ಕುಕ್ಕೆ ಬೆಳ್ಳಿ ರಥಕ್ಕೆ ಉಡುಪಿಯಲ್ಲಿ ಭವ್ಯ ಸ್ವಾಗತ

| Published : Nov 10 2025, 02:00 AM IST

ಕುಕ್ಕೆ ಬೆಳ್ಳಿ ರಥಕ್ಕೆ ಉಡುಪಿಯಲ್ಲಿ ಭವ್ಯ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ. ರೇಣುಕಾ ಪ್ರಸಾದ್ ಕುರುಂಜಿ ಹಾಗೂ ಅವರ ಕುಟುಂಬಸ್ಥರಿಂದ ಬೆಳ್ಳಿರಥ ಸಮರ್ಪಣೆಯು ಆಗಲಿದೆ.

ಕನ್ನಡಪ್ರಭ ವಾರ್ತೆ, ಉಡುಪಿ

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ. ರೇಣುಕಾ ಪ್ರಸಾದ್ ಕುರುಂಜಿ ಹಾಗೂ ಅವರ ಕುಟುಂಬಸ್ಥರಿಂದ ಬೆಳ್ಳಿರಥ ಸಮರ್ಪಣೆಯು ಆಗಲಿದ್ದು, ಈ ಬೆಳ್ಳಿ ರಥವು ಕುಂದಾಪುರದ ಕೋಟೇಶ್ವರದಿಂದ ಉಡುಪಿ ಅಂಬಾಗಿಲು ಜಂಕ್ಷನ್‌ಗೆ ತಲುಪಿದ ಸಂದರ್ಭದಲ್ಲಿ, ಉಡುಪಿಯ ಭಕ್ತಾಭಿಮಾನಿಗಳು ಸೇರಿ ರಥಕ್ಕೆ ಭವ್ಯ ಸ್ವಾಗತವನ್ನು ನೀಡಿ ಯಾವುದೇ ವಿಘ್ನಗಳು ಬಾರದೇ ಒಳ್ಳೆಯ ರೀತಿಯಲ್ಲಿ ಈ ರಥವು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಲುಪಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಉಡುಪಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಬನ್ನಂಜೆ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಮಮತಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಮಹಾಬಲ ಕುಂದರ್, ಉಡುಪಿ ಜಿಲ್ಲಾ ಒಕ್ಕಲಿಗ‌ ಸೇವಾ ಸಂಘದ ಅಧ್ಯಕ್ಷ ಸೀತಾರಾಮ್ ಗೌಡ, ಕಾರ್ಯದರ್ಶಿ ಹೇಮಾನಂದ್, ಮಾಜಿ ಕಾರ್ಯದರ್ಶಿ ಬಿ ಪಿ ಮಂಜುನಾಥ್, ಹಿರಿಯರಾದ ಬಾಬು ಗೌಡ, ಡಾ. ತುಕಾರಾಮ್, ಶಿವಪ್ಪ ಗೌಡ, ಕೃಷ್ಣ, ರಘುನಂದನ್, ಲಿಂಗಪ್ಪ ಗೌಡ, ವಿಕಾಸ್, ಸುರೇಶ್, ಸತೀಶ್, ಲೀಲಾವತಿ, ಕಮಲಾ ಸಿದ್ದರಾಜ್ ಗೌಡ, ಕುಸುಮಾ ಬಾಬುಗೌಡ ಸುಪ್ರಿತಾ, ಅರ್ಚನಾ ಹಾಗೂ ಇನ್ನಿತರ ಸಮಾಜದ ಕುಲಭಾಂದವರು ಉಪಸ್ಥಿತರಿದ್ದರು.