ಟಿ.ಎಸ್.ಛತ್ರ ಗ್ರಾಮಸ್ಥರಿಂದ ಅದ್ಧೂರಿ ಹುಲಿವಾಹನೋತ್ಸವ ಮೆರವಣಿಗೆ

| Published : Nov 05 2024, 12:31 AM IST / Updated: Nov 05 2024, 12:32 AM IST

ಟಿ.ಎಸ್.ಛತ್ರ ಗ್ರಾಮಸ್ಥರಿಂದ ಅದ್ಧೂರಿ ಹುಲಿವಾಹನೋತ್ಸವ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹದೇಶ್ವರಪುರ ಗ್ರಾಮದ ಶ್ರೀಮಹದೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸುತ್ತಮುತ್ತಲಿನ ಗ್ರಾಮಸ್ಥರು ಒಂದೊಂದು ದಿನ ಹುಲಿವಾಹನೋತ್ಸವ ಅದ್ಧೂರಿಯಾಗಿ ಮೆರವಣಿಗೆ ನಡೆಸುವ ಹಿನ್ನೆಲೆಯಲ್ಲಿ ಟಿ.ಎಸ್.ಛತ್ರ ಗ್ರಾಮಸ್ಥರು ಇಂದು ವಿವಿಧ ಕಲಾತಂಡಗಳೊಂದಿಗೆ ಹುಲಿವಾಹನೋತ್ಸವವನ್ನು ಮೆರವಣಿಗೆ ಮೂಲಕ ದೇವಸ್ಥಾನದ ಬಳಿಗೆ ತೆಗೆದುಕೊಂಡು ಹೋಗಲಾಯಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ದೀಪಾವಳಿ ಹಬ್ಬದ ಅಂಗವಾಗಿ ಟಿ.ಎಸ್.ಛತ್ರ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಅದ್ಧೂರಿಯಾಗಿ ಹುಲಿವಾಹನೋತ್ಸವ ಮೆರವಣಿಗೆ ನಡೆಸಲಾಯಿತು.

ಮಹದೇಶ್ವರಪುರ ಗ್ರಾಮದ ಶ್ರೀಮಹದೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸುತ್ತಮುತ್ತಲಿನ ಗ್ರಾಮಸ್ಥರು ಒಂದೊಂದು ದಿನ ಹುಲಿವಾಹನೋತ್ಸವ ಅದ್ಧೂರಿಯಾಗಿ ಮೆರವಣಿಗೆ ನಡೆಸುವ ಹಿನ್ನೆಲೆಯಲ್ಲಿ ಟಿ.ಎಸ್.ಛತ್ರ ಗ್ರಾಮಸ್ಥರು ಇಂದು ವಿವಿಧ ಕಲಾತಂಡಗಳೊಂದಿಗೆ ಹುಲಿವಾಹನೋತ್ಸವವನ್ನು ಮೆರವಣಿಗೆ ಮೂಲಕ ದೇವಸ್ಥಾನದ ಬಳಿಗೆ ತೆಗೆದುಕೊಂಡು ಹೋಗಲಾಯಿತು.

ಟಿ.ಎಸ್.ಛತ್ರ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹುಲಿವಾಹನೋತ್ಸವಕ್ಕೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದರು. ಬಳಿಕ ಗ್ರಾಮಸ್ಥರು ಹುಲಿವಾಹನೋತ್ಸವಕ್ಕೆ ಭಕ್ತಿಭಾವದಿಂದ ಪೂಜೆಸಲ್ಲಿಸಿದರು. ಗ್ರಾಮದ ಯುವಕರು ಅದ್ದೂರಿಯಾಗಿ ಹುಲಿವಾಹನವನ್ನು ಮೆರವಣಿಗೆ ನಡೆಸಿದರು.

ಹುಲಿವಾಹನಕ್ಕೆ ಭಕ್ತರು, ಸಾರ್ವಜನಿಕರು ಕಡಲೆಪುರಿ, ಹಣ್ಣು-ಜವನ ಎಸೆದು ಉಘೇ ಮಾದಪ್ಪ... ಉಘೇ ಮಾದಪ್ಪ ಎಂಬ ಘೋಷಣೆ ಮೊಗಳಿಸಿ ಭಕ್ತಿಭಾವ ಪ್ರದರ್ಶಿಸಿದರು. ನಂತರ ಟಿ.ಎಸ್.ಛತ್ರ ಗ್ರಾಮದಿಂದ ಮಹದೇಶ್ವರಪುರ ಗ್ರಾಮದ ಮಹದೇಶ್ವರ ದೇವಸ್ಥಾನದವರೆಗೂ ವೀರಗಾಸೆ, ಚಂಡೆವೇಳ, ತಮಟೆ, ಪೂಜಾಕುಣಿತ ಸೇರಿದಂತೆ ನೃತ್ಯ ತಂಡ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಿದರು. ಮಹದೇಶ್ವರ ದೇವಸ್ಥಾನದ ಬಳಿಯೂ ಅದ್ಧೂರಿ ಮೆರವಣಿಗೆ ನಡೆಸಿದರು.

ಈ ವೇಳೆ ಟಿ.ಎಸ್.ಛತ್ರ ಗ್ರಾಮಸ್ಥರು, ಯಜಮಾನರು, ಯುವಕರು ಭಾಗವಹಿಸಿದ್ದರು.ಕುನಾಲ್‌ಗೆ ತಾಲೂಕು ಆಡಳಿತದ ವತಿಯಿಂದ ಸನ್ಮಾನ

ಪಾಂಡವಪುರ:

ಚಿತ್ರನಟ ದಿ.ಡಾ.ಪುನೀತ್‌ರಾಜ್‌ಕುಮಾರ್ ಸ್ಮರಣಾರ್ಥ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ 7ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪಟ್ಟಣದ ಎಲ್‌ಕೆಆರ್ ವಿದ್ಯೆಸಂಸ್ಥೆ 9 ನೇ ತರಗತಿ ವಿದ್ಯಾರ್ಥಿ ಬಿ.ಎಲ್. ಕುನಾಲ್ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತಂದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ತಹಸೀಲ್ದಾರ್ ಸಂತೋಷ್ ಹಾಗೂ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ಕಸಾಪ ತಾಲೂಕು ಮೇಣಾಗರ ಪ್ರಕಾಶ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿಬಾಬು, ಉಪಾಧ್ಯಕ್ಷ ಅಶೋಕ್‌, ಬಿ.ಎಲ್‌.ಕುನಾಲ್‌ ತಂದೆ ಬಿ.ಜೆ.ಲೊಕೇಶ್ ಪಟ್ಟಣದ ಪೇಟೆ ಬೀದಿಯಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡು ಪತ್ನಿ ಲಕ್ಷ್ಮಿ ಅವರೊಂದಿಗೆ ಜೀವನ ನಡೆಸುತ್ತಿದ್ದಾರೆ. ಯೋಗ ಕಲಿಸಿದ ಗುರು ಪ್ರಿಯಾ ಎನ್. ಅವರನ್ನು ಸ್ಮರಿಸಿದ್ದಾರೆ.