ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ ಶ್ರಾವಣ ಮಾಸದ 3ನೇ ಸೋಮವಾರದ ಪ್ರಯುಕ್ತ ತಾಲೂಕಿನ ಲಚ್ಯಾಣ ಗ್ರಾಮದ ಸಿದ್ದಲಿಂಗ ಮಹಾರಾಜರ ಮಠದಲ್ಲಿ ಸಿದ್ಧಲಿಂಗ ಮಹಾರಾಜರ ತೊಟ್ಟಿಲೋತ್ಸವ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಶ್ರೀ ಶಂಕರಲಿಂಗ ಮಹಾಶಿವಯೋಗಿಗಳ ಕತೃ ಗದ್ದುಗೆಗೆ, ಸಂಗನಬಸವ ಮಹಾಶಿವಯೋಗಿಗಳ ಶಿಲಾ ಮೂರ್ತಿಗೆ, ಸಿದ್ಧಲಿಂಗ ಮಹಾರಾಜರ ಶಿಲಾಮೂರ್ತಿಗೆ ವಿಶೇಷ ಪೂಜೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಇಂಡಿ
ಶ್ರಾವಣ ಮಾಸದ 3ನೇ ಸೋಮವಾರದ ಪ್ರಯುಕ್ತ ತಾಲೂಕಿನ ಲಚ್ಯಾಣ ಗ್ರಾಮದ ಸಿದ್ದಲಿಂಗ ಮಹಾರಾಜರ ಮಠದಲ್ಲಿ ಸಿದ್ಧಲಿಂಗ ಮಹಾರಾಜರ ತೊಟ್ಟಿಲೋತ್ಸವ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಶ್ರೀ ಶಂಕರಲಿಂಗ ಮಹಾಶಿವಯೋಗಿಗಳ ಕತೃ ಗದ್ದುಗೆಗೆ, ಸಂಗನಬಸವ ಮಹಾಶಿವಯೋಗಿಗಳ ಶಿಲಾ ಮೂರ್ತಿಗೆ, ಸಿದ್ಧಲಿಂಗ ಮಹಾರಾಜರ ಶಿಲಾಮೂರ್ತಿಗೆ ವಿಶೇಷ ಪೂಜೆ ನಡೆಸಲಾಯಿತು. ಸಂಜೆ ಸ್ಥಳೀಯ ಸದ್ಭಕ್ತರಾದ ಮಲ್ಲಿಕಾರ್ಜುನ ಮುಜಗೊಂಡ ಮನೆತನದವರಿಂದ ಸಂಪ್ರದಾಯದಂತೆ ತೊಟ್ಟಿಲು ಸೇವೆ ನಡೆಸಲಾಯಿತು. ಮುಜಗೊಂಡ ಅವರ ಮನೆಯಿಂದ ಮಠದ ವರೆಗೆ ಶ್ರೀ ಸಿದ್ಧಲಿಂಗ ಮಹಾರಾಜರ ಬೆಳ್ಳಿಯ ಮೂರ್ತಿಯ ಮೆರವಣಿಗೆಯು ಕಕ್ಕಳಮೇಲಿಯ ಭಜನಾ ಕಲಾತಂಡ, ಸ್ಥಳೀಯ ಭಜನಾ ಕಲಾ ತಂಡಗಳ ವಾದ್ಯ ಮೇಳದೊಂದಿಗೆ ಅದ್ಧೂರಿಯಾಗಿ ನಡೆಯಿತು.ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶ ಡಾ.ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಹಳಿಂಗಳಿಯ ಶಿವಾನಂದ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ತೊಟ್ಟಿಲೋತ್ಸವ ಮಠದಲ್ಲಿ ಸಂಪ್ರದಾಯದಂತೆ ಅಕ್ಕನ ಬಳಗದವರ ಜೋಗುಳ ಪದದೊಂದಿಗೆ ಸಂಭ್ರಮದಿಂದ ನೆರವೇರಿತು. ಈ ಸಂದರ್ಭದಲ್ಲಿ ಸ್ಥಳೀಯ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ತೊಟ್ಟಿಲು ಸೇವೆ ಸಲ್ಲಿಸಿದರು.