ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕೆ ಅನುದಾನ

| Published : Jan 10 2025, 12:46 AM IST

ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕೆ ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

ಶೀಘ್ರದಲ್ಲಿ ೧೨೦೦ ಕೋಟಿ ರು. ಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಲಿದ್ದು, ಕಾಮಗಾರಿ ಪ್ರಾರಂಭವಾಗಿ ಈ ವರ್ಷದ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್ ತಿಳಿಸಿದ್ದಾರೆ. ಮೂಡಿಗೆರೆ ರಸ್ತೆಯ ಚೀಕನಹಳ್ಳಿಯಿಂದ ಬಾಣಾವರ ಹತ್ತಿರದ ಅರಕೆರೆ ಗ್ರಾಮದವರೆಗೆ ಸುಮಾರು ೧೨೦೦ ಕೋಟಿ ರು.ಗಳ ವೆಚ್ಚದಲ್ಲಿ ೮೦ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಹಳೇಬೀಡು

ಶೀಘ್ರದಲ್ಲಿ ೧೨೦೦ ಕೋಟಿ ರು. ಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಲಿದ್ದು, ಕಾಮಗಾರಿ ಪ್ರಾರಂಭವಾಗಿ ಈ ವರ್ಷದ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್ ತಿಳಿಸಿದ್ದಾರೆ.

ಇಲ್ಲಿನ ಕರಿಯಮ್ಮ ಮಹಾದ್ವಾರ ಮತ್ತು ಬಸವೇಶ್ವರ ವೃತ್ತದ ಬಳಿ ಮಧ್ಯಮದೊಂದಿಗೆ ಮಾತನಾಡುತ್ತ, ಕೇಂದ್ರ ಸರ್ಕಾರದ ಯೋಜನೆಯಲ್ಲಿ ರಾಷ್ಟ್ರೀಯ ಹೆದ್ದಾರಿ-೨೩೪ ರಸ್ತೆ ಮೂಡಿಗೆರೆ ರಸ್ತೆಯ ಚೀಕನಹಳ್ಳಿಯಿಂದ ಬಾಣಾವರ ಹತ್ತಿರದ ಅರಕೆರೆ ಗ್ರಾಮದವರೆಗೆ ಸುಮಾರು ೧೨೦೦ ಕೋಟಿ ರು.ಗಳ ವೆಚ್ಚದಲ್ಲಿ ೮೦ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದ್ದು, ೨೦೨೫ ಅಂತ್ಯದೊಳಗೆ ಈ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು.

೭ ಮೀಟರ್ ರಸ್ತೆ ಅಗಲೀಕರಣ:

ಮಧ್ಯರಸ್ತೆಯಿಂದ ಎರಡೂ ಭಾಗದಲ್ಲಿ ಸುಮಾರು ೭ ಮೀಟರ್ ಅಂದರೆ ೨೨ ಅಡಿಗಳಷ್ಟು ರಸ್ತೆ ಅಗಲೀಕರಣವಾಗುವುದರ ಜೊತೆಗೆ ೧ ಮೀಟರ್ ಚರಂಡಿ ಹಾಗೂ ಪೈಪ್, ವಿದ್ಯುತ್ ಸಂಪರ್ಕ, ಪಾದಚಾರಿ (ಫೂಟ್ಪಾತ್) ಸೇರಿದಂತೆ ಉತ್ತಮವಾದ ವಿದ್ಯುತ್ ಲೈಟ್ ಒಳಗೊಂಡ ಉತ್ತಮ ಕಚ್ಚಾ ರಸ್ತೆ ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಿಕೊಡಲಾಗುವುದು ಹಾಗೂ ಕರಿಯಮ್ಮ ಮಹಾದ್ವಾರ ಮತ್ತು ಬಸವೇಶ್ವರ ವೃತ್ತದ ಬಳಿ ಅಗಲೀಕರಣವಾಗಲಿದೆ, ಕಾರಣ ಮುಖ್ಯರಸ್ತೆಯಲ್ಲಿ ದೇವಸ್ಥಾನ, ರಾಷ್ಟ್ರೀಯ ಹೆದ್ದಾರಿ ಬರುವದರಿಂದ ಅಗಲಿಕರಣವಾಗಲೇಬೇಕು ಎಂದು ತಿಳಿಸಿದರು.

ಜನರಿಗೆ ಆತಂಕ ಬೇಡ:

ಈಗಾಗಲೇ ರಾಷ್ಟ್ರೀಯ ಹೆದ್ದಾರಿ ರಸ್ತೆ ಒಂದು ಬಾರಿ ಅಗಲೀಕರಣ ಗೊಂಡಿದ್ದು, ಮತ್ತೆ ಅಗಲೀಕರಣಗೊಂಡು ಕಟ್ಟಡಗಳು ಅಂಗಡಿ ಮುಂಗಟ್ಟುಗಳು ತೆರವುಗೊಳ್ಳಬೇಕಾಗುವುದು ಎಂಬ ಆತಂಕ ಬೇಡ ಆದರೆ ಅನಧಿಕೃತವಾಗಿ ರಸ್ತೆಗೆ ಅಂಗಡಿಗಳನ್ನು ಹಾಕಿಕೊಳ್ಳುವ ಕೆಟ್ಟ ಪರಿಪಾಠಕ್ಕೆ ಅವಕಾಶವಿರುವುದಿಲ್ಲ. ಹೈಟೆಕ್ ಮಾದರಿಯಲ್ಲಿ ಫೂಟ್ಪಾತ್‌ ವ್ಯವಸ್ಥೆ ಆಗುವುದರಿಂದ ಯಾರಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಶಾಸಕರು ಭರವಸೆ ನೀಡಿದರು.

ಬಸವೇಶ್ವರ ವೃತ್ತ ಅಗಲೀಕರಣ:

ಜಾವಗಲ್ ರಸ್ತೆಯಲ್ಲಿರುವ ಬಸವೇಶ್ವರ ವೃತ್ತವು ಅಗಲೀಕರಣವಾಗಲಿದ್ದು, ಸುತ್ತಲೂ ದೊಡ್ಡಮಟ್ಟದಲ್ಲಿ ಬಸವೇಶ್ವರ ವೃತ್ತ ವಿಸ್ತಾರವಾಗಿ ಅಗಲೀಕರಣವಾಗಲಿದ್ದು, ಎಂಜಿನಿಯರ್‌ಗಳು ಈಗಾಗಲೇ ಬ್ಲೂಪ್ರಿಂಟ್ ಸಿದ್ಧ ಮಾಡಿಕೊಳ್ಳುತ್ತಿದ್ದು, ಶೀಘ್ರದಲ್ಲಿ ವಿಶ್ವ ಪ್ರಸಿದ್ಧ ಬೇಲೂರು ಮತ್ತು ಹಳೇಬೀಡಿಗೆ ಉತ್ತಮ ವ್ಯವಸ್ಥಿತ ಸುಸಜ್ಜಿತ ರಸ್ತೆ ಆಗಲಿದೆ ಎಂದು ತಿಳಿಸಿದರು. ಈಗಾಗಲೇ ಒಂದು ಬಾರಿ ಕಟ್ಟಡಗಳು ರಸ್ತೆ ಅಗಲೀಕರಣಕ್ಕಾಗಿ ಹೋಗಿರುವುದರಿಂದ ಮತ್ತೆ ಅಗಲೀಕರಣದ ಹೆಸರಿನಲ್ಲಿ ಕಟ್ದಟಡಗಳನ್ನು ತೆರವುಗೊಳಿಸುವ ಕಾರ್ಯ ಆಗುವುದೆಂಬ ಆತಂಕ ಮನೆ ಮಾಡಿತ್ತು. ಶಾಸಕರ ಭರವಸೆಯಿಂದ ಮಾಲೀಕರು ನಿಟ್ಟುಸಿರು ಬಿಡುವಂತಾಯಿತು.

ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಮಧು, ಪಿಡಿಒ ವಿರುಪಾಕ್ಷ, ಹೆದ್ದಾರಿ ಎಂಜಿನಿಯರ್‌ಗಳಾದ ಕೃಷ್ಣೇಗೌಡ, ಶರತ್, ಸ್ಥಳೀಯ ಮುಂಖಡರಾದ ಸೋಮಣ್ಣ, ರಂಜಿತ್, ಚೇತನ್, ಈಶ್ವರ್, ಜಗದೀಶ್ ಮಹಾವೀರ್ ಮುಂತಾದವರು ಹಾಜರಿದ್ದರು.