ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಅಂಗವಾಗಿ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ನೇತೃತ್ವದಲ್ಲಿ ಬುಧವಾರ ಮಣಿಪಾಲದಲ್ಲಿ ‘ತಿರಂಗಾ ಯಾತ್ರೆ’ ಜರುಗಿತು.
ಮಣಿಪಾಲ: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಅಂಗವಾಗಿ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ನೇತೃತ್ವದಲ್ಲಿ ಬುಧವಾರ ಮಣಿಪಾಲದಲ್ಲಿ ‘ತಿರಂಗಾ ಯಾತ್ರೆ’ ಜರುಗಿತು. ಈ ಕಾರ್ಯಕ್ರಮದಲ್ಲಿ ಉಡುಪಿಯ ವಿವಿಧ ಸಂಸ್ಥೆಗಳ ಪ್ರಮುಖರು, ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಣಿಪಾಲದ ಗೋಲ್ಡನ್ ಜುಬಿಲಿ ಹಾಲ್ ಸಮೀಪವಿರುವ ಕೆನರಾ ಬ್ಯಾಂಕ್ ವೃತ್ತ ಕಚೇರಿ ಬಳಿ ತ್ರಿವರ್ಣ ಧ್ವಜ ಪ್ರದರ್ಶಿಸುವ ಮೂಲಕ ಶಾಸಕ ಯಶ್‌ಪಾಲ್ ಸುವರ್ಣ ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ಇಲ್ಲಿ ಮುಖ್ಯ ಆಹ್ವಾನಿತರಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಸ್ವಾತಂತ್ರ್ಯದ ಮೌಲ್ಯ ಹಾಗೂ ದೇಶಭಕ್ತಿಯ ಮಹತ್ವವನ್ನು ವಿವರಿಸಿದರು.ನಂತರ ನೂರಾರು ಬೃಹತ್ ತಿರಂಗಗಳ ಯಾತ್ರೆಯು ಟೈಗರ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಕಾಯಿನ್ ಸರ್ಕಲ್ ಬಳಿ ಸಂಪನ್ನಗೊಂಡಿತು. ಯಾತ್ರೆಯುದ್ದಕ್ಕೂ ದೇಶಭಕ್ತಿಯ ಘೋಷಣೆಗಳು ಮೊಳಗಿಸಲಾಯಿತು. ಸಾಗುತ್ತಿದ್ದ ಯಾತ್ರೆಯಲ್ಲಿ ಉತ್ಸಾಹಗೊಂಡು ರಸ್ತೆ ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರೂ ಸೇರಿಕೊಂಡರು.ಸಮಾಪನ ಕಾರ್ಯಕ್ರಮದಲ್ಲಿ ನಗರದ ಖ್ಯಾತ ವೈದ್ಯರಾದ ಡಾ. ಕೃಷ್ಣಪ್ರಸಾದ್ ಕೂಡ್ಲು, ಡಾ. ಜಿ. ಚಂದ್ರಶೇಖರ್, ಡಾ. ವಿಜಯೇಂದ್ರ ವಸಂತ್, ಎಂಐಟಿಯ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಮದ್ದೋಡಿ, ಕೆನರಾ ಬ್ಯಾಂಕ್ ಡಿಜಿಎಂ ಅಶೋಕ್, ಯುವ ಉದ್ಯಮಿ ಅಜಯ್ ಶೆಟ್ಟಿ, ಸಹಕಾರಿ ರತ್ನ ಇಂದ್ರಾಳಿ ಜಯಕರ ಶೆಟ್ಟಿ, ಬಿಜೆಪಿಯ ಪ್ರಮುಖರಾದ ಶ್ರೀನಿವಾಸ್ ಪೂಜಾರಿ, ವಿಜಯೇಂದ್ರ ಹೆರ್ಗ, ದಿನಕರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಶ್ರೀಕಾಂತ್ ನಾಯಕ್, ವಸಂತ್ ಕಿಣಿ, ಕುತ್ಯಾರು ನವೀನ್ ಶೆಟ್ಟಿ, ಪ್ರಭಾಕರ್ ಪೂಜಾರಿ, ದಿನೇಶ್ ಅಮೀನ್, ಉಮೇಶ್ ನಾಯ್ಕ್, ರಾಜು ಕುಲಾಲ್ ಹಾಗೂ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.