ಅದ್ಧೂರಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ

| Published : Oct 27 2025, 12:30 AM IST

ಸಾರಾಂಶ

ಮೆರವಣಿಗೆಯಲ್ಲಿ ಸಮಂಗಲೆಯರು, ಮಕ್ಕಳು ಕುಂಭ, ಕಳಸ ಹೊತ್ತು ಪಾಲ್ಗೊಂಡಿದ್ದರು.

ಕುಷ್ಟಗಿ: ತಾಲೂಕಿನ ತಾವರಗೇರಾ‌ ಪಟ್ಟಣದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.

ಬೆಳಗ್ಗೆ ಶ್ರೀಮಹರ್ಷಿ ವಾಲ್ಮೀಕಿ ನಾಮಫಲಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಚೌಡೇಶ್ವರಿ ದೇವಸ್ಥಾನದಿಂದ ಸಕಲ‌ ಮಂಗಳ ವಾದ್ಯಗಳೊಂದಿಗೆ ಹಾಗೂ ಕುಂಭ, ಕಳಸದೊಂದಿಗೆ ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರೆವಣಿಗೆಯೂ ಪಟ್ಟಣದ ವಿವಿಧ ವೃತ್ತಗಳ ಮೂಲಕ ಹಾಗೂ ಪ್ರಮುಖ ರಸ್ತೆಗಳ ಮೂಲಕ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದವರಗೆ ಬಂದು ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಸಮಂಗಲೆಯರು, ಮಕ್ಕಳು ಕುಂಭ, ಕಳಸ ಹೊತ್ತು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ವಾಲ್ಮೀಕಿ ಸಮಾಜದ ಗುರು ರಾಜಾ ನವಿನಚಂದ್ರ ನಾಯಕ ಹುಲಿಹೈದರ್ ಸಾನ್ನಿಧ್ಯ ವಹಿಸಿದ್ದರು.

ಮೆರವಣಿಗೆಯಲ್ಲಿ ಜನಪ್ರತಿನಿಧಿಗಳು ಪಪಂ ಅಧ್ಯಕ್ಷ , ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಪಟ್ಟಣದ ಗುರು, ಹಿರಿಯರು ಹಾಗೂ ವಾಲ್ಮೀಕಿ ‌ಸಮಾಜದ ಮುಖಂಡರು ಗಣ್ಯರು ಸೇರಿದಂತೆ ಸಮಾಜದ ಬಾಂಧವರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.