ನಿಯಮ ಉಲ್ಲಂಘನೆ ಮಾಂಬಳ್ಳೀಲಿ ಗ್ರಾಮಸಭೆ ರದ್ದು

| Published : Oct 31 2025, 01:45 AM IST

ನಿಯಮ ಉಲ್ಲಂಘನೆ ಮಾಂಬಳ್ಳೀಲಿ ಗ್ರಾಮಸಭೆ ರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಮಾಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆಯಬೇಕಿದ್ದ ನರೇಗಾ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮಸಭೆಯು ಗ್ರಾಪಂ ಅಧ್ಯಕ್ಷ, ಕೆಲ ಸದಸ್ಯರಿಗೆ ಮಾಹಿತಿ ಇಲ್ಲದೆ, ನೋಡಲ್ ಅಧಿಕಾರಿ ಗೈರಿನಲ್ಲಿ ನಡೆಯುತ್ತಿತ್ತು. ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಹಾಗಾಗಿ ಇದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಸಭೆ ರದ್ದುಗೊಂಡಿತು.

ಗ್ರಾಪಂ ಅಧ್ಯಕ್ಷ, ಸದಸ್ಯರಿಗೆ ಉಷಾರಾಣಿ ಮಾಹಿತಿ ಕೊಟ್ಟಿಲ್ಲ: ಮಲ್ಲೇಶ್

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಮಾಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆಯಬೇಕಿದ್ದ ನರೇಗಾ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮಸಭೆಯು ಗ್ರಾಪಂ ಅಧ್ಯಕ್ಷ, ಕೆಲ ಸದಸ್ಯರಿಗೆ ಮಾಹಿತಿ ಇಲ್ಲದೆ, ನೋಡಲ್ ಅಧಿಕಾರಿ ಗೈರಿನಲ್ಲಿ ನಡೆಯುತ್ತಿತ್ತು. ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಹಾಗಾಗಿ ಇದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಸಭೆ ರದ್ದುಗೊಂಡಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಮಲ್ಲೇಶ್ ಮಾತನಾಡಿ, ಇಲ್ಲಿನ ಪಿಡಿಒ ಉಷಾರಾಣಿ ಗ್ರಾಮಸಭೆಯ ವಾರದ ಮುಂಚೆ ಅಧ್ಯಕ್ಷ, ಸಂಬಂಧಪಟ್ಟ ಗ್ರಾಪಂ ಸದಸ್ಯರಿಗೆ ಮಾಹಿತಿ ನೀಡಬೇಕು. ಆದರೆ ಇವರು ಮಾಹಿತಿ ಕೊಟ್ಟಿಲ್ಲ. ನೋಡಲ್ ಅಧಿಕಾರಿ ಸಭೆಗೆ ಗೈರಾಗಿದ್ದಾರೆ. ಇವರ ಇಲಾಖೆಯ ಅಧಿಕಾರಿಯೊಬ್ಬರನ್ನು ಕಳುಹಿಸಿದ್ದಾರೆ. ಆದರೆ ಇದು ನಿಯಮಕ್ಕೆ ವಿರುದ್ಧವಾಗಿದೆ. ಗ್ರಾಮದಲ್ಲಿ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆ ಇದೆ.

ಪಂಚಾಯಿತಿಯಲ್ಲಿ ಪಿಡಿಒ ಏಕ ಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಲಂಚಗುಳಿತನ ಹೆಚ್ಚಾಗಿದೆ. ಇಲ್ಲಿ ಇ-ಸ್ವತ್ತು ಮಾಡಬೇಕಾದರೆ ಕನಿಷ್ಠ ೫ ಸಾವಿರ ರು. ಲಂಚ ನೀಡಬೇಕು. ನರೇಗಾ ಯೋಜನೆಯಡಿ ₹೯ ಲಕ್ಷ ವೆಚ್ಚದಲ್ಲಿ ಬಾಳಯ್ಯನ ಕಟ್ಟೆ ಅಭಿವೃದ್ಧಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಇಲ್ಲಿ ಪಿಡಿಒ ಕೂಡ ಪಾಲುದಾರರಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮ ವಹಿಸಬೇಕು.

ಅಲ್ಲದೆ ಪಂಚಾಯಿತಿಯ ಪೌರಕಾರ್ಮಿಕರು, ನೀರುಗಂಟಿಗಳಿಗೆ ಸಂಬಳವನ್ನು ಮಾಡಬೇಕು ಎಂದು ಈ ಹಿಂದೆ ಇಒ ಸೂಚನೆ ನೀಡಿದ್ದರೂ ಇನ್ನೂ ಸಂಬಳ ಮಾಡಿಲ್ಲ. ದೀಪಾವಳಿ ಜಾತ್ರೆಯಲ್ಲಿ ಕೇವಲ ಮುಖ್ಯ ರಸ್ತೆಗಳ ಸ್ವಚ್ಛತೆಯನ್ನು ಮಾಡಿಸಿದ್ದು ಗ್ರಾಮದ ಬೀದಿಗಳಲ್ಲಿ ಇನ್ನೂ ಅಶುಚಿತ್ವ ಇದೆ. ಅಲ್ಲದೆ ಶಿಕ್ಷಣ, ವಿಕಲಚೇತನರೂ ಸೇರಿದಂತೆ ಇರುವ ಅನುದಾನಗಳನ್ನು ಇನ್ನೂ ಬಳಸಿಕೊಂಡಿಲ್ಲ. ಪಂಚಾಯಿತಿಯನ್ನು ಕಡೆಗಣಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ದೂರಿದರು.ಗುರುವಾರ ಸಭೆಯನ್ನು ರದ್ದುಗೊಳಿಸಿ ಇದನ್ನು ಮುಂದೂಡಲಾಯಿತು. ನಂತರ ಅಧ್ಯಕ್ಷ ಆರ್.ಮಲ್ಲೇಶ್ ಈ ಸಂಬಂಧ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ರವರಿಗೆ ದೂರು ಸಲ್ಲಿಸಿದರು.

ಈ ಬಗ್ಗೆ ಇಒ ಉಮೇಶ್ ಮಾತನಾಡಿ, ಈ ಸಂಬಂಧ ನವೆಂಬರ್ ತಿಂಗಳಲ್ಲಿ ನಾನು ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ವಹಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಲಕ್ಷ್ಮಿಪತಿ ಮುಖಂಡರಾದ ರಜಿನಿ, ರಾಜಪ್ಪ, ಮಹೇಶ್ ಸೇರಿದಂತೆ ಅನೇಕರು ಇದ್ದರು.

30ಸಿಎಚ್‌ಎನ್‌51

ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆಯಬೇಕಿದ್ದ ನರೇಗಾ ಹಾಗೂ 15ನೇ ಹಣಕಾಸು ಗ್ರಾಮಸಭೆ ರದ್ದುಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಂಚಾಯಿತಿ ಮುಂದೆ ನಿಂತಿರುವುದು.