ಸಾರಾಂಶ
ಹುನಗುಂದ: ಸಮಾಜಕ್ಕಾಗಿ ಪ್ರತಿಯೊಬ್ಬರು ನಿರಂತರ ಕಾಯಕ ಮತ್ತು ಸೇವೆ ಮಾಡಿದರೆ ಸಮಾಜ ನಿಮ್ಮ ಸ್ಮರಣೋತ್ಸವ ಕಾರ್ಯಕ್ರಮ ಮಾಡುತ್ತದೆ ಎಂದು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಸಭಾಭವನದಲ್ಲಿ ಭಾನುವಾರ ನಡೆದ ಕಾಯಕಯೋಗಿ ಗುರುಬಸವಾರ್ಯ ಮಠದ ಗುರುಗಳ 45ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ. ಈ ಸಂಸ್ಥೆ ಕಟ್ಟಲು ಮಠಗುರುಗಳು ಹಗಲಿರುಳು ಶ್ರಮಿಸಿದ್ದು, ಇಲ್ಲಿ ಕಲಿತ ಇಬ್ಬರು ವಿದ್ಯಾರ್ಥಿಗಳು ರಾಜ್ಯದ ಕುಲಪತಿಗಳಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಹುನಗುಂದ
ಸಮಾಜಕ್ಕಾಗಿ ಪ್ರತಿಯೊಬ್ಬರು ನಿರಂತರ ಕಾಯಕ ಮತ್ತು ಸೇವೆ ಮಾಡಿದರೆ ಸಮಾಜ ನಿಮ್ಮ ಸ್ಮರಣೋತ್ಸವ ಕಾರ್ಯಕ್ರಮ ಮಾಡುತ್ತದೆ ಎಂದು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.ಪಟ್ಟಣದ ವಿಜಯ ಮಹಾಂತೇಶ ಸಭಾಭವನದಲ್ಲಿ ಭಾನುವಾರ ನಡೆದ ಕಾಯಕಯೋಗಿ ಗುರುಬಸವಾರ್ಯ ಮಠದ ಗುರುಗಳ 45ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ. ಈ ಸಂಸ್ಥೆ ಕಟ್ಟಲು ಮಠಗುರುಗಳು ಹಗಲಿರುಳು ಶ್ರಮಿಸಿದ್ದು, ಇಲ್ಲಿ ಕಲಿತ ಇಬ್ಬರು ವಿದ್ಯಾರ್ಥಿಗಳು ರಾಜ್ಯದ ಕುಲಪತಿಗಳಾಗಿದ್ದಾರೆ. ಮಕ್ಕಳ ಬೆಳವಣಿಗೆಯಲ್ಲಿ ಮಠ ಗುರುಗಳ ಸಂಸ್ಕಾರ ಮಹತ್ವದ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳು ಹಣೆಯಲ್ಲಿ ಪ್ರತಿನಿತ್ಯ ವಿಭೂತಿ ಹಚ್ಚಿಕೊಂಡು ಲಿಂಗಪೂಜೆ ಮಾಡುವುದರಿಂದ ದುಶ್ಚಟಗಳು ಮರೆಯಾಗಿ ಧನತ್ಮಾಕ ಚಿಂತನೆಗಳು ರೂಪಗೊಳ್ಳುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಲಿಂಗಪೂಜೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಜತಗೆ ಗುರು ಹಿರಿಯರ ಬಗ್ಗೆ ಗೌರವ ಭಾವನೆ ಹೊಂದಬೇಕು ಎಂದರು.
ಡಾವಣಗೇರಿ ಶಿವಗಂಗೋತ್ರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿಡಿ.ಕುಂಬಾರ ಮಾತನಾಡಿ, ಗುರುಬಸವಾರ್ಯ ಮಠಗುರುಗಳು ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ ದಾಸೋಹದ ಜತಗೆ ಅಕ್ಷರ ದಾಸೋಹ ನೀಡಿದ್ದರಿಂದ ಇಂದು ರಾಜ್ಯದ ಮೂಲೆ ಮೂಲೆಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಇಲ್ಲಿ ಕಲಿತಯುವ ನಾನು ವಿಶ್ವವಿದ್ಯಾಲಯದ ಕುಲಪತಿಯಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ಓದು ಕೇವಲ ಅಂಕಗಳಿಸಲು ಮತ್ತು ಉದ್ಯೋಗಕ್ಕಾಗಿ ಅಲ್ಲ ಜ್ಞಾನಕ್ಕಾಗಿ ಓದಬೇಕು ಎಂದರು.ಶಿರೂರಿನ ಮಹಾಂತ ತೀರ್ಥದ ಡಾ. ಬಸಲಿಂಗ ಮಹಾಸ್ವಾಮಿ, ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿದರು.ಉಚಿತ ಪ್ರಸಾದ ನಿಲಯದ ಕಾಯಾಧ್ಯಕ್ಷ ಸಂಗಣ್ಣ ಚಿನಿವಾಲರ,ಸಂಘದ ನಿರ್ದೇಶಕರಾದ ಅರುಣೋದಯ ದುದಿ, ರವಿ ಹುಚನೂರ, ವೀರಣ್ಣ ಬಳೂಟಗಿ, ಎಂ.ಎಸ್.ಮಠ ಇತರರು ಇದ್ದರು.