ಅಲೋಶಿಯಸ್ ವಿವಿಯಲ್ಲಿ ‘ಗ್ಸೇವಿಕಾನ್ 2025’ ವಿಜ್ಞಾನ ಹಬ್ಬ

| Published : Sep 11 2025, 12:04 AM IST

ಸಾರಾಂಶ

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ವಿಜ್ಞಾನ ಹಬ್ಬ ‘ಗ್ಸೇವಿಕಾನ್ 2025’ ಬುಧವಾರ ವಿವಿಯ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಿತು.

ಮಂಗಳೂರು: ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ವಿಜ್ಞಾನ ಹಬ್ಬ ‘ಗ್ಸೇವಿಕಾನ್ 2025’ ಬುಧವಾರ ವಿವಿಯ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಿತು.

ಪದವಿ ವಿದ್ಯಾರ್ಥಿಗಳಿಗೆ ಅನೇಕ ವೈಜ್ಞಾನಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜ್ಞಾನ ಮಾಡೆಲ್ ಮೇಕಿಂಗ್, ರಸಪ್ರಶ್ನೆ, ಇನೋ ಎಕ್ಸ್ಪೋ, ರೀಸೈಕಲ್ಡ್ ರೋಯಲಿಟಿ, ಸಯನ್ಸ್ ಪಿಚ್, ಜೆನ್ ಫ್ರೇಮ್ಸ್, ಕೆಟಲಿಸ್ಟ್ ಕ್ವಿಜ್, ಇನೋವಿಷನ್, ಮೈಂಡ್ ಕ್ವೆಸ್ಟ್, ಟ್ರಿಟೆಕ್ ಟ್ರೈಲ್ಸ್, ಸೈನ್ಸ್ ಕ್ವೆಸ್ಟ್ ಮೊದಲಾದ ಹತ್ತು ಸ್ಪರ್ಧೆಗಳಿದ್ದವು.

ವಿಜ್ಞಾನ ಹಬ್ಬದ ಉದ್ಘಾಟನೆಯನ್ನು ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ಎನ್ಐಟಿಕೆ ಸುರತ್ಕಲ್‌ನ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ರಾಮಚಂದ್ರ ಭಟ್ ನೆರವೇರಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ರೆ.ಡಾ. ಪ್ರವೀಣ್ ಮಾರ್ಟಿಸ್ ಮಾತನಾಡಿ, ವಿಜ್ಞಾನವನ್ನು ರಚನಾತ್ಮಕ ಕಾರ್ಯಗಳಿಗೆ ಬಳಸಿ ಶಾಂತಿ, ಸೌಹಾರ್ದತೆಯ ಮೌಲ್ಯಗಳಿಗೆ ಬೆಲೆ ನೀಡಬೇಕೆಂದು ಕರೆ ನೀಡಿದರು.ಸದ್ಯದಲ್ಲೇ ನಿವೃತ್ತಿಯಾಗಲಿರುವ ಕ್ಸೇವಿಯರ್ ಬ್ಲಾಕ್‌ನ ನಿರ್ದೇಶಕ ಡಾ. ಈಶ್ವರ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಸಂಯೋಜಕ ಗ್ಲೇವಿನ್ ಡಿಸೋಜ ಸ್ವಾಗತಿಸಿದರು. ಕುಲಸಚಿವ ಡಾ. ಆಲ್ವಿನ್ ಡೇಸಾ, ಡಾ. ರೊನಾಲ್ಡ್ ನಜರೆತ್, ವಿಜ್ಞಾನ ವಿಭಾಗದ ಡೀನ್ ಡಾ. ಅರುಣ ಕಲ್ಕೂರ್, ಸಹಸಂಯೋಜಕಿ ಶರ್ಲಿ ಅಂದ್ರಾದೆ, ವಿದ್ಯಾರ್ಥಿ ಸಂಯೋಜಕ ನಿಖಿಲ್ ಮತ್ತು ಪ್ರಾಪ್ತಿ ಇದ್ದರು.