ಸಾರಾಂಶ
ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದ ಜನತೆಗೆ ಶಾಶ್ವತವಾಗಿ ಕುಡಿಯವ ನೀರನ್ನು ಒದಗಿಸಲು. ಸರ್ಕಾರ ಕೂಡಲೇ ಈ ಯೋಜನೆಗೆ ಬೇಕಾದ 5300 ಕೋಟಿ ಅನುದಾನ ಕೂಡಲೇ ಬಿಡುಗಡೆ ಮಾಡಿದರೆ ಈ ಭಾಗದ ಜನತೆಗೆ ಶುದ್ಧ ಕುಡಿಯುವ ನೀರು ದೊರೆಯುತ್ತದೆ.
ಚಿಕ್ಕಬಳ್ಳಾಪುರ : ಎತ್ತಿನಹೊಳೆ ಯೋಜನೆಯಿಂದ ಇನ್ನಷ್ಟು ನೀರನ್ನು ಪಡೆಯುವ ಅವಕಾಶವಿದ್ದು, ಈ ಯೋಜನೆಗೆ 5,300 ಕೋಟಿ ಅನುದಾನ ಕೂಡಲೇ ಬಿಡುಗಡೆ ಮಾಡಿದರೆ ಜಿಲ್ಲೆಯ ನೀರಾವರಿ ಸಮಸ್ಯೆ ಬಗೆಹರಿಯಲಿದೆ ಎಂದು ಭಾರತೀಯ ರೈತ ಒಕ್ಕೂಟದ ರಾಜ್ಯಾಧ್ಯಕ್ಷ ಗೋವಿಂದರೆಡ್ಡಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಎತ್ತಿನಹೊಳೆ ಯೋಜನೆ ಕಾಮಗಾರಿ ಮುಗಿದಿದ್ದು, ಇನ್ನು 5300 ಕೋಟಿ ಅನುದಾನ ಬಿಡುಗಡೆ ಮಾಡಿದರೆ ಜಿಲ್ಲೆಗೆ ನೀರು ಬರಲಿದೆ. ಅಲ್ಲದೆ ಈಗಾಗಲೆ ವಾಣಿವಿಲಾಸ ಸಾಗರ ತುಂಬಿದ್ದು, 90 ವರ್ಷಗಳ ಇತಿಹಾಸದಲ್ಲಿ ಇದು 3ನೇಬಾರಿಗೆ ವಾಣಿ ವಿಳಾಸ ಸಾಗರ ತುಂಬಿದೆ ಎಂದರು.
ವಾಣಿವಿಲಾಸದಿಂದ ನೀರು ಹರಿಸಿ
ವಾಣಿವಿಲಾಸ ಸಾಗರವನ್ನು ಬ್ಯಾಲೆನ್ಸಿಂಗ್ ರಿಸರ್ವಾಯರ್ ಎಂದು ಘೋಷಿಸಿ, ಎತ್ತಿನಹೊಳೆ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಕುಡಿಯುವ ನೀರಿಗಾಗಿ ಉಪಯೋಗಿಸಬಹುದಾಗಿದೆ. ಇದಕ್ಕಾಗಿ ಪೈಪ್‌ಲೈನ್ ಮೂಲಕ ನಂದಿ ತಪ್ಪಲಿನ 5 ನದಿಗಳಾದ ಚಿತ್ರಾವತಿ, ಉತ್ತರಪೆನ್ನಾರ್, ಪಾಪಾಗ್ನಿ, ಅರ್ಕಾವತಿ ಹಾಗೂ ದಕ್ಷಿಣ ಪೆನ್ನಾರ್ ನದಿಗಳಿಗೆ ಹರಿಸಿದರೆ ಪ್ರತ್ಯೇಕ ಜಲಾಶಯದ ಅವಶ್ಯಕತೆ ಇರುವುದಿಲ್ಲ ಎಂದು ಸಲಹೆ ನೀಡಿದರು.
ನೀರಾವರಿ ತಜ್ಞ ಪ್ರೊ.ಪಿ.ನರಸಿಂಹಪ್ಪ ಮಾತನಾಡಿ, ಎಲ್ಲಾ ಜಿಲ್ಲೆಗಳಿಗೆ ನೀರಾವರಿ ಬೆಳೆಗಳಿಗೆ ವಿಮೆ ಕಂತನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಆಯಾ ರಾಜ್ಯ ಸರ್ಕಾರಗಳೇ ಪಾವತಿ ಮಾಡುತ್ತಿದ್ದು, ರಾಜ್ಯ ಸರ್ಕಾರವೂ ವಿಮಾ ಕಂತು ಪಾವತಿ ಮಾಡುವ ಮೂಲಕ ರೈತರಿಗೆ ನೆರವಾಗಬೇಕು ಎಂದರು. ಭಾರತೀಯ ರೈತ ಒಕ್ಕೂಟದ ರಾಜ್ಯ ಮಹಾ ಕಾರ್ಯದರ್ಶಿ ಮಂಜುನಾಥ್ ಬಳಗೆರೆ ಮಾತನಾಡಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದ ಜನತೆಗೆ ಶಾಶ್ವತವಾಗಿ ಕುಡಿಯವ ನೀರನ್ನು ಒದಗಿಸಲು. ಸರ್ಕಾರ ಕೂಡಲೇ ಈ ಯೋಜನೆಗೆ ಬೇಕಾದ 5300 ಕೋಟಿ ಅನುದಾನ ಕೂಡಲೇ ಬಿಡುಗಡೆ ಮಾಡಿದರೆ ಈ ಭಾಗದ ಜನತೆಗೆ ಶುದ್ಧ ಕುಡಿಯುವ ನೀರು ದೊರೆಯುತ್ತದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಸತೀಶ್, ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭಾಕರ್ ಇದ್ದರು.