ಪಟ್ಟಣದ ಮಾರಿಕೊಪ್ಪ ರಸ್ತೆಯ ಪೇಟೆ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀವೀರಭದ್ರೇಶ್ವರ ಸ್ವಾಮಿಯ 19ನೇ ವರ್ಷದ ಸೆರಬಿ ಗುಗ್ಗಳ ದಾವಣಗೆರೆ ಜಗದೀಶ ಸಂಗಡಿಗರಿಂದ ಪುರುವಂತಿಕೆ ಹೇಳುವ ಮೂಲಕ ಪಟ್ಟಣದ ರಾಜಬೀದಿಗಳಲ್ಲಿ ಮಂಗಳವಾರ ಮಂಗಳವಾದ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಮಾರಿಕೊಪ್ಪ ರಸ್ತೆಯ ಪೇಟೆ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀವೀರಭದ್ರೇಶ್ವರ ಸ್ವಾಮಿಯ 19ನೇ ವರ್ಷದ ಸೆರಬಿ ಗುಗ್ಗಳ ದಾವಣಗೆರೆ ಜಗದೀಶ ಸಂಗಡಿಗರಿಂದ ಪುರುವಂತಿಕೆ ಹೇಳುವ ಮೂಲಕ ಪಟ್ಟಣದ ರಾಜಬೀದಿಗಳಲ್ಲಿ ಮಂಗಳವಾರ ಮಂಗಳವಾದ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.ಮಂಗಳವಾರ ಬೆಳಿಗ್ಗೆ ಶ್ರೀವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಅಷ್ಟೋತ್ತರ ನಾಮಾವಳಿ ಧಾರ್ಮಿಕ ವಿಧಿ ವಿದಾನಗಳ ಮೂಲಕ ನೆರವೇರಿತು.
ಗುಗ್ಗಳ ಮೆರವಣಿಗೆ ನಂತರ ನಾನಾ ಭಾಗಗಳಿಂದ ಬಂದಂತಹ ಭಕ್ತ ಸಮೂಹಕ್ಕೆ ಸಾಮೂಹಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.ಸಂಜೆ 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಶ್ರೀವೀರಭದ್ರೇಶ್ವರ ಕಾರ್ತಿಕೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಹಿರೇಕಲ್ಮಠದ ಲಿಂ.ಒಡೆಯರ ಚಂದ್ರೇಶೇಖರ ಸ್ವಾಮೀಜಿ ಕೃಪಾರ್ಶಿವಾದದೊಂದಿಗೆ ದಿವ್ಯ ಸಾನ್ನಿದ್ಯ ಡಾ. ಒಡೆಯರ ಚನ್ನಮಲ್ಲಿಕಾರ್ಜ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು, ಹಾಗೂ ಪೂಜಾ ಕೈಂಕರ್ಯಗಳನ್ನು ಹಿರೇಕಕಲ್ಮಠದ ಪ್ರಧಾನ ಪುರೋಹಿತರಾದ ಅನ್ನದಾನಯ್ಯ ಶಾಸ್ತ್ರಿ ,ನಿಜಗುಣಶಿವಯೋಗಸ್ವಾಮಿ,ಬೆನಕಯ್ಯಶಾಸ್ತ್ರಿ, ಪ್ರಕಾಶಯ್ಯ ಶಾಸ್ತ್ರಿ, ಉದಯ ಎಂ.ಸ್ವಾಮಿ, ಪ್ರಧಾನ ಅರ್ಚಕ ಕುಮಾರ್ ಪೂಜಾರ್ ನಡೆಸಿಕೊಟ್ಟರು. ಈ ಸೆರಬಿ ಗುಗ್ಗಳ ಮತ್ತು ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ನೂರಾರು ಭಕ್ತರು ಭಾಗವಹಿಸಿದರು.
ದೇವಸ್ಥಾನ ಸಮಿತಿಯಿಂದ ಸಂಜೆ ಕಾರ್ತಿಕೋತ್ಸವ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ನೂರಾರು ಪುರುಷರು, ಮಕ್ಕಳು, ಮಹಿಳೆಯರು ದೇವಸ್ಥಾನ ಮುಂಭಾಗ ದೀಪಗಳನ್ನು ಅಚ್ಚಿ ತಮ್ಮ ಭಕ್ತಿ ಸಮರ್ಪಸಿದರು.