ಪ್ರಕೃತಿ ಮಡಿಲಲ್ಲಿ ಹಸಿರು ಯೋಗ ದಿನಾಚರಣೆ

| Published : May 18 2025, 01:32 AM IST

ಸಾರಾಂಶ

ಕುಂದಾಣ: ನಮ್ಮ ಋಷಿ ಮುನಿಗಳು ಸಾವಿರಾರು ವರ್ಷಗಳ ಹಿಂದೆ ಪ್ರಪಂಚಕ್ಕೆ ಕೊಡುಗೆಯಾಗಿ ಆರ್ಯುವೇದ ಮತ್ತು ಯೋಗ ನೀಡಿದ್ದಾರೆ. ನಮ್ಮ ದೇಶ ಆಧ್ಯಾತ್ಮಿಕ, ಆರ್ಯವೇದ, ಯೋಗದಲ್ಲಿ ಪ್ರಪಂಚಕ್ಕೆ ವಿಶ್ವಗುರುವಾಗಿದ್ದೇವೆ ಎಂದು ಮಾಜಿ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಪ್ರಸ್ಟೀಜ್ ಗ್ಘಾಲ್ ಶೇರ್ ಕ್ಲಬ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿ.ಡಿ.ಕಿರಣ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಗ ದಿನಾಚರಣೆ ವಿಶ್ವ ಮಟ್ಟದಲ್ಲಿ ಅಚರಿಸುವಂತೆ ಮತ್ತು ಯೋಗದ ಮಹತ್ವವನ್ನು ಸಾರಿದರು. ಇದರ ಪ್ರಯುಕ್ತ ಪರಿಸರದ ಜೊತೆಯಲ್ಲಿ ಯೋಗದ ಮಹತ್ವ ತಿಳಿಸಲು ಹರಿತ್ ಯೋಗ ಅಚರಿಸಲಾಗುತ್ತಿದೆ. ಯೋಗ ದೇಹ ಮತ್ತು ಮನಸ್ಸಿಗೆ, ಹಸಿರು ಬೆಳೆದು ಉಸಿರಾಗಿ ಬಳಸಿಕೊಂಡು ಆರೋಗ್ಯವಂತರಾಗಿ ಬಾಳುವುದು. ಹಸಿರುಯೋಗದ ಉದ್ದೇಶವೆಂದರೆ ಭೂಮಿಯ ಫಲವತ್ತತೆ ಉಳಿಸಕೊಳ್ಳುವುದು ಮತ್ತು ಸಸಿ ನೆಟ್ಟು ಹಸಿರು ಪರಿಸರ ಉಳಿಸಿಕೊಳ್ಳವುದು. ಪ್ರಕೃತಿ ಉಳಿಸಿಕೊಳ್ಳುವುದು, ಆರೋಗ್ಯ ಕಾಪಾಡಿಕೊಳ್ಳುವುದು ಹಸಿರು ಯೋಗದ ಉದ್ದೇಶ ಎಂದರು.

ಹಸಿರು ಯೋಗದ ಪ್ರಯುಕ್ತ ತಾಯಿಯ ಹೆಸರಿನಲ್ಲಿ ಸಸಿ ನೆಟ್ಟು ಪೋಷಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಶ್ಯೂನ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸಲಾಯಿತು.

ಇದೆ ವೇಳೆ ಅಂತಾರಾಷ್ಟ್ರೀಯ ಮಾನವತಾವಾದಿ ಡಾ.ಸಂಜನಾ ಜಾನ್, ಮಾಜಿ ಕುಲಪತಿಗಳಾದ ಡಾ.ವೇಣುಗೋಪಾಲ್, ಅಂತಾರಾಷ್ಟ್ರೀಯ ಕ್ರೀಡಾಪಟು ಮಂಜುನಾಥ್ ಹೆಗ್ಡೆ ಇತರರಿದ್ದರು.