ಗಿಡ ಬೆಳಸಿ ಭೂಮಿಯ ಫಲವತ್ತತೆ ಕಾಪಾಡಿ: ಮಂಜುನಾಥ್

| Published : Jun 06 2024, 12:32 AM IST

ಸಾರಾಂಶ

ಗಿಡಗಳನ್ನು ನೆಟ್ಟು ವರ್ಷವಿಡಿ ಬೆಳಸಿ ಪೋಷಿಸಿ ಭೂಮಿಯ ಪ್ರಕೃತತೆಯನ್ನು ಕಾಪಾಡಬೇಕು ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಗಿಡಗಳನ್ನು ನೆಟ್ಟು ವರ್ಷವಿಡಿ ಬೆಳಸಿ ಪೋಷಿಸಿ ಭೂಮಿಯ ಪ್ರಕೃತತೆಯನ್ನು ಕಾಪಾಡಬೇಕು ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.

ಪಟ್ಟಣದ ತಾಲುಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ಅರಣ್ಯ ಇಲಾಖೆ, ಸಾಮಾಜಿಕ ವಲಯ ಅರಣ್ಯ, ಹಾಗೂ ಭಾರತ್ ಸ್ಕೌಟ್ ,ಗೈಡ್ಸ್ ವತಿಯಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ಮಾತನಾಡಿದರು. ನಮ್ಮನೆಲ್ಲಾ ಕಾಪಾಡುತ್ತಿರುವ ಪೋಷಿಸುತ್ತಿರುವ ಭೂಮಿಯ ಮೇಲಿನ ಪರಸರವರನ್ನು ರಕ್ಷಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ. ಪರಿಸರ ರಕ್ಷಣೆ ಸಂವಿಧಾನದಲ್ಲೂ ಸಹ ಬರೆದಿರುವ ಅಂಶವಾಗಿದೆ. ಮಳೆಬಾರದೆ ವಲಸೆ ಹೋಗುವ ಸಂದರ್ಭವನ್ನು ಪರಿಸರವನ್ನು ಕಾಪಾಡದೆ ನಾವೇ ತಂದುಕೊಂಡಿದ್ದೇವೆ ಎಂದರು.

ತಾಲೂಕು ವಲಯ ಅರಣ್ಯಾಧಿಕಾರಿ ರವಿ ಮಾತನಾಡಿ, 1973 ರಿಂದ ವಿಶ್ವಸಂಸ್ಥೆ ಸೂಚನೆಯಂತೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಭೂಮಿಯಲ್ಲಿ ಮನುಷ್ಯನ ದುರಾಸೆಯಿಂದ ಅರಣ್ಯ ನಾಶವಾಗುತ್ತಿದೆ. ಈ ಅರಣ್ಯ ನಾಶದಿಂದ ಪ್ರಕೃತಿಯಲ್ಲಿ ಹವಾಮಾನ ವೈಪರಿತ್ಯವಾಗುತ್ತಿದ್ದು, ವಾತಾವರಣದಲ್ಲಿ ಬಹಳ ವ್ಯತ್ಯಾಸದಿಂದ ಅತಿಯಾದ ಬಿಸಿಲು, ತಾಪಮಾನ, ಮಳೆಯ ಅತಿವೃಷ್ಟಿ, ಅನಾವೃಷ್ಟಿ, ಅತಿಯಾದ ಶೀತದಿಂದ ಮನುಷ್ಯ ಹಾಗೂ ಪ್ರಾಣಿಗಳು ತತ್ತರಿಸುತ್ತಿವೆ ಎಂದು ಹೇಳಿದರು.

ಇದರಿಂದ ಪ್ರತಿಯೊಬ್ಬ ನಾಗರೀಕನಿಗೂ ಅರಿವು ಮೂಡಿಸಲು ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ದೇಶದಲ್ಲಿ ಶೇ .20, ರಾಜ್ಯದಲ್ಲಿ ಶೇ.21, ತಾಲೂಕಿನಲ್ಲಿ ಶೇ.12 ರಷ್ಟು ಅರಣ್ಯ ಇದೆ, ನಮ್ಮ ಜೀವವೈವಿದ್ಯತೆಗೆ ಅರಣ್ಯ ಶೇ .33 ರಷ್ಟು ಬೇಕಿದ್ದು ಅದನ್ನು ನಾವುಗಳು ಬೆಳಸಲು ಶ್ರಮಿಸಬೇಕಿದೆ ಎಂದರು.ಸಾಮಾಜಿಕ ವಲಯ ಅರಣ್ಯಧಿಕಾರಿ ಶಿಲ್ಪ ಮಾತನಾಡಿ, ಈ ವರ್ಷ ತಾಲೂಕಿನಲ್ಲಿ ನಮ್ಮ ಇಲಾಖೆಯಿಂದ 50 ಸಾವಿರ ಗಿಡಗಳನ್ನು ಬೆಳಸುವ ಗುರಿ ಹೊಂದಿದ್ದು, ಇದರಲ್ಲಿ 25000 ಗಿಡಗಳನ್ನು ರೈತರಿಗೆ ಉಳಿದ 25000 ಗಿಡಗಳನ್ನು ನಮ್ಮ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಆದೇಶದಂತೆ ಪ್ರತಿ ಪಂಚಾಯಿತಿಗೆ 500 ಗಿಡಗಳನ್ನು ನೀಡಲಾಗುವುದು. ಅವುಗಳನ್ನು ಪಂಚಾಯತಿ ಆವರಣ, ಅದರ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಬೆಳಸಬೇಕು ಎಂದರು. ತಾಲೂಕು ಭಾರತ್ ಸ್ಕೌಟ್, ಗೈಡ್ಸ್ ಅಧ್ಯಕ್ಷ ಕೆ.ಆರ್.ಓಬಳರಾಜು ಮಾತನಾಡಿ, ಪರಿಸರ ರಕ್ಷಣೆ ಮತ್ತು ಗಿಡಗಳನ್ನು ನೆಟ್ಟು ಬೆಳಸುವ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದರು.ತಾಲೂಕು ಪಂಚಾಯತಿ ಇಒ ಅಪೂರ್ವ, ಸಿಡಿಪಿಒ ಅಂಬಿಕಾ, ಸಮಾಜ ಕಲ್ಯಾಣಾಧಿಕಾರಿ ಯಮುನಾ, ಕೃಷಿ ಸಹಾಯಕ ನಿರ್ದೇಶಕ ರುದ್ರಪ್ಪ, ಅಧಿಕಾರಿಗಳಾದ ದಿಲೀಪ್ ಕುಮಾರ್, ಗುರುಮೂರ್ತಿ, ಮಧುಸೂದನ್, ಪ್ರಸನ್ನಕುಮಾರ್, ಉಷಾ ರಾಧಮ್ಮ ಹಾಜರಿದ್ದರು.