ಯಾವುದೇ ಒಂದು ಸಂಸ್ಥೆ ಕಟ್ಟುವುದು ತುಂಬ ಸುಲಭ ಆದರೆ ಅದನ್ನು ಬೆಳೆಸಿ-ಉಳಿಸಿಕೊಂಡು ಹೋಗುವುದು ಒಂದು ದೊಡ್ಡ ಸವಾಲಿನ ಕೆಲಸವಾಗಿರುತ್ತದೆ.
ಕನ್ನಡಪ್ರಭ ವಾರ್ತೆ ಮುಂಡಗೋಡ
ಯಾವುದೇ ಒಂದು ಸಂಸ್ಥೆ ಕಟ್ಟುವುದು ತುಂಬ ಸುಲಭ ಆದರೆ ಅದನ್ನು ಬೆಳೆಸಿ-ಉಳಿಸಿಕೊಂಡು ಹೋಗುವುದು ಒಂದು ದೊಡ್ಡ ಸವಾಲಿನ ಕೆಲಸವಾಗಿರುತ್ತದೆ ಎಂದು ಹಾನಗಲ್ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಶನಿವಾರ ಪಟ್ಟಣದ ಛತ್ರಪತಿ ಶಿವಾಜಿ ಸಹಕಾರಿ ಸಂಘದ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆ ಕಟ್ಟುವ ಸಂದರ್ಭದಲ್ಲಿರುವ ಒಗ್ಗಟ್ಟು ಹುರುಪು ಹುಮ್ಮಸ್ಸು ಆರ್ಥಿಕ ವಹಿವಾಟು ಬೆಳೆಯಲು ಪ್ರಾರಂಭಿಸಿದಾಗ ಮನಸ್ಥಾಪಗಳು ಒಡಕು ಹುಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅದನ್ನು ನೀಗಿಸಿಕೊಂಡು ಹೋಗುವುದು ದೊಡ್ಡ ಕೆಲಸವೇ ಸರಿ.
ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀಮಂತರಿಗೆ ಮಾತ್ರ ಸಾಲ ಸೌಲಭ್ಯ ದೊರೆಯುತ್ತಿತ್ತು. ಬಡವರು ಸಾಲ ಪಡೆದರೆ ಜೀತದಾಳಾಗಿ ಸಾಲ ತೀರಿಸುವ ಪದ್ದತಿ ಇತ್ತು. ಆದರೆ ಇಂದು ಪ್ರತಿಯೊಬ್ಬರೂ ಕೂಡ ಸುಲಭವಾಗಿ ಸಾಲ ಸೌಲಭ್ಯ ಪಡೆಯಬಹುದು. ತೆರಿಗೆಯಿಂದ ಸಂಗ್ರಹವಾಗುವ ಹಣದಿಂದ ಸರ್ಕಾರದ ಯಾವುದೇ ಒಂದು ಅಭಿವೃದ್ದಿ ಯೋಜನೆ ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ. ಹಣ ಚಲಾವಣೆಯಾಗದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಹಾಗಾಗಿ ಹಣ ಚಲಾವಣೆಯಾಗುತ್ತಿರಬೇಕು ಎಂದರು.ಮರಾಠಾ ಸಮಾಜ ಚಿಕ್ಕದಿರಬಹುದು ಆದರೆ ಶಕ್ತಿ ದೊಡ್ಡದಿದೆ. ಕ್ಷತ್ರಿಯ ಛತ್ರಪತಿ ಶಿವಾಜಿ ಮಹಾರಾಜರು ಜನಿಸಿದ ಸಮಾಜದಲ್ಲಿ ಹುಟ್ಟಿರುವ ನಮ್ಮ ಸಮಾಜದ ರಕ್ತದಲ್ಲಿ ಹೋರಾಟದ ಮನೋಭಾವವಿದೆ. ಸತ್ಯಕ್ಕೆ ಸಂಕಷ್ಟ ಬಂದಾಗ ಎದೆ ತಟ್ಟಿ ನಿಂತು ಹೋರಾಡಿ ನ್ಯಾಯದ ದ್ವಜವನ್ನು ಹಾರಿಸಿದ ಛತ್ರಪತಿ ಶಿವಾಜಿ ಮಹಾರಾಜರು ಜನಿಸಿದ ಸಮಾಜದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಸೌಭಾಗ್ಯ. ಶಿವಾಜಿ ಮಹಾರಾಜರು ಸತ್ಯಕ್ಕಾಗಿ ಹೋರಾಟ ಮಾಡಿದವರು. ಅವರನ್ನು ಒಂದು ಜಾತಿ ಧರ್ಮಕ್ಕೆ ಸೀಮಿತಗೊಳಿಸದೆ ಅವರ ಆದರ್ಶಗಳನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದರು.
ಕರ್ನಾಟಕ ಮರಾಠ ಅಭಿವೃದ್ದಿ ನಿಗಮದ ಅಧ್ಯಕ್ಷ ಮರಿಯೋಜಿ ರಾವ್ ಮಾತನಾಡಿದರುಗೋಸಾವಿ ಮಠದ ಶ್ರೀ ಮಂಜುನಾಥ ಸ್ವಾಮಿಗಳು, ಹೆಬ್ಬಳ್ಳಿಯ ಬ್ರಹ್ಮಾನಂದ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಛತ್ರಪತಿ ಶಿವಾಜಿ ಸಹಕಾರಿ ಸಂಘದ ಅಧ್ಯಕ್ಷ ಎಲ್.ಟಿ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ. ಎಂ.ಜಿ. ಮುಳೆ, ಛತ್ರಪತಿ ಶಿವಾಜಿ ಸೊಸೈಟಿಯ ಉಪಾಧ್ಯಕ್ಷ ಕೆ.ಎಫ್. ಪುರದವರ್, ಮಾಜಿ ಅಧ್ಯಕ್ಷ ಪಿ.ಜಿ. ಪಾಟೀಲ, ಜ್ಞಾನೇಶ್ವರ ಗುಡಿಯಾಳ, ಛತ್ರಪತಿ ಶಿವಾಜಿ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ದಶರಥ ಸಾಳುಂಕೆ, ಪಾಳಾ ಶಾಖೆಯ ನಿರ್ವಾಹಕರಾದ ಮುರುಳೀಧರ ರಾಣೋಜಿ, ಯಲ್ಲಪ್ಪ ಕಿತ್ತೂರ, ಗಣೇಶಪ್ಪ ಕೋಡಿಹಳ್ಳಿ, ರಾಜು ಗೌಳಿ, ಡಿ.ಎಫ್. ಮಡ್ಲಿ, ಡಿ.ಎಫ್. ಬಾಳಮ್ಮನವರ, ನಾಗರಾಜ ಬೆಣ್ಣಿ, ಬಸವರಾಜ ಆಸ್ತಕಟ್ಟಿ, ಎಮ್.ಸಿ. ಕಲಾಲ, ಎನ್.ಡಿ. ಕಿತ್ತೂರ, ವಿಜಯಕುಮಾರ ಬೋಸ್ಲೆ ಮುಂತಾದವರಿದ್ದರು.
ಮೇಘನಾ ಸಂಗಡಿಗರಿಂದ ಪ್ರಾರ್ಥಿಸಿದರು. ಎಲ್.ಟಿ. ಪಾಟೀಲ ಸ್ವಾಗತಿಸಿದರು. ಗೋಪಾಲ ಪಾಟೀಲ ನಿರೂಪಿಸಿದರು.ಯಲ್ಲಾಪುರ ವಾಣಿ ಹೆಗಡೆ ಸಂಗಡಿಗರಿಂದ ಸುಗಮ ಸಂಗೀತ ಮತ್ತು ಭಾವ ಗೀತೆ ಕಾರ್ಯಕ್ರಮ ನಡೆಯಿತು.