Grant of one crore for each Gram Panchayat: NYJ
-ಪ್ರಜಾಸೇವಾ ಆಂದೋಲನಾ ಉದ್ಘಾಟನಾ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ತಾಲೂಕಿನ ಅಭಿವೃದ್ಧಿಗೆ ಸರ್ಕಾರ ಪ್ರತಿ ಗ್ರಾಪಂ ವ್ಯಾಪ್ತಿಗೆ ತಲಾ ಒಂದು ಕೋಟಿ ಅನುದಾನ ನೀಡಿದ್ದು, ಗ್ರಾಮಗಳಲ್ಲಿನ ಅಗತ್ಯ ಹಾಗೂ ಅತ್ಯವಶ್ಯಕ ಕಾಮಗಾರಿ ಪಟ್ಟಿಯನ್ನು ಮುಖಂಡರು ನೀಡಿ ಅಭಿವೃದ್ಧಿಗೆ ಸಹಕರಿಬೇಕು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು.ತಾಲೂಕಿನ ಕೊಂಡ್ಲಹಳ್ಳಿ ರೇಷ್ಮೆ ನೇಕಾರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪ್ರಜಾಸೇವಾ ಆಂದೋಲನಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ಕುಡಿವ ನೀರು, ರಸ್ತೆ ನಿರ್ಮಾಣ, ಚರಂಡಿ, ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ಸಂಪರ್ಕಿಸುವ ರಸ್ತೆ ಸೇರಿದಂತೆ ಇನ್ನಿತರ ಕಾನೂನು ಮಿತಿ ಒಳಗಿನ ಕಾಮಗಾರಿಗಳನ್ನು ಕೈಗೊಳ್ಳಲು ಸ್ಥಳೀಯ ಮುಖಂಡರು ಹೆಚ್ಚು ಆದ್ಯತೆ ನೀಡಬೇಕು. ಗ್ರಾಮಾಭಿವೃದ್ಧಿ ಕಾಮಗಾರಿಗಳ ಆಯ್ಕೆ ವಿಷಯದಲ್ಲಿ ರಾಜಕೀಯ ಹಾಗೂ ಸ್ವಾರ್ಥತೆ ಕೈಬಿಡಬೇಕು ಎಂದರು.ತಾಪಂ ಇಒ ಎಚ್.ಹನುಮಂತಪ್ಪ ಮಾತನಾಡಿ, ಕಚೇರಿಗಳಿಗೆ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸಲು ಹಾಗೂ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಸರಕಾರವು ಪ್ರಜಾಸೇವಾ ಆಂದೋಲನಾ ನಡೆಸುತ್ತಿದೆ. ಸಾರ್ವಜನಿಕರು ತಮ್ಮ ವೈಯಕ್ತಿಕ ಹಾಗೂ ಗ್ರಾಮದಲ್ಲಿನ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಈ ಆಂದೋಲನದಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.
ಆಂದೋಲನದಲ್ಲಿ ಕಂದಾಯ ಇಲಾಖೆಗೆ 5, ತಾಪಂ ವ್ಯಾಪ್ತಿಗೆ 12, ನೀರು ಸರಬರಾಜು ಇಲಾಖೆಗೆ 2, ಶಿಕ್ಷಣ ಇಲಾಖೆಗೆ 2, ಸಣ್ಣ ನೀರಾವರಿ, ಬಿಸಿಎಂ ತಲಾ ಒಂದು ಅರ್ಜಿ ಒಳಗೊಂಡಂತೆ ಒಟ್ಟು 44 ಅರ್ಜಿಗಳು ಸ್ವೀಕೃತಗೊಂಡವು...ಬಾಕ್ಸ್..
ಸ್ಥಳೀಯ ವಿಎಸ್ಎಸ್ಎನ್ ಬ್ಯಾಂಕ್ಗೆ ೫೦೦ಕ್ಕೂ ಹೆಚ್ಚು ಜನರು ಹಣ ತುಂಬಿದ್ದು, ಬ್ಯಾಂಕ್ನಲ್ಲಿ ಅವ್ಯವಹಾರ ನಡೆದಿದೆ. ಅನೇಕ ವರ್ಷಗಳಿಂದಲೂ ನಾವು ಹಣಕ್ಕಾಗಿ ಅಲೆದಾಡುತ್ತಿದ್ದೇವೆ. ಆದರೆ, ನಮಗೆ ನ್ಯಾಯ ದೊರೆತಿಲ್ಲ ಎಂದು ಅನೇಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ನಿಬಂಧಕರಿಂದ ಶಾಸಕ ಎನ್.ವೈ.ಗೋಪಾಲಕೃಷ್ಣ ಮಾಹಿತಿ ಪಡೆದು ಮಾತನಾಡಿ, ಈ ವಿಷಯ ಈಗ ನನ್ನ ಗಮನಕ್ಕೆ ಬಂದಿದೆ, ಇಲ್ಲಿನ ಅವ್ಯವಹಾರವು ತನಿಖಾ ಹಂತದಲಿದ್ದು, ಎರಡು ತಿಂಗಳ ಒಳಗಾಗಿ ನಿಮ್ಮ ಹಣವನ್ನು ವಾಪಾಸು ಕೊಡಿಸಲು ಶ್ರಮಿಸುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಟಿ.ಜಗದೀಶ್, ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ, ಬಿಸಿಎಂ ಅಧಿಕಾರಿ ಲೀಲಾವತಿ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಹರೀಶ್, ಲಿಂಗರಾಜ್, ನವೀನ್ ಕುಮಾರ್, ಮುಖಂಡರಾದ ಟಿ.ತಿಪ್ಪೇಸ್ವಾಮಿ, ಎಸ್.ಕೆ.ಗುರುಲಿಂಗಪ್ಪ, ವಿ.ಸಿ.ವೆಂಕಟೇಶ್, ವಕೀಲ ಎಚ್.ಸಿ.ಪ್ರದೀಪ್ ಕುಮಾರ್, ಕೆ.ಸಿಮಂಜುನಾಥ್, ಪಿಡಿಒ ಯಶವಂತ್, ಕಾರ್ಯದರ್ಶಿ ಕೃಷ್ಣಪ್ಪ ಇದ್ದರು.