ಸಾರಾಂಶ
ಪ.ಪಂ. ಕಚೇರಿಯಲ್ಲಿ ವಿಶ್ವ ಜಲ ಸಂರಕ್ಷಣಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ಮೂಡಿಗೆರೆನೀರು ಅತಿ ಅಮೂಲ್ಯವಾದ ಜೀವದ್ರವ. ಪ್ರಕೃತಿದತ್ತವಾಗಿ ಬಂದ ಕೊಡುಗೆಯನ್ನು ಮಿತವಾಗಿ ಬಳಸಿ ಅದನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕಸಾಪ ತಾಲೂಕು ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ ಹೇಳಿದರು. ಗುರುವಾರ ಪಟ್ಟಣದ ಪ.ಪಂ. ಕಚೇರಿ ಆವರಣದಲ್ಲಿ ವಿಶ್ವ ಜಲ ಸಂರಕ್ಷಣಾ ದಿನಾಚರಣೆ ಅಂಗವಾಗಿ ವಿಎಂಪಿಎಂ ಟ್ರಸ್ಟ್, ಕಸಾಪ ಹಾಗೂ ಕರವೇಯಿಂದ ವಿಶ್ವ ಜಲ ದಿನದ ಮಹತ್ವ, ನೀರಿನ ಸಂರಕ್ಷಣೆ ಜಾಗೃತಿ ಕುರಿತ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಈ ಹಿಂದೆ ಮಲೆನಾಡಿನಲ್ಲಿ ನೀರಿಗೆ ಕೊರತೆ ಉಂಟಾಗುತ್ತಿರಲಿಲ್ಲ. ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದನ್ನು ತಪ್ಪಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕರವೇ ಅಧ್ಯಕ್ಷ ವಿನೋದ್ ಮಾತನಾಡಿ, ಅಗತ್ಯಕ್ಕೆ ತಕ್ಕಷ್ಟು ಮಾತ್ರ ನೀರನ್ನು ಮಿತವಾಗಿ ಬಳಸಬೇಕು. ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ತಡೆಯಲು ಸಾರ್ವಜನಿಕರು ಕೈ ಜೋಡಿಸಬೇಕಾಗಿದೆ ಎಂದು ಹೇಳಿದರು. ವಿಎಂಪಿಎಂ ಟ್ರಸ್ಟ್ ಅಧ್ಯಕ್ಷ ವಿ.ಪಿ.ನಾರಾಯಣ್ ಮಾತನಾಡಿ, ನಮ್ಮ ಟ್ರಸ್ಟ್ ನಿಂದ ಮಾ.21 ರಂದು ಬೆಳಗ್ಗೆ 11 ಗಂಟೆಗೆ ಪ.ಪಂ. ಸಭಾಂಗಣದಲ್ಲಿ ಜಲ ಸಂರಕ್ಷಣೆ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಶಾಂತ್ ಕುಮಾರ್, ಸುಗ್ರಾಮ ಸಂಯೋಜಕ ನವೀನ್ ಆನೆದಿಬ್ಬ, ಸಮಾಜ ಸೇವಕ ಹಸೇನಾರ್, ಎಂ.ಎಸ್.ನಾಗರಾಜು, ಕಾಂತ್‌ರಾಜ್, ವಿಜಯಲಕ್ಷ್ಮಿ, ಕಾರ್ತಿಕ್, ಮಹೇಶ್, ಲೋಕೇಶ್ ಉಪಸ್ಥಿತರಿದ್ದರು. 6 ಕೆಸಿಕೆಎಂ 6ಮೂಡಿಗೆರೆ ಪಟ್ಟಣದಲ್ಲಿ ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ ಜಲ ಸಂರಕ್ಷಣೆ ಜಾಗೃತಿ ಕರ ಪತ್ರ ಬಿಡುಗಡೆಗೊಳಿಸಿದರು.