ಗೃಹಲಕ್ಷ್ಮಿ ಯೋಜನೆಯ ಸೆಪ್ಟೆಂಬರ್ ತಿಂಗಳ ಹಣ ಮುಂದಿನ ವಾರದಲ್ಲಿ ಫಲಾನುಭವಿಗಳ ಖಾತೆಗೆ ಜಮೆವಾಗುತ್ತದೆ. ಈಗಾಗಲೇ 2025 ಆಗಸ್ಟ್ ತಿಂಗಳ ಹಣ ಫಲಾನುಭವಿಗಳ ಖಾತೆಗಳಿಗೆ ಜಮೆ ಆಗಿದೆ. ಸೆಪ್ಟಂಬರ್ ತಿಂಗಳ ಹಣಕ್ಕೆ ಅದರ ಬಿಲ್ಲುಗಳು ಸಿದ್ಧವಾಗುತ್ತಿದೆ. ಈ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಹಣ ಜಮೆವಾಗಲಿದೆ.
ಶ್ರೀರಂಗಪಟ್ಟಣ: ಗೃಹಲಕ್ಷ್ಮಿ ಯೋಜನೆಯ ಸೆಪ್ಟೆಂಬರ್ ತಿಂಗಳ ಹಣ ಮುಂದಿನ ವಾರದಲ್ಲಿ ಫಲಾನುಭವಿಗಳ ಖಾತೆಗೆ ಜಮೆವಾಗುತ್ತದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್.ದಿನೇಶ್ ತಿಳಿಸಿದರು.
ಪಟ್ಟಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಈಗಾಗಲೇ 2025 ಆಗಸ್ಟ್ ತಿಂಗಳ ಹಣ ಫಲಾನುಭವಿಗಳ ಖಾತೆಗಳಿಗೆ ಜಮೆ ಆಗಿದೆ. ಸೆಪ್ಟಂಬರ್ ತಿಂಗಳ ಹಣಕ್ಕೆ ಅದರ ಬಿಲ್ಲುಗಳು ಸಿದ್ಧವಾಗುತ್ತಿದೆ. ಈ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಹಣ ಜಮೆವಾಗಲಿದೆ ಎಂದರು. ಅನ್ನಭಾಗ್ಯ ಯೋಜನೆಯಡಿ 75 ವರ್ಷ ತುಂಬಿದ ವೃದ್ಧರ ಮನೆ ಬಾಗಿಲಿಗೆ ಪಡಿತರ ರವಾನಿಸಲಾಗುತ್ತದೆ. ಪಡಿತರ ಅಂಗಡಿಗಳಲ್ಲಿ ಹೆಸರು ನೋಂದಾಯಿಸಬೇಕು ಎಂದರು.ಈ ವೇಳೆ ತಾಲೂಕು ಯೋಜನಾಧಿಕಾರಿ ತ್ರಿವೇಣಿ ಎಂ.ಎಂ, ಜಿಲ್ಲಾ ಸಮಿತಿ ಸದಸ್ಯ ಅನ್ಸರ್ ಪಾಷ, ಅನುಷ್ಠಾನ ಸಮಿತಿ ಸದಸ್ಯರಾದ ಕಾಳೇಗೌಡ, ರವಿಕುಮಾರ್ ಸಂಜು, ಸತೀಶ್, ನಾರಾಯಣ್, ಸತೀಶ, ನಾಗರಾಜು ಸೇರಿದಂತೆ ಇತರೆ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.
ಕೆವಿಎಸ್‌ಎಸ್ ತಂಡ ಪ್ರಥಮ, 1 ಲಕ್ಷ ರು. ನಗದು ಬಹುಮಾನಮಂಡ್ಯ: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಡೋಜ ಡಾ.ಜಿ.ನಾರಾಯಣ ಪ್ರತಿಷ್ಠಾನದಿಂದ ಆಯೋಜಿಸಿದ್ದ ವಿಶ್ವ ದಾಖಲೆ ಜಾನಪದ ನೃತ್ಯ ಸ್ಪರ್ಧೆಯಲ್ಲಿ ತಾಲೂಕಿನ ಕೀಲಾರ ಗ್ರಾಮದ ಕೆವಿಎಸ್‌ಎಸ್ ಕಲಾ ಬಳಗ ತಂಡ ಪ್ರಥಮ ಸ್ಥಾನ ಪಡೆದು 1 ಲಕ್ಷ ರು. ಬಹುಮಾನ ಹಾಗೂ ಪ್ರಶಸ್ತಿ ಫಲಕ ಪಡೆದಿದೆ.
ಈ ಕುರಿತು ಮಾತನಾಡಿದ ಸಂಘದ ಸಂಸ್ಥಾಪಕ ಹಾಗೂ ಅಂತಾರಾಷ್ಟ್ರೀಯ ಜಾನಪದ ಕಲಾವಿದ ಕೀಲಾರ ಸುರೇಶ್, ರಾಜ್ಯದ ವಿವಿಧೆಡೆ 32 ತಂಡಗಳು ಭಾಗವಹಿಸಿದ್ದು ನಾಡಿನ ಕಲಾ ಪ್ರಕಾರಗಳು ಮೇಳೈಸಿದ್ದು ಇದರಲ್ಲಿ ನಮ್ಮ ತಂಡವು ಪೂಜಾ ಕುಣಿತ ಪ್ರದರ್ಶನ ನೀಡಿದ್ದು ನೆರೆದಿದ್ದ ಜನಸಾಗರ ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದು ಪ್ರಥಮ ಸ್ಥಾನ ಪಡೆದು ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದರು.ಡಿ.30 ರಂದು ವೈಕುಂಠ ಏಕಾದಶಿ ಅಂಗವಾಗಿ ಕಲ್ಯಾಣೋತ್ಸವ
ಮಂಡ್ಯ: ವಿದ್ಯಾನಗರದ ಶ್ರೀಅನ್ನದಾತೆ ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡಿ.30 ರಂದು ಶ್ರೀದೇವಿ ಮತ್ತು ಭೂದೇವಿ ಸಮೇತ ಶ್ರೀನಿವಾಸ ದೇವರ ವೈಕುಂಠ ಏಕಾದಶಿ ಪ್ರಯುಕ್ತ ಬೆಳಗಿನ ಜಾವ 5 ಗಂಟೆಗೆ ಕಲ್ಯಾಣೋತ್ಸವ, ದೇವರ ಉತ್ಸವ, ನಾದಸ್ವರದಂದಿಗೆ ಹಾಗೂ ವೇದಘೋಷದೊಂದಿಗೆ ಗೋಪೂಜೆ ನಂತರ ವೈಕುಂಠದ್ವಾರ ಬಾಗಿಲು ತೆರೆಯಲಿದೆ ಎಂದು ಶಾಂತಕುಮಾರ್ ಸ್ವಾಮೀಜಿ ಹಾಗೂ ಭಕ್ತರು ತಿಳಿಸಿದ್ದಾರೆ.