ಸಾರಾಂಶ
ಹರಪನಹಳ್ಳಿ: ಮಂಡ್ಯದಲ್ಲಿ ಡಿ. 20ರಿಂದ ಮೂರು ದಿನಗಳ ವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಕ್ಕೆ ಹರಪನಹಳ್ಳಿಯಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಹರಪನಹಳ್ಳಿ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಪ್ರಗತಿಪರ ಸಂಘಟನೆಗಳಿಂದ ಕನ್ನಡ ಜ್ಯೋತಿ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ತಾಲೂಕಿನ ಗಡಿಭಾಗ ಕಾನಹಳ್ಳಿಯಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ಆನಂತರ ಕೂಲಹಳ್ಳಿ ಮಾರ್ಗವಾಗಿ ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಕನ್ನಡ ತಾಯಿ ಭುವನೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.ಬಳಿಕ ಮಾತನಾಡಿದ ಶಾಸಕಿ ಎಂ.ಪಿ. ಲತಾ, ಕನ್ನಡ ನಾಡು, ನುಡಿ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನವಿರಬೇಕು. ಕನ್ನಡ ಭಾಷೆ ಬೆಳೆಸುವಲ್ಲಿ ಕಂಕಣಬದ್ಧರಾಗಿ ನಿಲ್ಲಬೇಕು. ಕನ್ನಡ ಭಾಷೆ ಉಳಿಸುವ-ಬೆಳೆಸುವ ಇಂತಹ ಕಾರ್ಯಕ್ರಮ ಎಲ್ಲರಲ್ಲೂ ಸಂತಸ ತಂದಿದೆ ಎಂದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಿಸಿ, ಹಳೇ ಬಸ್ ನಿಲ್ದಾಣ, ಪುರಸಭೆ ವೃತ್ತ, ಇಜಾರಿ ಶಿರಸಪ್ಪ ವೃತ್ತ, ಹೊಸ ಬಸ್ ನಿಲ್ದಾಣ, ರಾಜಸೋಮಶೇಖರ ನಾಯಕ ವೃತ್ತ, ಗುಂಡಿನಕೇರಿ, ತೆಕ್ಕದ ಗರಡಿಕೇರಿ, ವಾಲ್ಮೀಕಿನಗರಕ್ಕೆ ತಲುಪಿ ಸಂಪನ್ನಗೊಳಿಸಲಾಯಿತು.ತಹಸೀಲ್ದಾರ್ ಗಿರೀಶಬಾಬು, ಕಸಾಪ ತಾಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ಜಿ. ಮಹದೇವಪ್ಪ, ಖಜಾಂಚಿ ಕೆ. ರಾಘವೇಂದ್ರ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಗಿರಿಜ್ಜಿ ನಾಗರಾಜ, ನಂದೀಶ ಆಚಾರಿ, ಕೆ. ನಂದೀಶ, ಅಶೋಕ, ಸಾಹಿತಿ ಮಾಡ್ಲಗೇರಿ ಸುಭದ್ರಮ್ಮ, ಪ್ರಭಾವತಿ ಕೃಷ್ಣಪ್ಪ, ಇಸ್ಮಾಯಿಲ್ ಎಲಿಗಾರ್, ಪೂಜಾರ್ ಬಸವರಾಜ, ಜಿಟ್ಟಿನಕಟ್ಟಿ ಎಚ್.ಕೆ. ಮಂಜುನಾಥ, ಪುರಸಭೆ ಸದಸ್ಯರಾದ ಎಂ.ವಿ. ಅಂಜಿನಪ್ಪ, ಲಾಟಿ ದಾದಪೀರ್, ಉದ್ದಾರ್ ಗಣೇಶ, ಜಾಕೀರ್, ಟಿ. ವೆಂಕಟೇಶ, ಮುಖಂಡರಾದ ಚಿಕ್ಕೇರಿ ಬಸಪ್ಪ, ಅರಸಿಕೇರಿ ಜಾವೀದ್, ಪ್ರಕಾಶಗೌಡ್ರು, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಇಬ್ರಾಹಿಂ ಸಾಬ್, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ ಇದ್ದರು.