ಸಾರಾಂಶ
ಹಗರಿಬೊಮ್ಮನಹಳ್ಳಿ: ಕೃಷಿಕರಿಗೆ ಕೃಷಿಯೇ ಧರ್ಮವಾಗಬೇಕು. ವಿದ್ಯಾರ್ಥಿಗಳಿಗೆ ಜ್ಞಾನಮಾರ್ಗವೇ ಧರ್ಮವಾಗಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಹರಿಹರ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಪಂಚಮಸಾಲಿ ಭವನದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪಂಚಮಸಾಲಿ ಸಮಾಜ ಕೃಷಿಯನ್ನೇ ನೆಚ್ಚಿ ಜೀವನ ಸಾಗಿಸುತ್ತಿದೆ. ಕ್ರಮಬದ್ಧ ಕೃಷಿಯನ್ನು ಅಳವಡಿಸಿಕೊಂಡು ಪ್ರಗತಿ ಹೊಂದಬೇಕಿದೆ. ಪಂಚಮಸಾಲಿ ಸಮಾಜದ ಸಂಘಟನೆಗಾಗಿ ರಾಜ್ಯಾದ್ಯಂತ ಗ್ರಾಮಸಂಚಾರ ಮಾಡಲಾಗುವುದು. ಪ್ರತಿಯೊಬ್ಬರೂ ತಮ್ಮ ಕಾಯಕಗಳನ್ನು ಪ್ರೀತಿಸುತ್ತಾ ಅದರಲ್ಲಿಯೇ ಅಭಿವೃದ್ಧಿಯನ್ನು ಕಾಣಬೇಕು ಎಂದರು.ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಮಸಾಲಿ ಸಮಾಜ ಪ್ರತಿವರ್ಷ ಸಾಮೂಹಿಕ ವಿವಾಹ ಜತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದೆ. ನೂತನ ವಧುವರರು ಸಮಾಜದಲ್ಲಿ ಸುಸಂಸ್ಕೃತರಾಗಿ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದರು. ಇದೇ ವೇಳೆ ಒಟ್ಟು ೪ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸಮಾಜದ ರಾಜ್ಯ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ್, ವಾಣಿ ನೇಮರಾಜ ನಾಯ್ಕ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ನಿರ್ಮಲ ಮೆಣಸಿಗಿ, ಪ್ರಧಾನ ಕಾರ್ಯದರ್ಶಿ ರುದ್ರಮ್ಮ ಕೊಟ್ರೇಶ್, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಚಡಿ ಕೊಟ್ರೇಶ್, ಜಿಲ್ಲಾ ಕಾರ್ಯದರ್ಶಿ ಪೋಟೋ ವೀರೇಶ್, ತಾಲೂಕು ಅಧ್ಯಕ್ಷೆ ಎಸ್. ಸಂತೋಷ್, ಮುಖಂಡರಾದ ಮಂಜುನಾಥಗೌಡ, ವೈ. ಮಲ್ಲಿಕಾರ್ಜುನ, ಶಿವಶಂಕರಗೌಡ, ವೀರನಗೌಡ ಮೆಣಸಿಗಿ, ವೀರಭದ್ರಗೌಡ, ಯುವರಾಜ ಗಡ್ಡಿ, ಗೌರಜ್ಜನವರ ಗಿರೀಶ್, ಆನೇಕಲ್ ಕೊಟ್ರೇಶ್ ಇತರರಿದ್ದರು. ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಬಸವರಾಜ ಸೊನ್ನದ್, ತಾಲೂಕು ಕಾರ್ಯದರ್ಶಿ ರವೀಂದ್ರಬಾವಿ, ಸಂಚಿ ಶಿವಕುಮಾರ್ ನಿರ್ವಹಿಸಿದರು.