ಸಾರಾಂಶ
--ಕನ್ನಡಪ್ರಭ ವಾರ್ತೆ ಮೈಸೂರುಮೌಲ್ಯಗಳು ಅಧಃಪತನವಾಗುತ್ತಿರುವ ಈ ಹೊತ್ತಿನಲ್ಲಿ ಶಿಕ್ಷಕರ ವೃತ್ತಿ ಸವಾಲಿನದು ಎಂದು ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ಹಿರಿಯ ಪ್ರಾಧ್ಯಾಪಕ ಡಾ.ಜೆ. ಸೋಮಶೇಖರ್ ಹೇಳಿದರು.ರಾಜೇಂದ್ರ ನಗರದ ಛಾಯಾದೇವಿ ಬಿ.ಇಡಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಪದವೀಧರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ದೇಶದ ಆಸ್ತಿ. ಹೀಗಾಗಿ ಇಂದು ಹಚ್ಚಿದ ಪ್ರಜ್ಞೆಯ ಬೆಳಕು ಆರದಂತೆ ಕಾಪಾಡಿಕೊಳ್ಳುವ ಸಂಕಲ್ಪ ಮಾಡಿ. ಶಿಕ್ಷಕ ವೃತ್ತಿಯ ಮೇಲೆ ಸಮಾಜ ನಿಂತಿದೆ. ಸಮಾಜ ಕಟ್ಟುವ, ವ್ಯವಸ್ಥೆ ನಿರ್ಮಿಸುವ ವೃತ್ತಿ. ಆದ್ದರಿಂದ ಶಿಕ್ಷಕರು ಬೆಳಕಿಗೆ ದಾರಿ ತೋರುವ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು ಎಂದು ಕರೆ ನೀಡಿದರು.ಅಕ್ಷರ ಮತ್ತು ಅನ್ನದಾಸೋಹ ಮುಖ್ಯವಾದವು. ಕೃತಕ ಬುದ್ಧಿಮತ್ತೆ ಎಂಬ ತಂತ್ರಜ್ಞಾನದ ಈ ಹೊತ್ತಿನಲ್ಲಿ ಶಿಕ್ಷಕರ ಕೆಲಸ ಏನು? ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಅವರು ಸಲಹೆ ಮಾಡಿದರು.ಡಾ.ಎಸ್. ರಾಧಾಕೃಷ್ಣನ್, ಜ್ಯೋತಿ ಬಾಪುಲೆ, ಸಾವಿತ್ರಿಬಾಯಿ ಪುಲೆ ರೀತಿಯ ಶಿಕ್ಷಕರು ನೀವಾಗಬೇಕು. ಶಿಕ್ಷಣದಿಂದ ಕ್ರಾಂತಿ ಆಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಶಿಕ್ಷಣದಿಂದ ಎಷ್ಟೋ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಶಿಕ್ಷಕರು ಆಳುವ ವರ್ಗದ ಬಗ್ಗೆ ಎಚ್ಚರವಹಿಸಿಯೇ ಕೆಲಸ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.ಶಿಕ್ಷಕರ ಆಸ್ತಿ ಎಂದರೇ ವಿದ್ಯಾರ್ಥಿಗಳು. ಆದ್ದರಿಂದ ಗೂಗಲ್ ಗುರು ಹಿಂದೆ ಹೋಗುವುದನ್ನು ಬಿಟ್ಟು ಗುರುಹಿಂದೆ ಹೋಗುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಿ ಎಂದರು.ಇದೇ ಸಂದರ್ಭದಲ್ಲಿ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೈಣೈ ಅವರಿಗೆ ''''''''''''''''ಆಯುರ್ವೇದ ಆರೋಗ್ಯ ಮಿತ್ರ'''''''''''''''' ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರನ್ನು ಸನ್ಮಾನಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಭಾನುಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಆಂತೋಣಿ ಪಾಲ್‌ರಾಜ್ ಸ್ವಾಗತಿಸಿದರು. ಜಹಾರ ಫಾತಿಮಾ ವಂದಿಸಿದರು.ರೋಸ್ಟಿಟ ಅಮಲಾನತನ್ ಕಾರ್ಯಕ್ರಮ ನಿರೂಪಿಸಿದರು.ಕಾಲೇಜಿನ ಶೈಕ್ಷಣಿಕ ಸಾಧನೆಯ ಬಗ್ಗೆ ವಿಡಿಯೋ ಪ್ರದರ್ಶನ, ರಾಷ್ಟ್ರಗೀತೆ, ನಾಡಗೀತೆ. ಬೀಳ್ಕೊಡುಗೆ ಗೀತೆಗಳನ್ನು ಹಾಡಲಾಯಿತು. ಹಿಂದೂ, ಮುಸ್ಲಿಂ, ಕ್ರೈಸ್ತ ಪ್ರಾರ್ಥನಾ ಸೇವೆ, ಪ್ರತಿಜ್ಞಾವಿಧಿ ಸ್ವೀಕಾರ ಕೂಡ ನಡೆಯಿತು.---
;Resize=(128,128))
;Resize=(128,128))
;Resize=(128,128))
;Resize=(128,128))