ರಾಣಿಬೆನ್ನೂರಿನಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

| Published : Sep 29 2024, 01:36 AM IST

ರಾಣಿಬೆನ್ನೂರಿನಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆ ನಗರದಲ್ಲಿ ಬಹು ವಿಜೃಂಭಣೆಯಿಂದ ಜರುಗಿತು.

ರಾಣಿಬೆನ್ನೂರು: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆ ನಗರದಲ್ಲಿ ಬಹು ವಿಜೃಂಭಣೆಯಿಂದ ಜರುಗಿತು.ಇಲ್ಲಿಯ ತಹಸೀಲ್ದಾರ್‌ ಕಚೇರಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ನಂತರ ತಹಸೀಲ್ದಾರ್‌ ಆರ್.ಎಚ್. ಭಾಗವಾನ್ ರಥಯಾತ್ರೆಗೆ ಚಾಲನೆ ನೀಡಿದರು. ನಂತರ ಡಿಜೆ ಸಹಿತ ವಿವಿಧ ಕಲಾ ತಂಡಗಳಿಂದ ನೃತ್ಯ, ಹಾಡು, ಮೇಳ, ಡೊಳ್ಳು, ವೀರಗಾಸೆ, ಶಾಲಾ ವಿದ್ಯಾರ್ಥಿಗಳಿಂದ ಕುಣಿತದೊಂದಿಗೆ ಮೆರವಣಿಗೆ ಆರಂಭವಾಯಿತು. ನಗರದ ನಾಡಿಗೇರ ಓಣಿ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಮ್.ಜಿ. ರಸ್ತೆ, ಚಕ್ಕಿಮಿಕ್ಕಿ ದೇವಸ್ಥಾನ, ಅಂಚೆ ವೃತ್ತ, ಡಾ. ಪುನೀತರಾಜಕುಮಾರ ವೃತ್ತ, ಬಸ್ ನಿಲ್ದಾಣ, ಪಿ.ಬಿ. ರಸ್ತೆಯೊಂದಿಗೆ ಪ್ರವಾಸಿ ಮಂದಿರ ತಲುಪಿತು. ಇನ್ನೂ ಜ್ಯೋತಿ ರಥಯಾತ್ರೆ ನೋಡುಗರ ಆಕರ್ಷಣೆ ಕೇಂದ್ರ ಬಿಂದುವಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ನಗರಸಭಾ ಸದಸ್ಯರಾದ ಪುಟ್ಟಪ್ಪ ಮರಿಮ್ಮನವರ, ಗಂಗಮ್ಮ ಹಾವನೂರ, ಮಂಜನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ಪಿ.ಶಿಡೇನೂರ, ಸಂಘಟನಾ ಕಾರ್ಯದರ್ಶಿ ಸುಭಾಸ ಕುರುಬರ, ತಾಲೂಕು ಕನ್ನಡ ಸಾಹಿತ್ಯಿನ ಅಧ್ಯಕ್ಷ ಪ್ರಭಾಕರ ಎನ್ ಶಿಗ್ಲಿ, ನಿಕಟಪೂರ್ವ ಅಧ್ಯಕ್ಷ ವೀರೇಶ ಜಂಬಿಗಿ, ಎ.ಬಿ. ರತ್ನಮ್ಮ, ಶಿವಾನಂದ ಸಂಗಾಪುರ, ಜಗದೀಶ ಮಳಿಮಠ, ಎಚ್.ಎಚ್. ಜಾಡರ, ಕೋಶಾಧ್ಯಕ್ಷ ಎಚ್.ಎಸ್.ಮುದಿಗೌಡರ, ವರ್ತಕರ ಸಂಘದ ಅಧ್ಯಕ್ಷ ಜಿ.ಜಿ.ಹೊಟ್ಟಿಗೌಡರ, ಚಂದ್ರಶೇಖರ ಮಡಿವಾಳರ, ಗುಡ್ಡಪ್ಪ ಮಾಳಗುಡ್ಡಪ್ಪನವರ, ಇಂದಿರಾ ಬಾರಂಗಿ, ಶೋಭಾ ನಾಗನಗೌಡರ, ನಿರ್ಮಲಾ ಲಮಾಣಿ, ವಾಯ್.ಯು. ತಳವಾರ, ಎಚ್.ಎಂ.ನಂದಿಹಳ್ಳಿ, ಬಸನಗೌಡ ಉಮ್ಮನಗೌಡರ, ಎಚ್.ಆರ್. ವೆಂಕಣ್ಣವರ, ಡಾ. ಕಾಂತೇಶ ಅಂಬಿಗೇರ, ಡಾ. ಕಾಂತೇಶ ಗೋಡಿಹಾಳ, ಮಾರುತಿ ತಳವಾರ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಯಮ್ಮಿ, ಪಿ.ವ್ಹಿ. ಮಠದ, ಜಿ.ಕೆ. ಗಣೇಶ, ಮಲ್ಲೇಶಪ್ಪ ಮದ್ಲೇರ, ಬಸವರಾಜ ಸಾವಕ್ಕನವರ, ಶಿವಕುಮಾರ ಜಾಧವ, ಮಲ್ಲಿಕಾರ್ಜುನ ಸಾವಕ್ಕಳವರ, ಕಿರಣ ಗುಳೇದ ಸೇರಿದಂತೆ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು, ಕವಿ ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳು ಇದ್ದರು.