ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿನಲ್ಲಿ ವಿಶೇಷಚೇತನರ ಗ್ರಾಮಸಭೆ

| Published : Dec 19 2024, 12:31 AM IST

ಸಾರಾಂಶ

2024-25 ನೇ ಸಾಲಿನ ಸ್ವಂತ ನಿಧಿ ಯೋಜನೆಯ ಶೇಕಡ 5ರ ಅನುದಾನದಡಿ ಒಟ್ಟು 52 ವಿಶೇಷ ಚೇತನರಿಗೆ ವೈದ್ಯಕೀಯ ಸಹಾಯ ಧನ ವಿತರಿಸಲಾಯಿತು. ಹಾಗೂ ಮೂಲ್ಕಿ ತಾ.ಪಂ. ಅನುದಾನದಿಂದ 30 ಸಾವಿರ ರು. ಶ್ರವಣ ಸಾಧನ ವನ್ನು ವಿತರಿಸಲಾಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿನ ಸಭಾ ಭವನದಲ್ಲಿ ಜರುಗಿದ ಅತಿಕಾರಿಬೆಟ್ಟು ಗ್ರಾ.ಪಂ.ನ ವಿಶೇಷ ಚೇತನರ ಗ್ರಾಮ ಸಭೆಯಲ್ಲಿ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮೂಲಕ ದೊರಕುವ ವಿವಿಧ ಸವಲತ್ತುಗಳ ಕುರಿತು ಮಂಗಳೂರಿನ ಎಂ ಆರ್‌ ಡಬ್ಲ್ಯೂ ನ ಜಯಪ್ರಕಾಶ್ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ವಹಿಸಿದ್ದರು.

2024-25 ನೇ ಸಾಲಿನ ಸ್ವಂತ ನಿಧಿ ಯೋಜನೆಯ ಶೇಕಡ 5ರ ಅನುದಾನದಡಿ ಒಟ್ಟು 52 ವಿಶೇಷ ಚೇತನರಿಗೆ ವೈದ್ಯಕೀಯ ಸಹಾಯ ಧನ ವಿತರಿಸಲಾಯಿತು. ಹಾಗೂ ಮೂಲ್ಕಿ ತಾ.ಪಂ. ಅನುದಾನದಿಂದ 30 ಸಾವಿರ ರು. ಶ್ರವಣ ಸಾಧನ ವನ್ನು ವಿತರಿಸಲಾಯಿತು.

ಈ ಸಂದರ್ಭ ಪಂಚಾಯಿತಿ ಸದಸ್ಯರಾದ ಪದ್ಮಿನಿ, ಜ್ಯೋತಿ ಆಚಾರ್ತಿ, ಗೀತಾ, ಜಯಕುಮಾರ್, ದಯಾನಂದ, ವಿ ಆರ್ ಡಬ್ಲ್ಯೂಅಶ್ವಿತಾ, ಸಿಬ್ಬಂದಿ ವರ್ಗ ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೈಲಜಾ ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು.