ಶೀಘ್ರದಲ್ಲಿಯೇ ಪೂರ್ವಭಾವಿ ಸಭೆ ಮಾಡಿ ಪಟ್ಟಣದ ಎಲ್ಲ ಹಿರಿಯರು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳು, ವ್ಯಾಪಾರಸ್ಥರು, ಗಣ್ಯರೊಂದಿಗೆ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಲಾಗುವುದು.

ಮುಂಡರಗಿ: ನಾನಾ ಕಾರಣಗಳಿಂದ ಕಳೆದ 15 ವರ್ಷಗಳಿಂದ ಮುಂಡರಗಿ ಉತ್ಸವ ಮಾಡಲು ಆಗಿಲ್ಲ. ಅನ್ನದಾನೀಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ 2011ರಲ್ಲಿ ಅದ್ಧೂರಿಯಾಗಿ ಆಚರಿಸಲಾಗಿತ್ತು. ಬರುವ ನವೆಂಬರ್‌ನಲ್ಲಿ ಅದ್ಧೂರಿಯಾಗಿ ಮುಂಡರಗಿ ಉತ್ಸವ ಮಾಡಲು ನಿರ್ಧರಿಸಲಾಗಿದೆ ಎಂದು ಉತ್ಸವ ಸಮೀತಿ ಅಧ್ಯಕ್ಷ ವೈ.ಎನ್. ಗೌಡರ್ ತಿಳಿಸಿದರು.

ಬುಧವಾರ ಪಟ್ಟಣದ ಬೃಂದಾವನ ವೃತ್ತದಲ್ಲಿ 16ನೇ ವರ್ಷದ ಸಾಂಕೇತಿಕ ಮುಂಡರಗಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶೀಘ್ರದಲ್ಲಿಯೇ ಪೂರ್ವಭಾವಿ ಸಭೆ ಮಾಡಿ ಪಟ್ಟಣದ ಎಲ್ಲ ಹಿರಿಯರು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳು, ವ್ಯಾಪಾರಸ್ಥರು, ಗಣ್ಯರೊಂದಿಗೆ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಲಾಗುವುದು. ಈ ಹಿಂದೆ ಉತ್ಸವ ಮಾಡಿದಾಗ ಎಲ್ಲ ವ್ಯಾಪಾರಸ್ಥರೂ ಸಹಕರಿಸಿದ್ದರು. ಈಗಲೂ ಎಲ್ಲರ ಸಹಕಾರದೊಂದಿಗೆ ಯಶಸ್ಸಿಯಾಗಿ ಮುಂಡರಗಿ ಉತ್ಸವ ಆಚರಿಸೊಣ ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ನಾಡಿನ ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯಕ್ಕಾಗಿ ದುಡಿದ, ಮಡಿದು ನಾಡಿಗೆ ಕೀರ್ತಿ ತಂದಿರುವ ವೀರರ ಸ್ಮರಣೆಗಾಗಿ ಮುಂಡರಗಿ ಉತ್ಸವ ಮಾಡುವುದು ಅವಶ್ಯ. ಸಾಂಕೇತಿಕವಾಗಿ ಮಾಡುವ ಬದಲು ಪ್ರತಿವರ್ಷ ಅದ್ಧೂರಿ, ಅಚ್ಚುಕಟ್ಟಾಗಿ ಮಾಡುವುದು ಸೂಕ್ತ. ಅದಕ್ಕಾಗಿ ಎಲ್ಲರೂ ಸನ್ನದ್ಧರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವಿ.ಎಲ್. ನಾಡಗೌಡ್ರ, ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಬಸರಾಜ ರಾಮೇನಹಳ್ಳಿ, ಎ.ಎಸ್. ಮಕಾಂದಾರ, ಮಂಜುನಾಥ ಇಟಗಿ, ಕೊಟ್ರೇಶ ಅಂಗಡಿ, ಡಿ.ಎಂ. ನಾಗಹಳ್ಳಿ, ಕಾಶೀನಾಥ ಶಿರಬಡಗಿ, ದೇವು ಹಡಪದ, ಶಿವಕುಮಾರ ಕುರಿ, ವಿ.ಎಸ್. ಘಟ್ಟಿ, ರುದ್ರಗೌಡ ಪಾಟೀಲ, ಶೇಖರ ಜುಟ್ಲನ್ನವರ, ಪ್ರಶಾಂತ ಗುಡದಪ್ಪನವರ, ಚಿನ್ನಪ್ಪ ವಡ್ಡಟ್ಟಿ, ಶಿವನಗೌಡ ಗೌಡ್ರ, ಆನಂದ ರಾಮೇನಹಳ್ಳಿ, ಆನಂದಗೌಡ ಪಾಟೀಲ ಮುಂಡವಾಡ, ಸುಭಾಸ ಗುಡಿಮನಿ, ಅಡಿವೆಪ್ಪ ಛಲವಾದಿ, ಗುಡದಪ್ಪ ದೇಸಾಯಿ, ಗುರುರಾಜ ಜೋಶಿ, ಸುರೇಶ ಬಾರಿಗಿಡದ, ಬುಟ್ಟು ಹೊಸಮನಿ, ರಾಜಾಭಕ್ಷಿ ಬೆಟಗೆರಿ, ಬಸವರಾಜ ದೇಸಾಯಿ, ಮಂಜುನಾಥ ಮುಧೋಳ, ಪವಿತ್ರ ಕಲ್ಲಕುಟಗರ್, ವೀಣಾ ಬೂದಿಹಾಳ, ಅರುಣಾ ಪಾಟೀಲ ಉಪಸ್ಥಿತರಿದ್ದರು.