ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮಕ್ಕೆ ಶುಕ್ರವಾರ ಸಂಜೆ ಆಗಮಿಸಿದ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು.

ಗಜೇಂದ್ರಗಡ: ತಾಲೂಕಿನ ಕಾಲಕಾಲೇಶ್ವರ ಗ್ರಾಮಕ್ಕೆ ಶುಕ್ರವಾರ ಸಂಜೆ ಆಗಮಿಸಿದ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಜಿ.ಎಸ್. ಪಾಟೀಲ ಕುಟುಂಬಸ್ಥರು ದಕ್ಷಿಣ ಕಾಶಿ ಕಾಲಕಾಲೇಶ್ವರನಿಗೆ ಹರಕೆ ಹೊತ್ತಿದ್ದರು. ಹೀಗಾಗಿ ಗ್ರಾಮಸ್ಥರ ಕುಶಲೋಪರಿ ವಿಚಾರಿಸಿದ ಬಳಿಕ ಸಭಾಧ್ಯಕ್ಷ ಜಿ.ಎಸ್.ಪಾಟೀಲ ದಕ್ಷಿಣ ಕಾಶಿ ಕಾಲಕಾಲೇಶ್ವರ ದೇವರ ದರ್ಶನಕ್ಕೆ ತೆರಳಿದರು.

ಇದಕ್ಕೂ ಮುನ್ನ ತಾಲೂಕಿನ ಗೋಗೇರಿ ಗ್ರಾಮಕ್ಕೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಬಳಿಕ ಗ್ರಾಮದ ಮರಾಠ ಸಮಾಜದ, ಅಂಜುಮನ್ ಸಮಿತಿಯಿಂದ ನಿರ್ಮಾಣವಾಗುತ್ತಿರುವ ಶಾದಿ ಮಹಲ್, ವೀರಶೈವ ಸಮಾಜದ ಕಲ್ಯಾಣ ಹಾಗೂ ಹಾಲುಮತ ಸಮಾಜದ ಕಲ್ಯಾಣ ಮಂಟಪ ವೀಕ್ಷಿಸಿದರು. ಬಳಿಕ ನಾಗರಸಕೊಪ್ಪ ಗ್ರಾಮದ ಹುಲಿಗೆಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಹನುಮಪ್ಪ ಹೊರಪೇಟಿ, ಇಮಾಮಸಾಬ ಬಾಗವಾನ, ಮೌನೇಶಪ್ಪ ಭೋಸಲೆ, ಮಲ್ಲಿಕಾರ್ಜುನ ಗಾರಗಿ, ಕಳಕಪ್ಪ ಕೊಡತಗೇರಿ, ಬಜರತ್ ಬಾಗವಾನ, ಬಸವರಾಜ ಮೂಲಿಮನಿ, ಕಳಕಪ್ಪ ಮಾದರ ಸೇರಿ ಇತರರು ಇದ್ದರು.

ಶಶಿಧರ ಹೂಗಾರ, ಸಿದ್ದಪ್ಪ ಬಂಡಿ, ಶಿವರಾಜ ಘೋರ್ಪಡೆ, ಎಚ್.ಎಸ್. ಸೋಂಪುರ, ಮುರ್ತುಜಾ ಡಾಲಾಯತ್, ರಾಜು ಸಾಂಗ್ಲೀಕರ, ದುಗ್ಗಪ್ಪ ಭಜಂತ್ರಿ, ರಾಜೇಂದ್ರಸ್ವಾಮಿ ಹಿರೇಮಠ, ಮುತ್ತಣ್ಣ ತಳವಾರ, ಮುದಿಯಪ್ಪ ತಳವಾರ, ಕಳಕಪ್ಪ ಪೂಜಾರ, ವಿ.ಬಿ. ಹಪ್ಪಳದ, ಶರಣಪ್ಪ ಹಾದಿಮನಿ, ಬಸಣ್ಣ ಆಡಿನ, ಕಳಕಪ್ಪ ಕಂಬಳಿ, ಅಪ್ಪಣ್ಣ ಮುಜಾವರ, ಶೇಖಪ್ಪ ಮಳಗಿ, ಸುರೇಶಗೌಡ ಪಾಟೀಲ, ಚಿದಾನಂದ ಪಾಟೀಲ, ಆನಂದ ಅಜಮೀರ, ಕಳಕಪ್ಪ ಮಾಗಿ, ಪ್ರಭು ಹುಡೇದ, ಶರಣಪ್ಪ ಸಜ್ಜನ, ಮಲ್ಲೇಶ ಹೊಸಳ್ಳಿ, ಯಮನೂರಸಾಬ ಮುಜಾವರ, ಕಳಕಪ್ಪ ಹೊಸಮನಿ, ಶರೀಫ ಸೌದಾಗರ, ಮೋದಿನಸಾಬ ಮಜಾವಾರ, ಕಳಕಪ್ಪ ಹೂಗಾರ, ವೀರೇಶ ರಾಠೋಡ ಜಗದೀಶ ಹಿರೇಮಠ, ಸಂತೋಷ ಚಿತ್ರಗಾರ, ಶ್ರೀಧರ ಬಿದರಳ್ಳಿ ಇದ್ದರು.