ಸಾರಾಂಶ
ಮುಜರಾಯಿ ಇಲಾಖೆಗೆ ಸೇರಿದ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮಾರಿಕೊಪ್ಪದ ಶ್ರೀ ಹಳದಮ್ಮ ದೇವಿಯ ಮಹಾರಥೋತ್ಸವ ಶುಕ್ರವಾರ ಬೆಳಗ್ಗೆ 5.15 ಗಂಟೆಯ ಬ್ರಾಹ್ಮೀ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖ ವೈಭವದಿಂದ ಜರುಗಿತು.
ಹೊನ್ನಾಳಿ: ಮುಜರಾಯಿ ಇಲಾಖೆಗೆ ಸೇರಿದ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮಾರಿಕೊಪ್ಪದ ಶ್ರೀ ಹಳದಮ್ಮ ದೇವಿಯ ಮಹಾರಥೋತ್ಸವ ಶುಕ್ರವಾರ ಬೆಳಗ್ಗೆ 5.15 ಗಂಟೆಯ ಬ್ರಾಹ್ಮೀ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖ ವೈಭವದಿಂದ ಜರುಗಿತು.
ಉತ್ಸವಕ್ಕೂ ಮುನ್ನ ರಥಕ್ಕೆ ಶಾಂತಿ ಪೂಜೆ ನಡೆಸಿ ಅರ್ಚಕರಿಂದ ರಥಕ್ಕೆ ಬಲಿಅನ್ನ ನೈವೇದ್ಯ ಮಾಡಲಾಯಿತು. ಅನಂತರ ಮುಜರಾಯಿ ಅಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು, ಭಕ್ತರು ರಥಕ್ಕೆ ಪೂಜೆ ಮಾಡಿದರು. ಹಳದಮ್ಮ ದೇವಿಯ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಹೂಗಳಿಂದ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ, ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು, ಬಾಳೆಹಣ್ಣು ನೈವೇದ್ಯ ಮಾಡಿದರು.ರಥೋತ್ಸವದಲ್ಲಿ ಮುಜರಾಯಿ ಅಧಿಕಾರಿ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಚಿನ್ನಪ್ಪ, ರೂಪ ಚನ್ನೇಶ್, ಹಳದಪ್ಪ, ಚಿನ್ನಪ್ಪ, ಮೈಲಪ್ಪ, ಅರ್ಚಕ ಮಲ್ಲಿಕಾರ್ಜುನ, ಪುಟ್ಟನಗೌಡ, ಪ್ರಭುಗೌಡ, ಪಾಲಾಕ್ಷಪ್ಪ, ರುದ್ರೇಶ್ ಮತ್ತು ಪೋಲೀಸ್ ಇಲಾಖೆ ಅಧಿಕಾರಿಗಳು, ಭಕ್ತರು ಇದ್ದರು.