ಗ್ರಾಮಾಂತರಕ್ಕೆ..ಭುವನಹಳ್ಳಿಯಲ್ಲಿ ಗ್ರಾಮ ಸಭೆ, ಜಮಾಬಂದಿ ಕಾರ್ಯಕ್ರಮ

| Published : Sep 25 2024, 12:56 AM IST

ಗ್ರಾಮಾಂತರಕ್ಕೆ..ಭುವನಹಳ್ಳಿಯಲ್ಲಿ ಗ್ರಾಮ ಸಭೆ, ಜಮಾಬಂದಿ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮತ್ತು ಗ್ರಾಮದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಗ್ರಾಮದ ಸಂಪನ್ಮೂಲಗಳ ಸಮರ್ಥ ಬಳಕೆಗಾಗಿ, ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಗ್ರಾಮ ಸಭೆ ಸಹಾಯಕವಾಗಿದೆ ಎಂದು ಕೃಷಿ ನಿರ್ದೇಶಕ ಪ್ರಸಾದ್ ಹೇಳಿದರು.

ಭುವನಹಳ್ಳಿಯಲ್ಲಿ ಮಂಗಳವಾರ ಪಂಚಾಯಿತಿ ಕಚೇರಿಯಲ್ಲಿ ಗ್ರಾಮ ಸಭೆ ಹಾಗೂ ಜಮಾಬಂದಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮಸ್ಥರು ಜಮಾಬಂದಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ, ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮತ್ತು ಗ್ರಾಮದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಪಿಡಿಒ ಪರಮೇಶ್ ಮಾತನಾಡಿ, ಗ್ರಾಪಂ ಒಳಪಡುವ ಗ್ರಾಮಗಳಲ್ಲಿ ನರೇಗಾ ಕಾಮಗಾರಿ ಹಾಗೂ 15ನೇ ಹಣಕಾಸಿನ ಯೋಜನೆ ಅಡಿ ಸುಮಾರು ರು. 2.26 ಕೋಟಿ ನಡೆದಿರುವ ಕಾಮಗಾರಿಗಳ ಬಗ್ಗೆ ಹಾಗೂ ಅದರ ಖರ್ಚು ವೆಚ್ಚಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷ ದೇವರಾಜು, ಉಪಾಧ್ಯಕ್ಷ ಮಮತಾ, ಸದಸ್ಯರಾದ ದೀಪು ಗಿರೀಶ್, ನಂದಿನಿ, ಪವಿತ್ರಾ, ಮಂಜು, ಜಗದೀಶ್, ಜ್ಯೋತಿ, ಚಂದ್ರು, ರಮೇಶ್, ಸದಾನಂದ, ತೋಪೆಗೌಡ, ಬಸವರಾಜು, ಸಿಬ್ಬಂದಿ ಶ್ರೀನಿವಾಸ್, ಸತ್ಯರಾಜು, ಜಯಣ್ಣ, ಯೋಗೇಶ್, ಮಧು, ರಾಮ, ಮರಿಕಾಳಯ್ಯ, ಗುರುಮೂರ್ತಿ, ಮುಖಂಡ ಬಿ.ವಿ. ಗಿರೀಶ್ , ಗ್ರಾಮಸ್ಥರು ಭಾಗವಹಿಸಿದ್ದರು.