ಸಾರಾಂಶ
ರಾಮನಗರದ ಶಕ್ತಿ ದೇವತೆ ಶ್ರೀಚಾಮುಂಡೇಶ್ವರಿ ದೇವಿ ಹಾಗೂ ಇತರೆ ದೇವತೆಗಳ ಕರಗ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಜಿಲ್ಲಾ ಕೇಂದ್ರದಲ್ಲಿ ಶಕ್ತಿ ದೇವತೆಗಳ ಘೋಷಣೆ ಎಲ್ಲೆಡೆ ಕೇಳಿ ಬಂದಿತು.
-ಜಿಲ್ಲಾ ಕೇಂದ್ರದಲ್ಲಿ ಎಲ್ಲೆಡೆ ಶಕ್ತಿ ದೇವತೆಗಳ ಘೋಷಣೆ
-ಆಕರ್ಶಿಸಿದ ಕರಗಧಾರಕರು ನೃತ್ಯ ಕನ್ನಡಪ್ರಭ ವಾರ್ತೆ ರಾಮನಗರನಗರದ ಶಕ್ತಿ ದೇವತೆ ಶ್ರೀಚಾಮುಂಡೇಶ್ವರಿ ದೇವಿ ಹಾಗೂ ಇತರೆ ದೇವತೆಗಳ ಕರಗ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಜಿಲ್ಲಾ ಕೇಂದ್ರದಲ್ಲಿ ಶಕ್ತಿ ದೇವತೆಗಳ ಘೋಷಣೆ ಎಲ್ಲೆಡೆ ಕೇಳಿ ಬಂದಿತು. ಶ್ರೀ ಚಾಮುಂಡೇಶ್ವರಿ ಸೇರಿದಂತೆ ಇತರೆ ದೇವತೆಗಳ ದೇವಾಲಯದಲ್ಲಿ ಮಂಗಳವಾರ ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿಯೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಮಡೀ ನೀರು ಕರಗ:ಚಾಮುಂಡೇಶ್ವರಿ, ಕೊಂಕಾಣಿದೊಡ್ಡಿ, ಚಾಮುಂಡಿಪುರ, ಗಾಂಧೀನಗರ ಆದಿಶಕ್ತಿ, ಬಿಸಿಲು ಮಾರಮ್ಮ, ಮುತ್ತುಮಾರಮ್ಮ ಮಗ್ಗದ ಕೆರೆ ಮಾರಮ್ಮ, ಭಂಡಾರಮ್ಮ ದೇವಿಯ ಅವರ ಮಡೀ ನೀರು ಕರಗ ಜರುಗಿತು. ಇನ್ನು ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಇತರೆ ಕಡೆ, ಸರಥಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದುಕೊಂಡರು.
ಕರಗ ನೃತ್ಯ: ತಾಳ ಹಾಗೂ ಲಯ ಬದ್ಧವಾಗಿ ತಮಟೆ, ನಗಾರಿ ಶಬ್ದಕ್ಕೆ ಕರಗಧಾರಕರು ನೃತ್ಯ ಮಾಡುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ಕೆಲವು ಕರಗಗಳು ಗಂಟೆಯ ಶಬ್ದಕ್ಕೆ ನೃತ್ಯ ಮಾಡಿದರೂ, ಮತ್ತೆ ಕೆಲವು ಕಡೇ, ದೇವಿಯ ಆರಾಧನಾ ಕೀರ್ತನೆಗಳು ಹಾಗೂ ಪ್ರಾರ್ಥನೆಗಳಿಂದ ನೃತ್ಯ ಮಾಡಲು ಉರಿದುಂಬಿಸಿದರು.ಪ್ರಸಾದ ವಿನಿಯೋಗ:
ಭಕ್ತರು ಅಲ್ಲಲ್ಲಿ ಪೆಂಡಾಲ್‌ಗಳನ್ನು ನಿರ್ಮಸಿ, ದೇವಾಲಯದ ಆವರಣದಲ್ಲಿಯೂ ಪ್ರಸಾದ ವಿನಿಯೋಗ ಮಾಡಲಾಯಿತು.ಹೂವಿನ ಕರಗ:
ಮಂಗಳವಾರ ರಾತ್ರಿ ಚಾಮುಂಡೇಶ್ವರಿ ಸೇರಿದಂತೆ ಇತರೆ ಶಕ್ತಿ ದೇವತೆಗಳ ಹೂವಿನ ಕರಗ ಅದ್ಧೂರಿಯಾಗಿ ಜರುಗಿತು. ನಗರ ಪ್ರದಕ್ಷಿಣೆ ಹಾಕಿದ ಕರಗಗಳು ದೇವಾಲಯಗಳಲ್ಲಿ ಹಾಗೂ ಭಕ್ತರಿಂದ ಪೂಜೆ ಸ್ವೀಕಾರ ಮಾಡಿತು. ಕೆಲವೆಡೆ ರಸ್ತೆಗೆ ಹೂವಿನಿಂದ ವಿವಿಧ ಬಗೆಯ ರಂಗೋಲೆ ಹಾಕಿ ಕರಗಕ್ಕೆ ಸ್ವಾಗತ ಕೋರಲಾಯಿತು. ಇಡೀ ರಾತ್ರಿ ಪ್ರದಕ್ಷಣೆ ಹಾಕಿ, ಬುಧವಾರ ಬೆಳಗ್ಗೆ ಆಯಾ ದೇವತೆಗಳ ಕರಗಗಳು ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಅಗ್ನಿಕೊಂಡ ಪ್ರವೇಸಿತು.