ಜೀವನಕ್ಕೆ ಉತ್ತಮ ಸಂದೇಶ ನೀಡಿರುವ ಮಹಾನ್ ನಾಯಕರು-ತಿರಕಪ್ಪ ಚಿಕ್ಕೇರಿ

| Published : May 13 2024, 12:03 AM IST

ಜೀವನಕ್ಕೆ ಉತ್ತಮ ಸಂದೇಶ ನೀಡಿರುವ ಮಹಾನ್ ನಾಯಕರು-ತಿರಕಪ್ಪ ಚಿಕ್ಕೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾನ್ ನಾಯಕರ ದಿನಾಚರಣೆ ಬಡವರ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ಉಪಯುಕ್ತ ಕಾರ್ಯ ಮಾಡುವ ಮೂಲಕ ಅರ್ಥಪೂರ್ಣ ಆಚರಣೆಗೆ ನಾಂದಿಯಾಗಲಿ ಎಂದು ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆಯ ರಾಜ್ಯಾಧ್ಯಕ್ಷ ತಿರಕಪ್ಪ ಚಿಕ್ಕೇರಿ ಹೇಳಿದರು.

ಹಾವೇರಿ: ಮಹಾನ್ ನಾಯಕರ ದಿನಾಚರಣೆ ಬಡವರ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ಉಪಯುಕ್ತ ಕಾರ್ಯ ಮಾಡುವ ಮೂಲಕ ಅರ್ಥಪೂರ್ಣ ಆಚರಣೆಗೆ ನಾಂದಿಯಾಗಲಿ ಎಂದು ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆಯ ರಾಜ್ಯಾಧ್ಯಕ್ಷ ತಿರಕಪ್ಪ ಚಿಕ್ಕೇರಿ ಹೇಳಿದರು.ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ವತಿಯಿಂದ ೧೩೩ನೇ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿ, ೧೧೭ನೇ ಡಾ. ಬಾಬು ಜಗಜೀವನ ರಾಮ್ ಜಯಂತಿ ಹಾಗೂ ೧೯೦ನೇ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾನತೆಯ ಹರಿಕಾರರು, ವಿಶ್ವಗುರು ಶ್ರೀ ಬಸವೇಶ್ವರರ ದಿನಾಚರಣೆಯ ಈ ದಿನ ಬಡವರ ಬದುಕಿಗೆ ಬೆಳಕಾಗುವ ಸಾಮೂಹಿಕ ವಿವಾಹ ಕಾರ್ಯ ಸಾಮಾಜಿಕ ಕಳಕಳಿಯ ಕೆಲಸವಾಗಿದೆ. ಸರ್ವರೂ ಸಮಾನರು ಎಂದು ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ನಮಗೆ ತಿಳಿಸಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ನೀಡಿ ಎಲ್ಲರ ಧ್ವನಿಯಾಗಿದ್ದಾರೆ. ದೇಶದಲ್ಲಿ ಡಾ. ಬಾಬು ಜಗಜೀವನ ರಾಮ್ ಅವರು ಆದರ್ಶ ಜೀವನ ಸಾಗಿಸುವ ಮೂಲಕ ಮಹಾನ್ ನಾಯಕರು ನಮ್ಮ ಜೀವನಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು. ಕಾರ್ಯಕ್ರಮದ ಉದ್ಘಾಟನೆ ಮಾಡಿದ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ, ಸಂಘಟನೆಗಳು ಇಂತಹ ಸಾಮಾಜಿಕ ಕೆಲಸ ಮಾಡಿದಾಗ ಜನರ ಮೆಚ್ಚುಗೆಗೆ ಪಾತ್ರರಾಗುತ್ತೇವೆ. ಈ ಮೂರು ಮಹಾನ್ ನಾಯಕರ ಜನ್ಮದಿನದ ನೆನಪಿಗಾಗಿ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ. ವಿವಾಹವಾದ ನವ ಜೋಡಿಗಳು ಮಹಾನ್ ನಾಯಕರ ತತ್ವ ಸಿದ್ಧಾಂತದಡಿ ಉತ್ತಮ ಬದುಕಿಗೆ ಸಾಕ್ಷಿಯಾಗಿರಿ. ಈ ಕಾರ್ಯಕ್ರಮ ಯಶಸ್ವಿಗಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಡಿ.ಎಸ್. ಮಾಳಗಿ, ಸಂತೋಷ ಕನ್ನಮ್ಮನವರ, ವೈ. ಎನ್. ಮಾಸೂರ, ದುರಗೇಶ ಗೊಣೆಮ್ಮನವರ, ರವಿ ಹುಣಸಿಮರದ, ಮಂಜಪ್ಪ ಮರೋಳ, ಬಸವರಾಜ ಕಾಳೆ, ವಿಭೂತಿ ಶೆಟ್ಟಿ, ಸುರೇಶ ಛಲವಾದಿ, ಎನ್.ಬಿ. ಕಾಳೆ, ಹನಮಂತಪ್ಪ ಹೌಂಸಿ, ಸುರೇಶ ಮಾದರ, ರೇಣುಕಾ ಬಡಕ್ಕಣ್ಣನವರ, ಮಂಜುನಾಥ ದೊಡ್ಡಮನಿ, ಮಾರ್ತಂಡಪ್ಪ ಹಾದಿಮನಿ, ಜಬಿಉಲ್ಲಾ ಹೊಳೆಮ್ಮನವರ, ರಮೇಶ ಹಿತ್ತಲಮನಿ, ಮಲ್ಲೇಶಪ್ಪ ಹಿರೇಕ್ಕನವರ, ಹನಮಂತ ಮಾಸೂರ, ಬಿದ್ದಾಡೆಪ್ಪ ಹಂಸಬಾವಿ, ಶಂಭು ಕಳಸದ, ಜಗದೀಶ ಹರಿಜನ, ಸುರೇಶ ಬೆನ್ನೂರ, ಚಂದ್ರಪ್ಪ ಹರಿಜನ, ಮಹೇಶಪ್ಪ ಹರಿಜನ, ಗಣೇಶ ಹರಿಜನ ಸೇರಿದಂತೆ ಇತರರು ಇದ್ದರು.