ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಭಾನುವಾರ (ಸೆ.೨೩) ಶ್ರೀಪಡುವಲಬಾಗಿಲು ಆಂಜನೇಯಸ್ವಾಮಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯನ್ನು ಅದ್ಧೂರಿಯಾಗಿ ವಿಸರ್ಜಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.ನಗರದ ಬಂದೀಗೌಡ ಬಡಾವಣೆಯಲ್ಲಿರುವ ಶಾಸಕರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂದು ಸಂಜೆ ೫ ಗಂಟೆಗೆ ನಗರದ ಶ್ರೀಕಾಳಿಕಾಂಬ ದೇಗುಲದಿಂದ ಕೆರಗೋಡು ಗ್ರಾಮದವರೆಗೆ ನೂರಾರು ಬೈಕ್‌ಗಳಲ್ಲಿ ಜಾಥಾ ನಡೆಸಲಾಗುವುದು. ರಾಜ್ಯದ ನಂ.೧ ಡಿಜೆ ಹಾಗೂ ಹಲವಾರು ಜಾನಪದ ಕಲಾತಂಡಗಳೊಂದಿಗೆ ಭವ್ಯ ಮೆರಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
ಗಣೇಶ ಮೂರ್ತಿಯನ್ನು ೪೮ ದಿನಗಳವರೆಗೆ ಪ್ರತಿಷ್ಠಾಪಿಸಿ ಈಗ ಅದನ್ನು ವಿಸರ್ಜನೆ ಮಾಡಲಾಗುತ್ತಿದೆ. ನಾವೆಲ್ಲರೂ ಹಿಂದೂ-ನಾವೆಲ್ಲರೂ ಒಂದು ಎನ್ನುವುದು ನಮ್ಮ ಘೋಷವಾಕ್ಯವಾಗಿದೆ. ಇದೊಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವನ್ನಾಗಿ ಆಚರಿಸುತ್ತಿದ್ದೇವೆ. ಇದರ ಹಿಂದೆ ರಾಜಕೀಯ ದುರುದ್ದೇಶವಿಲ್ಲ ಎಂದರು.ದೇವರನ್ನು ಬೀದಿಗೆ ಇಳಿಸಿ ರಾಜಕಾರಣ ಮಾಡುವವರು ನಾವಲ್ಲ. ಅದೇನಿದ್ದರೂ ಬಿಜೆಪಿ-ಜೆಡಿಎಸ್ ಸಂಸ್ಕೃತಿ. ನಾವೂ ಕೂಡ ನಿತ್ಯ ದೇವಸ್ಥಾನಕ್ಕೆ ಹೋಗುತ್ತೇವೆ. ಆದರೆ, ದೇವರ ಹೆಸರಿನಲ್ಲಿ ರಾಜಕಾರಣ ಮಾಡುವುದಿಲ್ಲ. ಎಲ್ಲಿಂದಲೋ ಜನರನ್ನು ಕರೆಸಿ ಬಾಯಿಗೆ ಬಂದಂತೆ ಇನ್ನೊಂದು ಪಕ್ಷವನ್ನು ತೆಗಳುತ್ತಿದ್ದರೆ ಸುಮ್ಮನೆ ನೋಡಿಕೊಂಡಿರುವುದಿಲ್ಲ ಎಂದು ಛಾಟಿಬೀಸಿದರು.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸುತ್ತಿರುವವರಿಗೆ ಅದರ ಮೂಲಕವೇ ಉತ್ತರ ಕೊಡಲು ನಿರ್ಧರಿಸಿದ್ದೇವೆ. ಈ ಕಾರ್ಯಕ್ರಮಕ್ಕೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭಾಗವಹಿಸಲಿದ್ದಾರೆ. ಅಂದು ಕೆರಗೋಡಿನಲ್ಲಿ ವೇದಿಕೆ ಕಾರ್ಯಕ್ರಮ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಮಂಡ್ಯ: ಕರ್ನಾಟಕ ಸಂಘದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮರಂಭ ಭಾನುವಾರ (ನ.23) ಬೆಳಗ್ಗೆ 11 ಗಂಟೆಗೆ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ನಡೆಯಲಿದೆ. ಸಮಾಜಸೇವಾ ಕ್ಷೇತ್ರದಿಂದ ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್, ಸದಸ್ಯರಾದ ಬಿ.ಟಿ.ಪುಟ್ಟರಾಜು ಬೆಳ್ತೂರು, ಜಯಮ್ಮ ಕಾಗೆಹಳ್ಳದ ದೊಡ್ಡಿ ಅವರಿಗೆ ರಂಗಭೂಮಿ ಕ್ಷೇತ್ರದಿಂದ ನೀಡಲಾಗುತ್ತಿದೆ. ಅಧ್ಯಕ್ಷತೆಯನ್ನು ಎಸ್.ಬಿ.ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ವಹಿಸುವರು. ಉದ್ಘಾಟನೆಯನ್ನು ಪ್ರಸಿದ್ಧ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ನೆರವೇರಿಸುವರು. ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಕೆ.ದೇವೇಗೌಡ, ಪರಿಸರ ಎಂಜಿನಿಯರಿಂಗ್ ಸಂಘದ ಅಧ್ಯಕ್ಷ ಡಾ.ಕೆ.ಸಿ.ಜಯರಾಮು ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿ ಪುರಸ್ಕೃತರ ಕುರಿತು ಮಹಿಳಾ ಸರ್ಕಾರಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಗುರುರಾಜ ಪ್ರಭು ಮಾತನಾಡುವರು.ಕೊತ್ತತ್ತಿ ಜವರೇಗೌಡ (ಶಿಕ್ಷಣ), ಡಾ.ಸಿ.ಮಹದೇವ, ಪ್ರೊ.ನರಸಿಂಹೇಗೌಡ, ಸಾತನೂರು ದೇವರಾಜು, ಮಹಮದ್ ಕಲೀಂಉಲ್ಲಾ ಅವರಿಗೆ ಸಾಹಿತ್ಯ ಕ್ಷೇತ್ರದಿಂದ ಪ್ರಶಸ್ತಿ ನೀಡಲಾಗುತ್ತಿದೆ.ಇಂದು ಕೃಷಿಕ ಅಲಯನ್ಸ್ ಕ್ಲಬ್‌ನಿಂ ಕನ್ನಡ ಹಬ್ಬ
ಮಂಡ್ಯ: ಕೃಷಿಕ ಅಲಯನ್ಸ್ ಕ್ಲಬ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಪ್ರತಿಭಾಂಜಲಿ ಅಲಯನ್ಸ್ ಕ್ಲಬ್, ಸ್ನೇಹಜೀವಿ ಗೆಳೆಯರ ಬಳಗದಿಂದ ೭೦ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಲಯನ್ಸ್ ಕನ್ನಡ ಹಬ್ಬ- ಕನ್ನಡೋತ್ಸವ ಕಾರ್ಯಕ್ರಮವನ್ನು ವಿ.ವಿ.ನಗರ ೨೫ನೇ ಕ್ರಾಸ್‌ನ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕೆ.ಟಿ.ಹನುಮಂತು ಹೇಳಿದ್ದಾರೆ.ಸಂಜೆ ೬.೩೦ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಝೀ-ಕನ್ನಡ ಸರಿಗಮಪ ಖ್ಯಾತಿಯ ಚಿಕ್ಕಮಗಳೂರಿನ ಸಾದ್ವಿನಿ ಕೊಪ್ಪ, ಡೇವಿಡ್ ಪ್ರತಿಭಾಂಜಲಿ, ದಿಶಾ ಎಸ್.ಜೈನ್, ಹಂಸರೇಖ, ಸಿಂಧುಶ್ರೀ, ವಿಶ್ವಾಸ್, ಕರಣ್ ಹಾಗೂ ಪ್ರತಿಭಾಂಜಲಿ ಗಾಯಕರಿಂದ ಗಾಯನ ಏರ್ಪಡಿಸಲಾಗಿದೆ. ಬೆಂಗಳೂರಿನ ದಿವ ತಂಡದಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))