ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಕಣ್ವಮಠದ ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳ 7ನೇ ಚಾತುರ್ಮಾಸ್ಯ ಮಹೋತ್ಸವ ಮುದ್ದೇಬಿಹಾಳದಲ್ಲಿ ಶನಿವಾರ ಪ್ರಾರಂಭಗೊಂಡಿತು.

ಈ ನಿಮಿತ್ತ ಶನಿವಾರ ಸುಕ್ಷೇತ್ರ ಯಲಗೂರ ಕೃಷ್ಣಾನದಿ ತೀರದಲ್ಲಿ ಶ್ರೀಗಳ ದಂಡೋದಕ ಸ್ನಾನ ಜರುಗಿತು. ನಂತರ ಮುದ್ದೇಬಿಹಾಳದಲ್ಲಿ ಶೋಭಾಯಾತ್ರೆ ಅಸಂಖ್ಯಾತ ಭಕ್ತಾಧಿಗಳೊಂದಿಗೆ ಜರುಗಿತು.

ಸ್ಥಳೀಯ ಗುರು ರಾಘವೇಂದ್ರ ಮಠದಲ್ಲಿ ರಾಘವೇಂದ್ರ ಸ್ವಾಮೀಜಿಗಳ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಪ್ರಾರಂಭಗೊಂಡ ಶೋಭಾಯಾತ್ರೆ ವಿವಿಧ ವಾಧ್ಯ ವೈಭವಗಳೊಂದಿಗೆ ಕಣ್ವಮಠಾಧೀಶರಾದ ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳನ್ನು ಅಶ್ವಮೇಧ ರಥದಲ್ಲಿ ಕೂಡ್ರಿಸಿಕೊಂಡು ಪಟ್ಟಣದ ಪ್ರಮುಖ ರಸ್ತೆಗಳಾದ ಸಂಗೊಳ್ಳಿ ರಾಯಣ್ಣ ಸರ್ಕಲ್, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸರ್ಕಲ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಸ್ತೆಗುಂಟ ಹಾಯ್ದು ಮಾರುತಿ ನಗರದಲ್ಲಿರುವ ಶಿವಚಿದಂಬರೇಶ್ವರ ದೇವಸ್ಥಾನದವರೆಗೆ ಜರುಗಿತು.

ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಮಹಿಳಾ ಮಂಡಳದವರಿಂದ ಭಕ್ತಿಗೀತೆ, ಭಜನಾ ಪದ, ಕೋಲಾಟ ಜರುಗಿದವು.


ರಾಘವೇಂದ್ರ ಆಲಗೂರ (ಕಣ್ವಮಠಾಧ್ಯಕ್ಷರು), ಶ್ರೀ ಕೃಷ್ಣಕುಮಾರ (ವಿಶೇಷ ಕರ್ತವ್ಯ ಅಧಿಕಾರಿ ಬೆಂಗಳೂರು), ಗುಂಡಭಟ್ಟ ಜೋಶಿ, ಶಂಕರಭಟ್ಟ ಜೋಶಿ, ವೆಂಕಟೇಶಾಚಾರ್ಯ ಗ್ರಾಮಪುರೋಹಿತ (ತಾಳಿಕೋಟಿ), ವಿನಾಯಕರಾವ ಕುಲಕರ್ಣಿ, ಅನೀಲ್ ಕುಲಕರ್ಣಿ, ಗುಂಡಭಟ್ಟ ಜೋಶಿ (ಕಾಳಗಿ), ಬಾಪುರಾವ ದೇಸಾಯಿ (ಹಡಗಲಿ), ಕೃಷ್ಣಾಜಿ ಕುಲಕರ್ಣಿ (ಬಳಬಟ್ಟಿ), ಪುಟ್ಟು ಕುಲಕರ್ಣಿ, ಪ್ರಕಾಶ ಸರಾಫ್, ಮುರಹರಿ ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ (ಆಲೂರ), ಶೇಷಗಿರಿರಾವ್ ದೇಸಾಯಿ, ಅರವಿಂದ ದೇಶಪಾಂಡೆ, ಅಣ್ಣಾರಾವ್ ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ (ರೂಢಗಿ), ಮುರಹರಿ ದೇಶಪಾಂಡೆ, ಅರವಿಂದ ದೇಶಪಾಂಡೆ, ಅಣ್ಣಾರಾವ್ ದೇಶಪಾಂಡೆ, ರಂಗೋತ್ತಮ ಪಾಟೀಲ, ಕೆ.ಬಿ. ದೇಶಪಾಂಡೆ, ಅನಂತ ಕುಲಕರ್ಣಿ, ನಾಗರಾಜ ಕುಲಕರ್ಣಿ, ವಿನಾಯಕರಾವ್ ಕುಲಕರ್ಣಿ, ಸುಭಾಸ ಕುಲಕರ್ಣಿ, ಸುರೇಶ ಕುಲಕರ್ಣಿ, ಬಸವಂತ್ರಾಯ ಕುಲಕರ್ಣಿ, ನಾರಾಯಣ ಕುಲಕರ್ಣಿ, ಭೀಮರಾವ ದೇಸಾಯಿ, ಬಾಗ್ಯಶ್ರೀ ಕುಲಕರ್ಣಿ, ಸುಮಾ ಕುಲಕರ್ಣಿ, ಗೀತಾ ಜಾಗೀರದಾರ, ಲಕ್ಷ್ಮೀ ಕುಲಕರ್ಣಿ, ಸವಿತಾ ಕುಲಕರ್ಣಿ, ಕವಿತಾ, ನಂದು ಕುಲಕರ್ಣಿ(ಸರಪೂರ) ಚಾತುರ್ಮಾಸ್ಯ ಸೇವಾ ಕಾರ್ಯಕಾರಿ ಮಂಡಳಿ, ಗೌರವಾನ್ವಿತ ಮಾರ್ಗದರ್ಶಕರು, ಹಾಗೂ ಯುವಕ ಮಂಡಳಿಯವರು ಪಾಲ್ಗೊಂಡಿದ್ದರು.

58 ವರ್ಷಗಳ ಬಳಿಕ ಚಾತುರ್ಮಾಸ್ಯ :

ಮುದ್ದೇಬಿಹಾಳ ಪಟ್ಟಣದಲ್ಲಿ ಸುಮಾರು 58 ವರ್ಷಗಳ ಹಿಂದೆ ಹುಣಶಿಹೊಳೆ ಕಣ್ವಮಠದ ವಿದ್ಯಾತಪೋನಿಧಿ ತೀರ್ಥರು ಚಾತುರ್ಮಾಸ್ಯ ಅನುಷ್ಠಾನ ಕೈಗೊಂಡಿದ್ದರು. 1968ರ ಜು.30 ರಿಂದ ಆ.25ರವರೆಗೆ ಆಗಿನ ಚಾತುರ್ಮಾಸ್ಯ ಕಿಲ್ಲಾಗಲ್ಲಿಯಲ್ಲಿದ್ದ ಖಾದಿ ಗ್ರಾಮೋದ್ಯೋಗ ನೂಲುವ ಕಟ್ಟಡದಲ್ಲಿ ರಾಮರಾವ ಸಾಲವಾಡಗಿ, ಮಾಧವರಾಜ ಸಾಲವಾಡಗಿ, ಬಾಬುರಾವ ಕುಲಕರ್ಣಿ, ರಂಗರಾಜ ದೊಡ್ಡಿಹಾಳ, ವೆಂಕಪ್ಪಚಾರ್ಯ ಪುರಾಣಿಕ, ಶ್ಯಾಮರಾವ ಕುಲಕರ್ಣಿ, ವಿಠ್ಠಲರಾವ ಕುಲಕರ್ಣಿ, ನೀಲಕಂಠರಾವ ಜಹಾಗೀರದಾರ, ನರಸಿಂಹಾಚಾರ್ಯ ಜೋಷಿ ಅವರ ನೇತೃತ್ವದಲ್ಲಿ ಚಾತುರ್ಮಾಸ್ಯ ವ್ರತವನ್ನು ಆಚರಿಸಲಾಗಿತ್ತು.