ರೈತರು ಹಾಗೂ ಗ್ರಾಹಕರು ಸೌರ ಶಕ್ತಿಯ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ, ಮನೆ ಹಾಗೂ ಪಂಪ್‌ಸೆಟ್‌ಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯುತ್ ಅಭಾವನ್ನು ತಪ್ಪಿಸುವ ಜೊತೆಗೆ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯುತ್ ಪ್ರಸರಣ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪ್ರದೀಪ್ ತಿಳಿಸಿದರು.
ಸುರಕ್ಷತಾ ಅರಿವು ಕಾರ್ಯಕ್ರಮ ಕಾರ್ಯಪಾಲಕ ಎಂಜಿನಿಯರ್ ಪ್ರದೀಪ್ ಹೇಳಿಕೆ
ಕನ್ನಡಪ್ರಭ ವಾರ್ತೆ, ಚಾಮರಾಜನಗರರೈತರು ಹಾಗೂ ಗ್ರಾಹಕರು ಸೌರ ಶಕ್ತಿಯ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ, ಮನೆ ಹಾಗೂ ಪಂಪ್‌ಸೆಟ್‌ಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯುತ್ ಅಭಾವನ್ನು ತಪ್ಪಿಸುವ ಜೊತೆಗೆ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯುತ್ ಪ್ರಸರಣ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪ್ರದೀಪ್ ತಿಳಿಸಿದರು.
ತಾಲೂಕಿನ ಹರದನಹಳ್ಳಿ ಉಪ ವಿಭಾಗದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಸಾರ್ವಜನಿಕ ವಿದ್ಯುತ್ ಸೇವೆಗಳು ಹಾಗೂ ಸುರಕ್ಷತಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ದಿನನಿತ್ಯ ವಿದ್ಯುತ್ ಬಳಕೆ ಹೆಚ್ಚಾಗುತ್ತಿದೆ. ವಿದ್ಯುತ್ ಉತ್ಪಾದನೆ ಹಾಗೂ ಹಂಚಿಕೆ ಬಹಳ ಕಷ್ಟವಾಗುತ್ತಿದೆ. ಹೀಗಾಗಿ ಸೂರ್ಯ ಕಿರಣದಿಂದ ವಿದ್ಯುತ್ ಪಡೆದುಕೊಳ್ಳುವ ವಿಧಾನವನ್ನು ನಿಗಮದಿಂದಲೇ ಪರಿಚಯಿಸಲಾಗುತ್ತಿದೆ. ರೈತರು ಹಾಗೂ ಗ್ರಾಹಕರು ತಮ್ಮ ಮನೆ ಹಾಗೂ ಜಮೀನಿನಲ್ಲಿ ಸೌರ ವಿದ್ಯುತ್ ಘಟಕವನ್ನು ಅಳವಡಿಸಿಕೊಂಡರೆ ರಿಯಾಯಿತಿಯನ್ನು ನೀಡಲಾಗುತ್ತದೆ. ನಿಗಮಕ್ಕೆ ವಿದ್ಯುತ್ ನೀಡಿದರೆ ಯುನಿಟ್ ಲೆಕ್ಕದಲ್ಲಿ ಹಣವನ್ನು ನೀಡಲಾಗುತ್ತದೆ. ಹೀಗಾಗಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಆರ್ಥಿಕ ಅಭಿವೃದ್ದಿಯನ್ನು ಸಹ ಹೊಂದಲುಈ ಯೋಜನೆಗಳು ಸಹಕಾರಿಯಾಗಿವೆ ಎಂದರು.ಪ್ರಧಾನ ಮಂತ್ರಿ ಸೌರ ಗೃಹ ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ಗ್ರಾಹಕರ ಮನೆಗಳ ಮೇಲ್ಛಾಣಿಯಲ್ಲಿಯೇ ಸೋಲರ್ ಪೆನಲ್‌ಗಳನ್ನು ಆಳವಡಿಸಿಕೊಂಡು ತಮ್ಮ ಮನೆಗೆ ಅಗತ್ಯವಾದ ವಿದ್ಯುತ್ ಅನ್ನು ಸೌರ ಶಕ್ತಿಯ ಮೂಲಕ ಪಡೆದುಕೊಳ್ಳಬಹುದಾಗಿದೆ.ಸಂಗ್ರಹವಾಗ ಹೆಚ್ಚುವರಿ ವಿದ್ಯುತ್ ಅನ್ನು ನಿಗಮಕ್ಕೆ ನೀಡಿದರೆ, ಗ್ರಾಹಕರಿಗೆ ಹಣ ಪಾವತಿ ಮಾಡುತ್ತೇವೆ. ಯುನಿಟ್‌ಗಳ ಲೆಕ್ಕದಲ್ಲಿ ಸೋಲಾರ್ ಶಕ್ತಿಯನ್ನು ಅಳವಡಿಸಕೊಳ್ಳಲು ಅವಕಾಶವಿದೆ. ಶೇಕಡ
ರೈತರು ಸಹ ತಮ್ಮ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಶಕ್ತಿ ಘಟಕವನ್ನು ಅಳವಡಿಸಿಕೊಂಡರೆ, ಬೆಳಗಿನ ಸಮಯದಲ್ಲಿಯೇ ತೋಟ ಹಾಗೂ ಗದ್ದೆಗಳಿಗೆ ನೀರು ಹಾಯಿಸಿಕೊಳ್ಳಲು ಸಹಕಾರಿಯಾಗುತ್ತದೆ.೧ ರಿಂದ ೨ ಕಿ.ವ್ಯಾಟ್ಸ್ ವಿದ್ಯುತ್‌ಗೆ ಸಬ್ಸಿಡಿ ೩೦ರಿಂದ ೬೦ ಸಾವಿರ ರೂ. ನೀಡಲಾಗುತ್ತದೆ. ೨ರಿಂದು ೩ ಕಿ. ವ್ಯಾಟ್ಸ್‌ಗೆ ೬೦ ರಿಂದ ೭೮ ಸಾವಿರ ರು. ಸಬ್ಸಿಡಿ ಇರುತ್ತದೆ. ಜೊತೆಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು. ಜಮೀನಿನಲ್ಲಿ ಕೃಷಿ ಪಂಪ್‌ಗಳಿಗೆ ಪಿಎಂ ಕುಸಮ್ ಬಿ ಯೋಜನೆಯಡಿಯಲ್ಲಿ ಸೌರ ಘಟಕ ಆಳವಡಿಸಿಕೊಂಡರೆ ೧ ರಿಂದ ೧೦ ಎಚ್‌ಪಿ ವರೆಗೆ ಸೌರ ಘಟಕವನ್ನು ಆಳವಡಿಸಿಕೊಳ್ಳು ಅವಕಾಶದಿಂದ ಈ ಘಟಕ ನಿರ್ಮಿಸಿಕೊಳ್ಳಲು ರಾಜ್ಯ ಸರ್ಕಾರ ಶೇ. ೫೦, ಕೇಂದ್ರ ಸರ್ಕಾರ ಶೇ. ೩೦ ಹಾಗೂ ರೈತರ ವಂತಿಗೆ ಶೇ ೨೦ ರಷ್ಟು ನೀಡಿದರೆ, ನಿಮ್ಮ ಜಮೀನಿನಲ್ಲಿ ಸೌರ ಪಂಪ್‌ಸೆಟ್ ಘಟಕವನ್ನು ನಿ ರ್ಮಿಸಿಕೊಳ್ಲಬಹುದಾಗಿದೆ ಎಂದರು.
ಹರದನಹಳ್ಳಿ ಸೆಸ್ಕಾಂ ಉಪ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ದೃಪದ್, ಮೂಡ್ನಾಕೂಡಿನ ರೈತರ ಪ್ರಕಾಶ್, ಮಧು ಮಾತನಾಡಿದರು.ಸಭೆಯಲ್ಲಿ ಹರದನಹಳ್ಳಿ ಉಪ ವಿಭಾಗದ ಇಂಜಿನಿಯರ್‌ಗಳಾದ ಮಹದೇವಸ್ವಾಮಿ, ಎಇಟಿ ಪ್ರದೀಪ್‌ಕುಮಾರ್, ಹಾಗೂ ರೈತರು, ಗ್ರಾಹಕರು ಇದ್ದರು.
-------8ಸಿಎಚ್ಎನ್16
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಉಪ ವಿಭಾಗದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಸಾರ್ವಜನಿಕ ವಿದ್ಯುತ್ ಸೇವೆಗಳು ಹಾಗೂ ಸುರಕ್ಷತಾ ಅರಿವು ಕಾರ್ಯಕ್ರಮ ನಡೆಯಿತು.----------------