ಭಾರತದಲ್ಲಿ ಒಲಂಪಿಕ್ಸ್ ಆಯೋಜನೆಗೊಳ್ಳುವ ಹಿನ್ನೆಲೆಯಲ್ಲಿ ದೇಶ ಒಲಂಪಿಕ್ಸ್‌ನಲ್ಲಿ ಹೆಚ್ಚು ಪದಕಗನ್ನು ಗಳಿಸಬೇಕು ಎಂಬ ಆಶಯದೊಂದಿಗೆ ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಆಚರಿಸುವ ಮೂಲಕ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಆದರಲ್ಲೂ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾದ ಡಾ. ಸಿ. ಎನ್. ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಭಾರತದಲ್ಲಿ ಒಲಂಪಿಕ್ಸ್ ಆಯೋಜನೆಗೊಳ್ಳುವ ಹಿನ್ನೆಲೆಯಲ್ಲಿ ದೇಶ ಒಲಂಪಿಕ್ಸ್‌ನಲ್ಲಿ ಹೆಚ್ಚು ಪದಕಗನ್ನು ಗಳಿಸಬೇಕು ಎಂಬ ಆಶಯದೊಂದಿಗೆ ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಆಚರಿಸುವ ಮೂಲಕ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಆದರಲ್ಲೂ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾದ ಡಾ. ಸಿ. ಎನ್. ಮಂಜುನಾಥ್ ಹೇಳಿದರು.

ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಸೂರಜ್ ರೇವಣ್ಣ ಅವರ ೩೮ನೇ ಹುಟ್ಟುಹಬ್ಬದ ಪ್ರಯುಕ್ತ ಎರಡು ದಿನಗಳ ಡಾ.ಸೂರಜ್ ರೇವಣ್ಣ ೫.೦ ಕಬಡ್ಡಿ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಿಯ ಕ್ರೀಡೆಗಳಲ್ಲಿ ಮೊದಲ ಸ್ಥಾನದಲ್ಲಿರುವ ಕಬಡ್ಡಿ ಪ್ರೊ.ಕಬಡ್ಡಿ ಪಂದ್ಯಾವಳಿಗಳಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇದೇ ರೀತಿ ದೇಶಿಯ ಕ್ರೀಡೆಗಳಾದ ಖೋಖೋ ವನ್ನು ಪ್ರೋತ್ಸಾಹಿಸಬೇಕಾಗಿದೆ. ಕಬಡ್ಡಿಯಲ್ಲಿ ಪುರುಷ ಮತ್ತು ಮಹಿಳಾ ತಂಡಗಳೆರೆಡು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ದೇಶಕ್ಕೆ ಸಂದ ಗರಿಮೆಯಾಗಿದೆ ಎಂದರು.

ಬದುಕು ಕೂಡ ಕಬಡ್ಡಿ ಆಟವನ್ನು ಅನುಕರಣೆ ಮಾಡುತ್ತದೆ. ಅಂದುಕೊಂಡಿದ್ದನ್ನು ಸಾಧಿಸಲು ಹೊರಟವನಿಗೆ ಕಬಡ್ಡಿ ಆಟದ ರೀತಿ ಕಾಲೇಳೆಯುವವರೇ ಹೆಚ್ಚು, ಜೀವನದ ಎಲ್ಲ ಕಾಲಘಟ್ಟದಲ್ಲಿಯೂ ಕ್ರೀಡಾ ಮನೋಭಾವವನ್ನು ಹೊಂದಬೇಕು, ಆಟದಲ್ಲಾಗಲಿ, ಬದುಕಿನಲ್ಲಾಗಲಿ ಸೋತಾಗ ಕುಗ್ಗದೇ ಮರು ಗೆಲುವಿಗೆ ಶ್ರಮಿಸಬೇಕು. ಕ್ರೀಡೆಯಲ್ಲಿ ತೊಡಗಿ ಸದೃಢವಾಗಬೇಕಿರುವ ಯುವಕರಲ್ಲಿ ಇಂದು ಶೇ.೬೦ರಷ್ಟು ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ದೇಶದಲ್ಲಿ ಶೇ. ೫೧ರಷ್ಟು ಯುವಕರು ಧೂಮಪಾನ ಮಾಡುತ್ತಿದ್ದಾರೆ. ಮದ್ಯಪಾನದಿಂದ ಸಕ್ಕರೆ ಕಾಯಿಲೆ, ಹೃದಯಘಾತಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ಮೆಡಿಕಲ್ ಶಾಪ್‌ಗಳಿಗಿಂತ ವೈನ್‌ಶಾಪ್‌ಗಳ ಸಂಖ್ಯೆ ಹೆಚ್ಚುತ್ತಿರುವುದು ದುರದೃಷ್ಟಕರವೆಂದರು.

ಪಂದ್ಯಾವಳಿಗೆ ಶುಭಕೋರಲು ಆಗಮಿಸಿದ್ದ ವಿಧಾನಪರಿಷತ್ತು ಉಪಸಭಾಪತಿ ಪ್ರಾಣೇಶ್ ಮಾತನಾಡಿ, ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಲಗೋರಿ, ಬುಗುರಿ, ಗೋಲಿ ಆಟಗಳನ್ನು ಆಡಿಕೊಂಡು ಬೆಳೆದ ನಮಗೆ ನಮ್ಮ ಮಣ್ಣಿನ ಕ್ರೀಡೆಯಾದ ಕಬಡ್ಡಿ ಇಂದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆ ತರುವಂತಹುದು, ಕಬಡ್ಡಿಯನ್ನು ಯುವಕರಲ್ಲಿ ಹೆಚ್ಚು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿವರ್ಷ ಡಾ. ಸೂರಜ್‌ ರೇವಣ್ಣನವರು ರಾಜ್ಯಮಟ್ಟದ ಟೂರ್ನಮೆಂಟ್ ಅಯೋಜಿಸುತ್ತಾ ಬಂದಿರುವುದು ಅವರಲ್ಲಿ ಕ್ರೀಡಾಪ್ರೇಮಕ್ಕೆ ಸಾಕ್ಷಿಯಾಗಿದೆ.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಕಲೆ, ಸಾಹಿತ್ಯ, ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಜಿಲ್ಲೆಯಲ್ಲಿ, ಗ್ರಾಮೀಣ ಸೊಗಡಿನ ಕ್ರೀಡೆ ಕಬಡ್ಡಿಗೆ ಹೆಚ್ಚಿನ ಆದ್ಯತೆ ನೀಡಿ ಡಾ. ಸೂರಜ್ ರೇವಣ್ಣ ಕಬ್ಬಡಿ ಪಂದ್ಯಾವಳಿ ಅಯೋಜಿಸಿದ್ದಾರೆ. ಅವರು ಯುವಕರ ಪ್ರೇರಣೆ ಶಕ್ತಿಯಾಗಿದ್ದರೆ, ತಾವು ಶಾಸಕರಾಗಿರುವ ಮೂರು ಅವಧಿಯಲ್ಲಿಯೂ ತಾಲೂಕಿನಲ್ಲಿ ಕ್ರೀಡೆ, ಕಲೆ, ನೀರಾವರಿ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದು, ತಾಲೂಕಿನ ಕ್ರೀಡಾಪಟುಗಳ ಅನುಕೂಲಕ್ಕಾಗಿ ತಾಲೂಕು ಕ್ರೀಡಾಂಗಣದಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಇದೇ ವೇಳೆ ರಾಷ್ಟ್ರೀಯ ಕಬ್ಬಡಿ ಆಟಗಾರರು, ಪ್ರೊ. ಕಬಡ್ಡಿಯನ್ನು ಪ್ರೋತ್ಸಾಹಿಸಿದ ಆಟಗಾರರಾದ ಗಗನ್‌ಗೌಡ, ಜಿ.ಎನ್. ಪವನ್, ಮನೋಜ್, ಚೇತನ್ ದೇವಾಡಿಗ, ಗಣೇಶ್, ಸೇರಿ ರಾಜ್ಯ ಕಬ್ಬಡಿ ಅಮೆಚೂರ್ ಅಸೋಸಿಯೇಷನ್ ಅಧ್ಯಕ್ಷ ಪಾಪೇಗೌಡರನ್ನು ಇದೇ ವೇಳೆ ಅಭಿನಂದಿಸಲಾಯಿತು.

ಪಂದ್ಯಾವಳಿಯಲ್ಲಿ ಮೈಸೂರಿನ ಕುಂಬಾರಕೊಪ್ಪಲು ಕಬಡ್ಡಿ ತಂಡ ಡಾ.ಸೂರಜ್‌ ರೇವಣ್ಣ ಕಪ್ ಹಾಗೂ ೯೦ಸಾವಿರ ನಗದು ಪಡೆದು ಪ್ರಥಮ ಸ್ಥಾನಗಳಿಸಿತ್ತು, ರನ್ನರ್ ಆಪ್ ಆಗಿ ಕೆ.ಆರ್. ಪೇಟೆ ತಾಲೂಕಿನ ಬೋರಮಾರನಹಳ್ಳಿ ತಂಡ ಕಪ್ ಹಾಗೂ ೫೦ಸಾವಿರ ನಗದು ಹಾಗೂ ತೃತೀಯ ಸ್ಥಾನವನ್ನು ಜೆಕೆಎಂ ಬುಲ್ಸ್ ತಂಡ ಕಪ್ ಹಾಗೂ ೩೦ಸಾವಿರ ನಗದು ಪಡೆಯಿತು. ಕುಂಬಾರಕೊಪ್ಪಲು ತಂಡದ ಆಟಗಾರ ಧರ್ಮ ಬೆಸ್ಟ್ ರೈಡರ್ ಪ್ರಶಸ್ತಿ ಪಡೆದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ತು ಸದಸ್ಯ ಸುಜಾ ಕುಶಲಪ್ಪ, ಅರುಣ್, ಡಾ.ವಿವೇಕಾನಂದ, ಸ್ನೆಹವೆಂಕಾರೆ, ಶಾಸಕರಾದ ಎ.ಮಂಜು, ಸ್ವರೂಪ್ ಪ್ರಕಾಶ್, ಮಾಜಿ ಶಾಸಕರುಗಳಾದ ಹೆಚ್.ಕೆ.ಕುಮಾರಸ್ವಾಮಿ, ಲಿಂಗೇಶ್, ವೈಎಸ್‌ವಿ ದತ್ತ, ಮುಖಂಡರಾದ ಸಿ.ಎನ್.ಪುಟ್ಟಸ್ವಾಮಿಗೌಡ, ನಾರಾಯಣಗೌಡ, ಕಣಗಾಲ್ ಮಂಜಣ್ಣ, ಹೊನ್ನವಳ್ಳಿ ಸತೀಶ್, ಬೂವನಹಳ್ಳಿ ಸ್ವಾಮಿ, ಅನಿಲ್ ಮರಗೂರ್, ಬೋರೆಗೌಡ, ಗಗನ್, ಕೆಂಪೇಗೌಡ, ಮಂಜೇಗೌಡ ಸೇರಿ ಇತರರು ಇದ್ದರು.========

ಫೋಟೋ

೫ ಸಿಆರ್‌ಪಿ ೧ ಎಚನ್ನರಾಯಪಟ್ಟಣದಲ್ಲಿ ನಡೆದ ಡಾ. ಸೂರಜ್ ರೇವಣ್ಣ ಕಪ್ ೫.೦ ಕಬ್ಬಡಿ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಕಬಡ್ಡಿ ಆಟಗಾರರನ್ನು ಅಭಿನಂದಿಸಲಾಯಿತು. ----------ಫೋಟೋ

೫ ಸಿಆರ್‌ಪಿ ೧ ಬಿ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿದ ಮೈಸೂರಿನ ಕುಂಬಾರಕೊಪ್ಪಲು ತಂಡಕ್ಕೆ ಟ್ರೋಫಿ, ನಗದು ಬಹುಮಾನ ವಿತರಿಸಿದ ಎಂಎಲ್ಸಿ ಡಾ. ಸೂರಜ್ ರೇವಣ್ಣ.