ಸಾರಾಂಶ
ಗ್ರಾಮ ದೇವಿಯು ಕೇವಲ ಒಂದೇ ಸಮಾಜಕ್ಕೆ ಸೀಮಿತವಾಗದೇ ಎಲ್ಲ ಸಮುದಾಯಗಳಿಗೆ ದೇವತೆಯಾಗಿರುವುದರಿಂದ ಎಲ್ಲರೂ ಒಟ್ಟಾಗಿ ಗ್ರಾಮದ ಸಕಲ ಸಂಪ್ರಾದಯಗಳನ್ನು ಪಾಲಿಸಿಕೊಂಡು ನಡೆಸುವಂತೆ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಗುತ್ತಲ: ಗ್ರಾಮ ದೇವಿಯು ಕೇವಲ ಒಂದೇ ಸಮಾಜಕ್ಕೆ ಸೀಮಿತವಾಗದೇ ಎಲ್ಲ ಸಮುದಾಯಗಳಿಗೆ ದೇವತೆಯಾಗಿರುವುದರಿಂದ ಎಲ್ಲರೂ ಒಟ್ಟಾಗಿ ಗ್ರಾಮದ ಸಕಲ ಸಂಪ್ರಾದಯಗಳನ್ನು ಪಾಲಿಸಿಕೊಂಡು ನಡೆಸುವಂತೆ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಸಮೀಪದ ನೆಗಳೂರ ಗ್ರಾಮದ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸಂಜೆ ಜಾತ್ರೆಯ ನಿಮಿತ್ತ ನಡೆದ ಸಭೆಯಲ್ಲಿ ಮಾತನಾಡಿದ ಅವರು ಜಾತ್ರೆ 2025ನೇ ಮೇ 6 ಮತ್ತು 7ರಂದು ಜಾತ್ರೆ ನಡೆಸಲು ತಿರ್ಮಾನಿಸಿದ್ದು, 5 ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವಿಜಾತ್ರೆಯನ್ನು ಅತಿ ವಿಜೃಂಭಣೆಯಿಂದ ನಡೆಸಲು ಗ್ರಾಮದ ಜನತೆ ಉತ್ಸುಕರಾಗಿದ್ದಾರೆ. ಗ್ರಾಮದ ಜನತೆ ತಮ್ಮ ಮನೆಯ ಕಾರ್ಯವೆಂದು ತಿಳಿದುಕೊಂಡು ಪ್ರತಿಯೊಬ್ಬರು ದೇವಿ ಜಾತ್ರೆಯಲ್ಲಿ ಭಾಗವಹಿಸಿ ಸೇವೆ ಸಲ್ಲಿಸಬೇಕು ಎಂದರು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಆಗಬೇಕಾದರೆ ಗ್ರಾಮಗಳ ಜನತೆ ಸಹಕಾರ ಬಹಳ ಮುಖ್ಯ. ಆದ್ದರಿಂದ ಎಲ್ಲರೂ ಸಹಕಾರ ನೀಡಿದಾಗ ಉತ್ತಮ ಕೆಲಸಗಳು ಜರುಗಲು ಸಹಾಯವಾಗುತ್ತದೆ ಆದ್ದರಿಂದ ಎಲ್ಲರೂ ಸಹಕಾರ ನೀಡಬೇಕೆಂದು ತೀರ್ಮಾನಿಸಲಾಯಿತು. ಮುಂದಿನ ಜಾತ್ರೆಯ ಕಾರ್ಯಗಳನ್ನು ಭಕ್ತರಿಗೆ ತಿಳಿಸಲಾಗುವುದು ಎಂದು ತಿಳಿಸಿದರು. ಗ್ರಾಮದ ಹಿರಿಯರಾದ ಕೆ.ಎಮ್. ಮೈದೂರ, ಎಸ್.ಎಮ್. ಸಪ್ಪಿನ, ಅಶೋಕ ತಳವಾರ, ಶಂಭುಲಿಂಗಯ್ಯ ಮಠದ, ಅಶೋಕ ವಿಭೂತಿ, ಶಿವಪ್ಪ ತಾವರೆ, ಸಿದ್ದಪ್ಪ ಬಾಲಣ್ಣನವರ, ಭರಮಣ್ಣ ದೊಡ್ಡಿರಪ್ಪನವರ, ಕುಮಾರ ಮಾಹುರ, ಎಸ್.ಎಸ್. ಬಿಷ್ಠನಗೌಡ್ರ, ಪೊರಪ್ಪ ಗುಂಜಳ, ಶಿದ್ದನಗೌಡ ಬಿಷ್ಠನಗೌಡ್ರ, ಶಂಕರಗೌಡ ಹರಕಂಗಿ, ಬಸವಂತಪ್ಪ ಹಳ್ಳಾಕರ, ಸುರೇಶ ಸಪ್ಪಣ್ಣನವರ, ಕಾಂತರಡ್ಡಿ ಶಟ್ಟೆಪ್ಪನವರ, ಕೆ.ಬಿ. ಚಪ್ಪರದ, ಪುಟ್ಟಪ್ಪ ಮುದಿಯಣ್ಣವರ, ಮಲ್ಲರಡ್ಡಿ ಆನ್ವೇರಿ, ಸುರೇಶರಡ್ಡಿ ಹಾವರಡ್ಡೆರ, ಹುಚ್ಚುಸಾಬ ನದಾಫ, ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮದ ಯುವಕರು, ಮರಡೂರ ಮತ್ತು ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿದ್ದರು.