಪಡೆದು ಜಯ ಸಾಧಿಸಲಿದೆ. ಇಲ್ಲಿಯವರೆಗೆ ಸದನದಲ್ಲಿ ಒಂದೇ ಒಂದು ಪ್ರಶ್ನೆ ಕೇಳದ ಶಾಸಕ ಚಂದ್ರಶೇಖರ್ ಪಾಟೀಲ್ , ಭಾಗದ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ನಮ್ಮ ಅಭ್ಯರ್ಥಿ ಅಮರನಾಥ ಪಾಟೀಲ್ ಅವರಿಗೆ ಸಹಾಯ ಮಾಡಿ, ನಿಮ್ಮ ನಿಮ್ಮ ಕ್ಷೇತ್ರದಲ್ಲಿರುವ ಪದವೀಧರರನ್ನು ಭೇಟಿಯಾಗಿ ಅಮರನಾಥ ಪಾಟೀಲ್,ಗೆ ತಮೊದಲ ಪ್ರಾಶಸ್ತ್ಯ ಮತ ನೀಡುವಂತೆ ತಿಳಿಸಿ ಎಂದು ಕರೆ ನೀಡಿದರು.

ಮಾಜಿ ಸಚಿವ ಮುರುಗೇಶ್ ನಿರಾಣಿ, ಸಂಸದ ಡಾಕ್ಟರ್ ಉಮೇಶ್ ಜಾಧವ್, ಸುರೇಶ್ ಸಜ್ಜನ್ ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಶಶೀಲ್ ನಮೋಶಿ, ಸುನೀಲ್ ವಲ್ಯಾಪುರ್, ಶಾಸಕ ಬಸವರಾಜ ಮತ್ತಿಮಡು,ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ನಗರಾಧ್ಯಕ್ಷ ಚಂದು ಪಾಟೀಲ್, ಗ್ರಾಮಾಂತರ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಶಾಸಕ ಹಣಮಂತ ನಿರಾಣಿ, ಮುಖಂಡರಾದ ಸುರೇಶ್ ಸಜ್ಜನ್,ಮಾಜಿ ಸಚಿವ ಬಾಬುರಾವ್ ಚೌಹಾಣ್, ದೊಡ್ಡಪ್ಪಗೌಡ ಪಾಟೀಲ್, ಕೃಷ್ಣ ರೆಡ್ಡಿ, ಓಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣಾ ಮ್ಯಾಕೇರಿ, ಧರ್ಮಣ್ಣ ದೊಡ್ಡಮನಿ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.