ಗೃಹ ಲಕ್ಷ್ಮೀಗೆ ಲಕ್ಷ್ಮೀಯವರಿಂದಲೇ ತಡೆ: ಬಿಜೆಪಿ ಮಹಿಳಾ ಮೋರ್ಚಾ ಟೀಕೆ

| Published : Feb 26 2025, 01:04 AM IST

ಗೃಹ ಲಕ್ಷ್ಮೀಗೆ ಲಕ್ಷ್ಮೀಯವರಿಂದಲೇ ತಡೆ: ಬಿಜೆಪಿ ಮಹಿಳಾ ಮೋರ್ಚಾ ಟೀಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅನಾರೋಗ್ಯದ ಕುಂಟು ನೆಪವೊಡ್ಡಿ ಸರ್ಕಾರದ ಹುಳುಕನ್ನು ಮುಚ್ಚಿ ಹಾಕುವ ಪ್ರಯತ್ನ ಇದಾಗಿದೆ. ಉಪಚುನಾವಣೆ ಸಂದರ್ಭಗಳಲ್ಲಿ ತರಾತುರಿಯಲ್ಲಿ ಹಣ ಹಾಕುವ ವ್ಯವಸ್ಥೆ ಇರುವಾಗ ಬಾಕಿ ಸಮಯದಲ್ಲಿ ತಡವೇಕೆ? ಸಚಿವರ ಆರೋಗ್ಯ ಶೀಘ್ರ ಗುಣಮುಖವಾಗಲಿ ಎಂಬ ಆಶಯ ನಮ್ಮದು ಕೂಡ ಇದೆ. ಹಾಗಂತ ಚುನಾವಣೆ ಸಂದರ್ಭದಲ್ಲಿ ನೀಡಿದ ವಚನಕ್ಕೆ ಬದ್ಧರಾಗಿ ಸಮಯಕ್ಕೆ ಸರಿಯಾಗಿ ರಾಜ್ಯದ ಬಡ ಮಹಿಳೆಯರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವಿನಯ ಡಿ. ಬಂಗೇರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ತಮ್ಮ ಅನಾರೋಗ್ಯದ ಕಾರಣಕ್ಕೆ ಗ್ಯಾರಂಟಿ ಯೋಜನೆಯಾದ ಗೃಹ ಲಕ್ಷ್ಮೀಗೆ ಹಣ ಬಿಡುಗಡೆ ವಿಳಂಬ ಹೇಳಿಕೆ ಸಮಂಜಸವಲ್ಲ. ಆರೋಗ್ಯ ಸರಿಯಿಲ್ಲದಿದ್ದರೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು, ಸಹಾಯಕರು ಇದ್ದಾರೆ. ಗೃಹ ಲಕ್ಷ್ಮೀ ಯೋಜನೆಗೆ ಹಣ ತಮ್ಮ ಖಾಸಗಿ ಖಾತೆಯಿಂದಲ್ಲ ಸರ್ಕಾರದ ಖಜಾನೆಯಿಂದ, ಜನರ ತೆರಿಗೆಯ ಹಣದಿಂದ ನೀಡುವಂತದ್ದು ಎಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವಿನಯ ಡಿ. ಬಂಗೇರ ಹೇಳಿದ್ದಾರೆ.

ಅನಾರೋಗ್ಯದ ಕುಂಟು ನೆಪವೊಡ್ಡಿ ಸರ್ಕಾರದ ಹುಳುಕನ್ನು ಮುಚ್ಚಿ ಹಾಕುವ ಪ್ರಯತ್ನ ಇದಾಗಿದೆ. ಉಪಚುನಾವಣೆ ಸಂದರ್ಭಗಳಲ್ಲಿ ತರಾತುರಿಯಲ್ಲಿ ಹಣ ಹಾಕುವ ವ್ಯವಸ್ಥೆ ಇರುವಾಗ ಬಾಕಿ ಸಮಯದಲ್ಲಿ ತಡವೇಕೆ? ಸಚಿವರ ಆರೋಗ್ಯ ಶೀಘ್ರ ಗುಣಮುಖವಾಗಲಿ ಎಂಬ ಆಶಯ ನಮ್ಮದು ಕೂಡ ಇದೆ. ಹಾಗಂತ ಚುನಾವಣೆ ಸಂದರ್ಭದಲ್ಲಿ ನೀಡಿದ ವಚನಕ್ಕೆ ಬದ್ಧರಾಗಿ ಸಮಯಕ್ಕೆ ಸರಿಯಾಗಿ ರಾಜ್ಯದ ಬಡ ಮಹಿಳೆಯರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.