Groundbreaking Ceremony for the Development of the Viraktamatha Road at a Cost of 2 Crore

ಕನ್ನಡಪ್ರಭ ವಾರ್ತೆ ತುರುವೇಕೆರೆ

ಪಟ್ಟಣದ ಹೊರಪೇಟೆ ರಸ್ತೆಯಲ್ಲಿರುವ ವಿರಕ್ತ ಮಠಕ್ಕೆ ಸಿಸಿ ರಸ್ತೆ ನಿರ್ಮಿಸಲು ಭೂಮಿಪೂಜೆ ನೆರವೇರಿಸಲಾಯಿತು. ಲೋಕೋಪಯೋಗಿ ಇಲಾಖಾ ವತಿಯಿಂದ ಸುಮಾರು 2 ಕೋಟಿ ವೆಚ್ಚದಲ್ಲಿ ಪಟ್ಟಣದ ಬಾಣಸಂದ್ರ ರಸ್ತೆಯ ಎನ್ ಎಚ್ 150 ಎ ಯಿಂದ ವಿರಕ್ತ ಮಠಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮಿಯವರು ಮತ್ತು ಶಾಸಕ ಎಂ.ಟಿ.ಕೃಷ್ಣಪ್ಪನವರು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ ಬಹುವರ್ಷಗಳಿಂದ ಈ ರಸ್ತೆ ನಿರ್ಮಾಣ ಮಾಡಬೇಕೆಂಬ ಕನಸು ಈಗ ಈಡೇರಿದೆ. ಗುತ್ತಿಗೆದಾರರು ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿದರು. ಈ ವೇಳೆ ಮಠದ ಕಿರಿಯ ಸ್ವಾಮೀಜಿಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ವಿರಕ್ತ ಮಠದ ವ್ಯವಸ್ಥಾಪಕ ನಟೇಶ್, ಎಸ್. ಎಂ.ಕುಮಾರಸ್ವಾಮಿ, ತಹಸೀಲ್ದಾರ್ ಜಗನ್ನಾಥ್, ಪಟ್ಟಣ ಪಂಚಾಯಿತಿ ಕಂದಾಯ ತನಿಖಾಧಿಕಾರಿ ಪ್ರಶಾಂತ್ ಭದ್ರನ್ನವರ್, ಪಿ ಡಬ್ಲ್ಯು ಡಿ ಇಲಾಖಾ ಇಎಎ ಕಣ್ಮಣಿ, ಪಟ್ಟಣ ಪಂಚಾಯತ್ ಸಿಇಓ ಶ್ರೀನಾಥ್ ಬಾಬು, ಲಯನ್ಸ್ ಕ್ಲಬ್ ನ ಅಧ್ಯಕ್ಷ ಸುನಿಲ್ ಬಾಬು, ಜೆಡಿಎಸ್ ವಕ್ತಾರ ವೆಂಕಟಾಪುರ ಯೋಗೀಶ್, ಹೋಟೆಲ್ ಗಣೇಶ್, ಮಾದಿಹಳ್ಳಿ ಕಾಂತರಾಜ್ ಸೇರಿದಂತೆ ಹಲವರು ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದರು.