ಸಾರಾಂಶ
- ಮೊಸರು ಹೊರತುಪಡಿಸಿ ಮಿಕ್ಕ ಉತ್ಪನ್ನ ದರ ಭಾರಿ ಇಳಿಕೆ
- ನಾಳೆಯಿಂದಲೇ ಪರಿಷ್ಕೃತ ದರ ಜಾರಿ---- ನಂದಿನಿ ತುಪ್ಪದ ಬೆಲೆ ಕೆಜಿಗೆ 40 ರು. ಕಡಿತ. 650 ರು.ನಿಂದ 610 ರು.ಗೆ ಇಳಿಕೆ
- ಗುಡ್‌ಲೈಫ್ ಹಾಲು ಬೆಲೆ 1 ಲೀ.ಗೆ 2 ರು. ಕಡಿತ. 70 ರು.ನಿಂದ 68 ರು.ಗೆ ಇಳಿಕೆ- ಬಾದಾಮಿ ಹಾಲು ಪುಡಿ 200 ಗ್ರಾಂಗೆ ₹13 ಕಡಿತ. ₹120ನಿಂದ ₹107ಗೆ ಇಳಿಕೆ
==ಶೇ.5 ಜಿಎಸ್ಟಿ ಬದಲಿಲ್ಲ:
ಮೊಸರು ದರ ಇಳಿಯಲ್ಲಮೊಸರು ಬೆಲೆ ಇಳಿಕೆ ನಿರೀಕ್ಷೆ ಇತ್ತಾದರೂ ಅದರ ಬೆಲೆ ಇಳಿದಿಲ್ಲ. ಈ ಹಿಂದೆ ಮೊಸರಿನ ಮೇಲೆ ಶೇ.5ರಷ್ಟು ಜಿಎಸ್‌ಟಿ ದರ ಇತ್ತು. ಈಗಲೂ ಶೇ.5 ಜಿಎಸ್ಟಿಯೇ ಮುಂದುವರಿದಿದೆ. ಹೀಗಾಗಿ ಮೊಸರಿನ ದರ ಈ ಹಿಂದಿನ ದರದಂತೆಯೇ ಮುಂದುವರೆಯಲಿದೆ ಎಂದು ಕೆಎಂಎಫ್ ಹೇಳಿದೆ.
----ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿ ದರ ಇಳಿಸಿರುವ ಹಿನ್ನೆಲೆಯಲ್ಲಿ ದಸರಾ ಹಬ್ಬಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿರುವ ಕೆಎಂಎಫ್, ಮೊಸರು ಹೊರತುಪಡಿಸಿ ಹಾಲಿನ ಉತ್ಪನ್ನಗಳಾದ ಬೆಣ್ಣೆ, ತುಪ್ಪ, ಚೀಸ್ ಸೇರಿ ಇತರೆ ಉತ್ಪನ್ನಗಳ ಮಾರಾಟ ದರ ಪರಿಷ್ಕರಿಸಿದೆ. ಹೊಸ ದರಗಳು ಸೆ.22ರಿಂದ ಜಾರಿಗೆ ಬರಲಿವೆ.ಶನಿವಾರ ಹಾಲು ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು, ನವರಾತ್ರಿಯಿಂದ ಜಾರಿಗೆ ಬರುವಂತೆ ಹಾಲಿನ ಉತ್ಪನ್ನಗಳ ದರ ಕಡಿಮೆ ಮಾಡಲು ಕೇಂದ್ರ ಸರ್ಕಾರ ಆದೇಶಿಸಿತ್ತು. ಅದರಂತೆ ಹಾಲಿನ ಇತರ ಉತ್ಪನ್ನಗಳ ದರವನ್ನು ಇಳಿಕೆ ಮಾಡಲಾಗಿದೆ. ಆದರೆ ಶೇ.5ರಷ್ಟು ಜಿಎಸ್‌ಟಿ ಇರುವ ಮೊಸರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಈ ಹಿಂದಿನ ದರದಂತೆಯೇ ಮುಂದುವರೆಯಲಿದೆ ಎಂದು ತಿಳಿಸಿದರು.
ನಂದಿನಿ ತುಪ್ಪ, ಬೆಣ್ಣೆ, ಚೀಸ್, ಕುರುಕು ತಿಂಡಿಗಳ ಮೇಲಿನ ಜಿಎಸ್‌ಟಿ ಶೇ.12ರಿಂದ 5ಕ್ಕೆ ಇಳಿಸಲಾಗಿದೆ. ನಂದಿನಿ ಕುಕ್ಕಿಸ್, ಚಾಕೋಲೇಟ್ಸ್, ಐಸ್‌ಕ್ರೀಂ, ಇನ್ಸ್‌ಟಾಂಟ್ ಮಿಕ್ಸ್ ಮತ್ತು ಪ್ಯಾಕ್ಡ್ ನೀಡಿನ ಮೇಲಿನ ಜಿಎಸ್‌ಟಿ ಶೇ.18ರಿಂದ 5ಕ್ಕೆ ಮತ್ತು ನಂದಿನಿ ಪನ್ನೀರ್ ಮತ್ತು ಯುಎಚ್‌ಟಿ (ಗುಡ್‌ಲೈಫ್) ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಶೇ.5ರಿಂದ ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಸೋಮವಾರದಿಂದಲೇ ಜಾರಿಗೆ ಬರಲಿದ್ದು ಎಲ್ಲಾ ನಂದಿನಿ ಪಾರ್ಲರ್‌ಗಳು, ಮಳಿಗೆಗಳಲ್ಲಿ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸಲು ಏಜೆಂಟರಿಗೆ, ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.ಪರಿಷ್ಕೃತ ದರವನ್ನೇ ಕೊಡಿ:
ಈಗಾಗಲೇ ಮುದ್ರಿತವಾಗಿರುವ ಪ್ಯಾಕೆಟ್‌ಗಳಲ್ಲಿ ಮಾರಾಟ ಮಳಿಗೆಗಳಿಗೆ ಸರಬರಾಜಾಗಿರುವ ಹಾಲಿನ ಉತ್ಪನ್ನಗಳ ಮೇಲೆ ಹಳೆಯ ದರವೇ ಇರುತ್ತದೆ. ಆದರೆ, ಮಾರಾಟಗಾರರು ಪರಿಷ್ಕೃತ ದರವನ್ನೇ ಪಡೆಯಲು ಸೂಚಿಸಲಾಗಿದೆ. ಅಂತೆಯೇ ಗ್ರಾಹಕರು, ಆ ಮಳಿಗೆಗಳಲ್ಲಿ ಪ್ರಕಟಿಸಿರುವ ದರ ಪಟ್ಟಿಯಂತೆ ಪರಿಷ್ಕೃತ ದರ ಪಾವತಿಸಿ ಬೇಕಾದ ಉತ್ಪನ್ನ ಪಡೆಯಬಹುದು. ಹಾಗೆಯೇ ಮಾರಾಟಗಾರರು ಸಗಟು ಖರೀದಿ ಮಾಡುವಾಗ ಈಗಾಗಲೇ ಜಿಎಸ್‌ಟಿ ಕಟ್ಟಿದ್ದರೆ ಅದನ್ನು ವಾಪಸ್ ಪಡೆದುಕೊಳ್ಳಬಹುದು ಎಂದು ಶಿವಸ್ವಾಮಿ ಹೇಳಿದರು.--
ಹಾಲು ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿಹಾಲಿನ ಉತ್ಪನ್ನಗಳುಪ್ಯಾಕ್ ಸೈಜ್‌ಹಳೆಯ ದರಪರಿಷ್ಕೃತ ದರ (ರು.ಗಳಲ್ಲಿ)
ತುಪ್ಪ (ಪೌಚ್)1000 ಮಿಲಿ650610ಬೆಣ್ಣೆ-ಉಪ್ಪುರಹಿತ500 ಗ್ರಾಂ350286
ಪನೀರ್1000 ಗ್ರಾಂ425408ಗುಡ್‌ಲೈಫ್ ಹಾಲು1000 ಮಿಲೀ.7068
ಚೀಸ್-ಮೊಝ್ಝಾರೆಲ್ಲಾ1 ಕೆಜಿ480450ಚೀಸ್-ಸಂಸ್ಕರಿಸಿದ1 ಕೆಜಿ530497
ಐಸ್ ಕ್ರೀಂಗಳು-ವೆನಿಲ್ಲಾ ಟಬ್1000 ಮಿಲೀ200178ಐಸ್ ಕ್ರೀಂ ಫ್ಯಾಮಿಲಿ ಪ್ಯಾಕ್5000 ಮಿಲಿ645574
ಐಸ್‌ಕ್ರಿಂ- ಚಾಕೊಲೇಟ್ ಸಂಡೇ500 ಮಿಲೀ115102ಐಸ್‌ಕ್ರೀಂ ಮ್ಯಾಂಗೋ ನ್ಯಾಚುರಲ್ಸ್100 ಮಿಲೀ3531
ಖಾರಾ ಉತ್ಪನ್ನಗಳು180 ಗ್ರಾಂ6056ಮಫಿನ್‌ಗಳು150 ಗ್ರಾಂ5045
ಕೇಕ್‌ಗಳು200 ಗ್ರಾಂ11098ನಂದಿನಿ ನೀರು1000 ಮಿಲಿ2018
ಪಾಯಸ ಮಿಶ್ರಣ200 ಗ್ರಾಂ9080ಜಾಮೂನ್ ಮಿಶ್ರಣ200 ಗ್ರಾಂ8071
ಬಾದಾಮ್ ಹಾಲಿನ ಪುಡಿ200 ಗ್ರಾಂ120107ಕುಕೀಸ್100 ಗ್ರಾಂ3531
ಸ್ಲಾಶ್‌ವೇ ಡ್ರಿಂಕ್ಸ್200 ಮಿಲೀ109.50ಬೌನ್ಸ್200 ಮಿಲೀ1515
ರೈಸ್ ಕ್ರಿಪಿ ಮಿಲ್ಕ್ ಚಾಕೋ80 ಗ್ರಾಂ6558