ಜ್ಞಾನಸುಧೆ ಹರಿಸಿದ ಮಹಾನೀಯರು ನಮಗೆ ಆದರ್ಶಪ್ರಿಯರು

| Published : Aug 21 2024, 12:30 AM IST

ಜ್ಞಾನಸುಧೆ ಹರಿಸಿದ ಮಹಾನೀಯರು ನಮಗೆ ಆದರ್ಶಪ್ರಿಯರು
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಕಲ್ಯಾಣಕ್ಕಾಗಿ ಜ್ಞಾನಸುಧೆಯನ್ನು ಹರಿಸಿದ ಅನೇಕ ಮಹಾನೀಯರು ಇಂದಿಗೂ ಸಹ ನಮಗೆ ಆದರ್ಶಪ್ರಾಯರಾಗಿದ್ದಾರೆ. ಅಂಧಕಾರ ತುಂಬಿದ ಸಮಾಜಕ್ಕೆ 12ನೇ ಶತಮಾನ ಜ್ಞಾನದ ಬೆಳಕು ನೀಡಿದ ಕಾಲಘಟ್ಟ. ಅಂದಿನ ದಿನದಲ್ಲಿ ಜನರಿಗೆ ಧಾರ್ಮಿಕ ಜಾಗೃತಿ ಮೂಡಿಸಿದ ನುಲಿಯಚಂದ್ರಯ್ಯ ಹಾಗೂ ಬ್ರಹ್ಮಶ್ರೀನಾರಾಯಣಗುರು ಇಂದಿಗೂ ಸಮಾಜಕ್ಕೆ ಆದರ್ಶಪ್ರಾಯರು ಎಂದು ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಅವರು ಮಂಗಳವಾರ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ನುಲಿಯಚಂದ್ರಯ್ಯ, ಬ್ರಹ್ಮಶ್ರೀ ನಾರಾಯಣಗುರು ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮದಿನೋತ್ಸವ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ವಿಶೇಷವಾಗಿ ನಾಡಿನ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಓಂಕಾರ ಬರೆದವರೇ ದಿವಂಗತ ಡಿ. ದೇವರಾಜ ಅರಸುರವರು. ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಯಿತು. ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ ಆ ಸಮುದಾಯದ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ನಿಂತವರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಈಡಿಗ ಸಮಾಜದ ಅಧ್ಯಕ್ಷ ರವಿಕುಮಾರ್, ಸಮುದಾಯದ ಮುಖಂಡರಾದ ಕೆ.ಜೆ. ಅಶೋಕ್‌ ಕುಮಾರ್, ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ್, ಎಂ.ಜೆ. ರಾಘವೇಂದ್ರ, ಕೆ. ವೀರಭದ್ರಪ್ಪ, ಕವಿತಾ ಬೋರಯ್ಯ, ನಾಮಿನಿ ಸದಸ್ಯ ನೇತಾಜಿ ಪ್ರಸನ್ನ, ಬಡಗಿ ಪಾಪಣ್ಣ, ಆರ್. ವೀರಭದ್ರಪ್ಪ, ಅನ್ವರ್‌ ಮಾಸ್ಟರ್, ಪೌರಾಯುಕ್ತರ ಜಗರೆಡ್ಡಿ, ಇಒ ಎಚ್. ಶಶಿಧರ, ಶಿರಸ್ಥೇದಾರ್ ಸದಾಶಿವಪ್ಪ ಮುಂತಾದವರು ಉಪಸ್ಥಿತರಿದ್ದರು.