ಸಾರಾಂಶ
ನರಸಿಂಹರಾಜಪುರ: ಸೀನಿಯರ್ ಛೇಂಬರ್ ನ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಜೂ. 15 ರ ಶನಿವಾರ ಕನ್ಯಾಕುಮಾರಿ ಕಂಪರ್ಟ್ ಹಾಲ್ ನಲ್ಲಿ ಸಂಜೆ 6.30ಕ್ಕೆ ನಡೆಯಲಿದೆ.
ನರಸಿಂಹರಾಜಪುರ: ಸೀನಿಯರ್ ಛೇಂಬರ್ ನ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಜೂ. 15 ರ ಶನಿವಾರ ಕನ್ಯಾಕುಮಾರಿ ಕಂಪರ್ಟ್ ಹಾಲ್ ನಲ್ಲಿ ಸಂಜೆ 6.30ಕ್ಕೆ ನಡೆಯಲಿದೆ.
ನೂತನ ಅಧ್ಯಕ್ಷರಾಗಿ ಕೆ.ಆರ್.ನಾಗರಾಜ ಪುರಾಣಿಕ್ ಹಾಗೂ ಕಾರ್ಯದರ್ಶಿಯಾಗಿ ಪಿ.ಎಸ್. ವಿದ್ಯಾ ನಂದಕುಮಾರ್ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಸೀನಿಯರ್ ಛೇಂಬರ್ ನ ರಾಷ್ಟೀಯ ಉಪಾಧ್ಯಕ್ಷೆ ಪುಷ್ಪ ಎಸ್. ಶೆಟ್ಟಿ ಪ್ರಮಾಣ ವಚನ ಬೋಧಿಸಲಿದ್ದಾರೆ. ಶೃಂಗೇರಿ ತಾಲೂಕಿನ ತೊರೆಹಡ್ಲು ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಗುರುಮೂರ್ತಿ ಸಂಪಗೋಡು ಮುಖ್ಯ ಭಾಷಣ ಮಾಡಲಿದ್ದಾರೆ. 2022-24 ನೇ ಸಾಲಿನ ಅಧ್ಯಕ್ಷ ಎಚ್.ಬಿ.ರಘುವೀರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯದರ್ಶಿ ಡಿ.ರಮೇಶ್ ಉಪಸ್ಥಿತರಿರುವರು.