ನಮ್ಮ ಭಾಷೆಯ ಪ್ರಚಾರಕ್ಕೆ ಸಾರಿಗೆ ಕಾರ್ಮಿಕರಿಂದ ದೊಡ್ಡ ಸೇವೆ

| Published : Nov 23 2025, 01:30 AM IST

ನಮ್ಮ ಭಾಷೆಯ ಪ್ರಚಾರಕ್ಕೆ ಸಾರಿಗೆ ಕಾರ್ಮಿಕರಿಂದ ದೊಡ್ಡ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರ ಸಂಘವು ಕನ್ನಡಕ್ಕಾಗಿ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದ ಶಾಸಕರು, ನಿಮ್ಮ ವಾಹನದ ಹಿಂಬದಿಯ ಕನ್ನಡ ನುಡಿಮುತ್ತು, ಕನ್ನಡದ ಬಣ್ಣ ಹಚ್ಚಿದ ಸ್ಟಿಕ್ಕರ್‌ಗಳು ಇವು ಸಣ್ಣದಾಗಿದ್ದರೂ ನಮ್ಮ ಭಾಷೆಯ ಪ್ರಚಾರಕ್ಕೆ ದೊಡ್ಡ ಸೇವೆ, ಎಂದು ಪ್ರಶಂಸಿಸಿದರು. ಚಾಲಕರ ಕುಟುಂಬದ ಕಲ್ಯಾಣ, ಮಕ್ಕಳ ಶಿಕ್ಷಣ ಹಾಗೂ ಭದ್ರತೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಮುಂದೆಯೂ ಈ ವರ್ಗದ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳಿಗೆ ತಾವೇ ಮುಂದಾಗುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕನ್ನಡ ಭಾಷೆ ಮತ್ತು ಸಂಸ್ಕೃತಿ ನಮ್ಮ ಅಸ್ತಿತ್ವದ ಆಧಾರವಾಗಿದ್ದು, ಪ್ರತಿಯೊಬ್ಬರೂ ನಾಡು-ನುಡಿಯ ಗೌರವ ಉಳಿಸಿಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ ಎಂದು ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರು ತಿಳಿಸಿದರ.ನಗರದ ಅರವಿಂದ್ ಗಾರ್ಮೆಂಟ್ಸ್ ಎದುರು ಕೆರೆಕೋಡಿಹಳ್ಳಿಯ ಬಳಿ ಆಯೋಜಿಸಲ್ಪಟ್ಟ ಜೈ ಭುವನೇಶ್ವರಿ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡ ಮಾತ್ರ ಸಂವಹನ ಸಾಧನವಾಗಿಯೇ ಅಲ್ಲ, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ವ್ಯಕ್ತಿತ್ವವನ್ನು ಕಟ್ಟಿಕೊಡುವ ಬಲವಾದ ಸ್ತಂಭ ಎಂದು ಉಲ್ಲೇಖಿಸಿದರು.

ವಲಸೆ ಬಂದವರು, ಉದ್ಯೋಗಕ್ಕಾಗಿ ಬಂದು ನೆಲೆಸಿರುವವರೂ ಸಹ ಕನ್ನಡವನ್ನು ಗೌರವಿಸಿದರೆ, ಈ ನೆಲ ಸಹ ಅವರನ್ನು ಅಕ್ಕರೆಯಿಂದ ಕಾಣುತ್ತದೆ ಎಂದು ಹೇಳಿದ್ದಾರೆ. ಕನ್ನಡಿಗರು ಎಲ್ಲ ಕ್ಷೇತ್ರಗಳಲ್ಲೂ ಶ್ರೇಷ್ಠತೆ ತೋರಿದ ಉದಾಹರಣೆಗಳನ್ನು ನೆನಪಿಸಿ, ಯುವ ಪೀಳಿಗೆ ಕನ್ನಡದತ್ತ ಮತ್ತಷ್ಟು ಆಕರ್ಷಿತರಾಗುವಂತೆ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸುತ್ತಿದೆ ಎಂದು ತಿಳಿಸಿದರು.ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರ ಸಂಘವು ಕನ್ನಡಕ್ಕಾಗಿ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದ ಶಾಸಕರು, ನಿಮ್ಮ ವಾಹನದ ಹಿಂಬದಿಯ ಕನ್ನಡ ನುಡಿಮುತ್ತು, ಕನ್ನಡದ ಬಣ್ಣ ಹಚ್ಚಿದ ಸ್ಟಿಕ್ಕರ್‌ಗಳು ಇವು ಸಣ್ಣದಾಗಿದ್ದರೂ ನಮ್ಮ ಭಾಷೆಯ ಪ್ರಚಾರಕ್ಕೆ ದೊಡ್ಡ ಸೇವೆ, ಎಂದು ಪ್ರಶಂಸಿಸಿದರು. ಚಾಲಕರ ಕುಟುಂಬದ ಕಲ್ಯಾಣ, ಮಕ್ಕಳ ಶಿಕ್ಷಣ ಹಾಗೂ ಭದ್ರತೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಮುಂದೆಯೂ ಈ ವರ್ಗದ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳಿಗೆ ತಾವೇ ಮುಂದಾಗುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಹೇಮಂತ್‌ ಕುಮಾರ್‌, ಕರವೇ ತಾಲೂಕು ಅಧ್ಯಕ್ಷರಾದ ಕಿರಣ್‌ಕುಮಾರ್‌, ಗ್ರಾ.ಪಂ ಉಪಾಧ್ಯಕ್ಷ ಗಿರೀಶ್‌, ಸಹಕಾರಿ ಸಂಘದ ಅಧ್ಯಕ್ಷರಾದ ಕುಮರ, ಯತೀಶ್‌ಕುಮಾರ್‌, ಯತೀಶ್‌, ಜೈ ಭುವನೇಶ್ವರಿ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಕೋಡಿಹಳ್ಳಿ ಲೋಕೇಶ್‌, ಕಾರ್ಯದರ್ಶಿ ಮುಬಾರಕ್‌ ಮುಂತಾದವರು ಉಪಸ್ಥಿತರಿದ್ದರು.