ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಜಿಬಿಡಿಎ) ಅನುಷ್ಠಾನಗೊಳಿಸುತ್ತಿರುವ ಬಿಡದಿ ಟೌನ್‌ಶಿಪ್ ಯೋಜನೆ ಸಂಬಂಧ ರಾಜ್ಯ ಸರ್ಕಾರಕ್ಕೆ ಸೂಕ್ತ ಶಿಫಾರಸ್ಸು ಸಲ್ಲಿಸಲು ರಚನೆಯಾಗಿರುವ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ಸೆ.30ರಿಂದ ಎರಡು ದಿನಗಳ ಕಾಲ ಯೋಜನೆ ವ್ಯಾಪ್ತಿಯ ರೈತರಿಂದ ಅಹವಾಲು ಸ್ವೀಕರಿಸಲಿದೆ
ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಜಿಬಿಡಿಎ) ಅನುಷ್ಠಾನಗೊಳಿಸುತ್ತಿರುವ ಬಿಡದಿ ಟೌನ್‌ಶಿಪ್ ಯೋಜನೆ ಸಂಬಂಧ ರಾಜ್ಯ ಸರ್ಕಾರಕ್ಕೆ ಸೂಕ್ತ ಶಿಫಾರಸ್ಸು ಸಲ್ಲಿಸಲು ರಚನೆಯಾಗಿರುವ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ಸೆ.30ರಿಂದ ಎರಡು ದಿನಗಳ ಕಾಲ ಯೋಜನೆ ವ್ಯಾಪ್ತಿಯ ರೈತರಿಂದ ಅಹವಾಲು ಸ್ವೀಕರಿಸಲಿದೆ.
ಬಿಡದಿ ಟೌನ್‌ಶಿಪ್ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಕಳೆದ 565ಕ್ಕೂ ಹೆಚ್ಚು ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಮಣಿದಿರುವ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಗುಹನಾಥನ್ ನರೇಂದರ್ ನೇತೃತ್ವದ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಪರಿಶೀಲನಾ ಸಮಿತಿ ಸೆ.30 ಮತ್ತು ಅ.1ರಂದು ರೈತರಿಂದ ಅಹವಾಲು ಸ್ವೀಕರಿಸಲು ಮುಂದಾಗಿದೆ.ಈ ಎರಡು ದಿನವೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 11.30ರಿಂದ ಸಂಜೆ 4ರವರೆಗೆ ಅಹವಾಲು ಸ್ವೀಕರಿಸುವ ಸ್ಥಳ, ಸಮಯ ಹಾಗೂ ಗ್ರಾಮಗಳ ಹೆಸರು ನಿಗದಿಯಾಗಿದೆ. ಈ ಸಮಿತಿ ಟೌನ್ ಶಿಪ್ ಯೋಜನೆಯ ಕಾನೂನಾತ್ಮಕ, ಮಾನವೀಯ ಮತ್ತು ಸಮಗ್ರ ಅಭಿವೃದ್ಧಿಯ ಚೌಕಟ್ಟಿನಲ್ಲಿ ಪರಿಶೀಲಿಸಿ, ರಾಜ್ಯ ಸರ್ಕಾರಕ್ಕೆ ಸೂಕ್ತ ಶಿಫಾರಸ್ಸುಗಳನ್ನು ಮಾಡಲಿದೆ.
ಪರ ವಿರೋಧ ರೈತರಿಂದ ಪೂರ್ವ ನೋಂದಣಿ:ಅಹವಾಲು ಸಲ್ಲಿಸಲು ಇಚ್ಛಿಸುವ ಭೂ ಮಾಲೀಕರು - ರೈತರು ಬಿಡದಿ ಹೋಬಳಿಯ ಉಪ ತಹಸೀಲ್ದಾರ್ ಕಚೇರಿಯಲ್ಲಿ ತಮ್ಮ ಜಮೀನಿನ ಆರ್‌ಟಿಸಿ ಮತ್ತು ಆಧಾರ್‌ಕಾರ್ಡ್ ಪ್ರತಿ ತೋರಿಸಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಹೆಸರು ನೋಂದಾಯಿಸಿಕೊಂಡ ರೈತರು - ಭೂ ಮಾಲೀಕರು ಮಾತ್ರ ನಿಗದಿತ ದಿನಾಂಕಗಳಂದು ಸಮಿತಿಯ ಮುಂದೆ ಹಾಜರಾಗಿ ತಮ್ಮ ಮನವಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಯೋಜನೆ ಪರವಾಗಿರುವ ಮತ್ತು ವಿರೋಧ ವ್ಯಕ್ತ ಪಡಿಸುತ್ತಿರುವ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ.ರೈತರ ಒತ್ತಾಯಕ್ಕೆ ಮಣಿಯದ ಸಮಿತಿ:
ಬಿಡದಿ ಟೌನ್‌ಶಿಪ್ ಯೋಜನೆ ಪರಿಶೀಲನಾ ಸಮಿತಿ ಬಾಧಿತ ಎಲ್ಲರೂ ತಮ್ಮ ಅಹವಾಲು ಸಲ್ಲಿಸಲು ಅವಕಾಶ ನೀಡಬೇಕು. ಸಮಿತಿಯ ವರದಿ ನಂತರ ಮುಂದಿನ ನಿರ್ಧಾರ ಕೈಗೊಳ್ಳುವ ತನಕ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಲ್ಲಾ ಭೂ ಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡುವಂತೆ ಕೋರಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘ ಜಿಲ್ಲಾಡಳಿದ ಮೂಲಕ ಸಲ್ಲಿಸಿದ್ದ ಮನವಿಗೆ ಜಸ್ಟೀಸ್ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ಸ್ಪಂದಿಸಿಲ್ಲ.ಆದರೂ ಟೌನ್‌ಶಿಪ್ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು ಕೂಡ ಪಹಣಿ ಮತ್ತು ಆಧಾರ್ ಕಾರ್ಡ್ ನೀಡಿ ಹೆಸರು ನೋಂದಣಿ ಮಾಡಿಸಿದ್ದಾರೆ. ಅವರೆಲ್ಲರು ಅಹವಾಲು ಹೇಳಿಕೊಳ್ಳುವ ಸಂದರ್ಭದಲ್ಲಿಯೇ ಸಮಿತಿ ಅಧ್ಯಕ್ಷರಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಬಾಕ್ಸ್ ......................ಅಹವಾಲು ಸ್ವೀಕಾರ ವಿವರ :
ಸೆ.30ರಂದು ಬೈರಮಂಗಲ, ಬನ್ನಿಗಿರಿ, ಕೆ.ಜಿ.ಗೊಲ್ಲರಪಾಳ್ಯ, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ರೈತರಿಂದ ಸಮಿತಿ ಅಹವಾಲು ಸ್ವೀಕರಿಸಲಿದೆ.ಅ.1ರಂದು ಹೊಸೂರು, ಕಂಚುಗಾರನಹಳ್ಳಿ, ಅರಳಾಳುಸಂದ್ರ, ವಡೇರಹಳ್ಳಿ ರೈತರಿಂದ ಅಹವಾಲು ಸ್ವೀಕಾರ ಮಾಡಲಿದೆ.
ಬಾಕ್ಸ್ ........................ರೈತರ ಹಕ್ಕೊತ್ತಾಯಗಳು?:
1. ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಪರಿಶೀಲನಾ ಸಮಿತಿಯಲ್ಲಿ ಕೃಷಿ ತಜ್ಞರು, ಪರಿಸರ ತಜ್ಞರು ಮತ್ತು ಸಾಮಾಜಿಕ ತಜ್ಞರನ್ನು ಸೇರ್ಪಡೆ ಮಾಡಬೇಕು.2. ನಿವೃತ್ತ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ಸಮಿತಿ ಬಿಡದಿ ಟೌನ್ ಶಿಪ್ ಯೋಜನಾ ಬಾಧಿತ ಎಲ್ಲಾ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಕೃಷಿ ಪರಿಸ್ಥಿತಿಯನ್ನು ತಿಳಿಯಬೇಕು. ಗ್ರಾಮ ಪಂಚಾಯತಿ ಕಛೇರಿಯಲ್ಲಿ ಅಹವಾಲು ಸ್ವೀಕಾರ ಕೇಂದ್ರ ತೆರೆಯಬೇಕು. ಅಹವಾಲು ಸಲ್ಲಿಸಲು ಬಯಸುವ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಅಹವಾಲು ಸಲ್ಲಿಸಲು ಅವಕಾಶ ಇರುವಂತೆ ಅಹವಾಲು ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಒದಗಿಸಬೇಕು.
3. ನಿವೃತ್ತ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ಸಮಿತಿ ತನ್ನ ವರದಿ ನೀಡಿ ಮುಂದಿನ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳುವವರೆಗೆ ಯಾವುದೇ ರೀತಿಯ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಸ್ಮಗಿತಗೊಳಿಸಬೇಕು.4. ರಾಜ್ಯದ ಯಾವುದೇ ನಾಗರಿಕರು ಬಿಡದಿ ಟೌನ್ ಶಿಪ್ ಕುರಿತು ತಮ್ಮ ಅಹವಾಲುಗಳನ್ನು ಇ ಮೇಲ್, ಅಂಚೆ ಹಾಗೂ ನೇರವಾಗಿ ಕಚೇರಿಗೆ ತಲುಪಿಸಲು ಅವಕಾಶ ಕಲ್ಪಿಸಬೇಕು.
29ಕೆಆರ್ ಎಂಎನ್ 5,6.ಜೆಪಿಜಿ5.ನಿವೃತ್ತ ನ್ಯಾಯಮೂರ್ತಿ ಗುಹನಾಥನ್ ನರೇಂದರ್
6.ಜಿಲ್ಲಾಧಿಕಾರಿಗಳ ಕಚೇರಿ.--------------------------