ಸಂಯುಕ್ತಾ ಪಾಟೀಲ ಪರ ಭರ್ಜರಿ ಪ್ರಚಾರ

| Published : May 04 2024, 12:31 AM IST

ಸಾರಾಂಶ

ದೇಶದಲ್ಲಿ ಬಿಜೆಪಿ ಸರ್ಕಾರ ಸುಳ್ಳು ಆಶ್ವಾಸನೆ ಕೊಡುತ್ತ ಜನ ಸಾಮಾನ್ಯರ ಬದುಕನ್ನು ನರಕದ ಕೂಪಕ್ಕೆ ತಳ್ಳಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಮಹೇಶ ಹೊಸಗೌಡರ ಹೇಳಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡದೇಶದಲ್ಲಿ ಬಿಜೆಪಿ ಸರ್ಕಾರ ಸುಳ್ಳು ಆಶ್ವಾಸನೆ ಕೊಡುತ್ತ ಜನ ಸಾಮಾನ್ಯರ ಬದುಕನ್ನು ನರಕದ ಕೂಪಕ್ಕೆ ತಳ್ಳಿದೆ. ಪ್ರಧಾನಿ ಮೋದಿಯವರು ಬಡವರ, ಅಲ್ಪಸಂಖ್ಯಾತರ ಪರ ಯಾವ ಯೋಜನೆ ತಂದಿಲ್ಲ. ಹೀಗಾಗಿ ಅವರ ಬಗ್ಗೆ ಜನರಲ್ಲಿ ಒಳ್ಳೆ ಅಭಿಪ್ರಾಯಗಳು ಇಲ್ಲದಂತಾಗಿದೆ. ಕಾಂಗ್ರೆಸ್ ಪಕ್ಷದ ಸಂಯುಕ್ತಾ ಪಾಟೀಲ ಅವರನ್ನು ಗೆಲ್ಲಿಸಿದರೆ ಮತಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಕೆಪಿಸಿಸಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಮಹೇಶ ಹೊಸಗೌಡರ ಹೇಳಿದರು.

ತಾಲೂಕಿನ ಜಮ್ಮನಕಟ್ಟಿ, ಲಕ್ಕಸಕೊಪ್ಪ, ಹುಲಸಗೇರಿ, ಕಟಗೇರಿ, ಕೊಂಕಣಕೊಪ್ಪ, ಹಂಗರಗಿ, ಹಿರೇಬೂದಿಹಾಳ ಗ್ರಾಮಗಳಿಗೆ ಬಾಗಲಕೋಟೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರವಾಗಿ ಪ್ರಚಾರ ನಡೆಸಿ ಅವರು ಮಾತನಾಡಿದರು.

ಸಿ.ಎಂ.ಸಿದ್ಗದರಾಮಯ್ಯನವರ ಆಪ್ತ ಹೊಳಬಸು ಶೆಟ್ಟರ ಮಾತನಾಡಿ, ಈ ರಾಜ್ಯದಲ್ಲಿ ಜನನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿಗಳನ್ನು ಕೊಡುವುದರ ಮೂಲಕ ಬಡವರ, ದೀನದಲಿತರ, ಅಲ್ಪಸಂಖ್ಯಾತರ, ರೈತರ, ನೇಕಾರ, ಕೂಲಿಕಾರರ ಕಲ್ಯಾಣ ಮಾಡಿದ್ದಾರೆ. ಸಂಯುಕ್ತಾ ಪಾಟೀಲ ಅವರಿಗೆ ಮತ ನೀಡಿ ಗೆಲ್ಲಿಸಿದರೆ ಅವರು ಇನ್ನೂ ಅನೇಕ ಸವಲತ್ತು, ಯೋಜನೆಗಳನ್ನು ಮತಕ್ಷೇತ್ರಕ್ಕೆ ತಂದು ಅಭಿವೃದ್ಧಿ ಮಾಡಲಿದ್ದಾರೆ. ಸಂಯುಕ್ತಾ ಪಾಟೀಲ ಅವರ ಮತ ನೀಡಿ ಗೆಲ್ಲಿಸಬೇಕೆಂದು ಹೇಳಿದರು.

ಬಾದಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತಗೌಡ ಯಕ್ಕಪ್ಪನವರ್, ಜಿಪಂ ಮಾಜಿ ಸದಸ್ಯ ಮುಚಖಂಡಯ್ಯ ಹಂಗರಗಿ, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಆರ್. ಗೌಡರ, ಆರ್.ಎಫ್. ಭಾಗವಾನ, ಶಶಿಕಾಂತ ಉದಗಟ್ಟಿ, ರೇವಣಸಿದ್ದಪ್ಪ ನೋಟಗಾರ, ತಾಲೂಕು ಅದ್ಯಕ್ಷ ಹನುಮಂತ ದೇವರಮನಿ, ಮಧು ಯಡ್ರಾಮಿ, ರಂಗು ಗೌಡರ, ಆನಂದ ಕೋಟಿ, ಮುತ್ತಪ್ಪ ಗಾಜಿ, ಶಿವಾನಂದ ಮುದೋಳ, ರವಿ ಹೆರಕಲ್, ಪ್ರಜಾಶ ನಡಮನಿ, ಸಾಬಣ್ಣ ದೊಡ್ಡಮನಿ, ರಂಗಪ್ಪ ಅಮರಣ್ಣವರ, ಸಿದ್ದಪ್ಪ ಉದ್ದನ್ನವರ, ಸಿದ್ದು ಗೌಡರ, ಚಂದ್ರಶೇಖರ ಚಿಂತಾಕಲ, ಪಿ.ಕೆ.ಪಿ.ಎಸ್ ಅಧ್ಯಕ್ಷ ಉದ್ದನ್ನವರ, ಶಿವಾನಂದ ದ್ಯಾಮಣ್ಣವರ, ಕರಿಗೌಡ ಮುಷ್ಟಿಗೇರಿ, ವೈ.ಆರ್.ಪಾಟೀಲ, ಮಂಜು ಮುಗಳೊಳ್ಳಿ, ರುದ್ರಗೌಡ ಪಾಟೀಲ, ಬಸನಗೌಡ ಗೌಡರ ಸೇರಿದಂತೆ ಇತರ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.