ಸಾರಾಂಶ
ಪ್ರಧಾನಿ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಪುಷ್ಪ ಅಮರನಾಥ್, ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಪತ್ನಿಯ ತಾಳಿಯ ಬಗ್ಗೆ ಯೋಚಿಸಿದ್ದಾರಾ? ಕೂಲಿ ಕಾರ್ಮಿಕರ ಪತ್ನಿಯ ತಾಳಿಯ ವಿಚಾರವನ್ನು ಗಂಭೀರವಾಗಿ ಯೋಚಿಸಿ. ಗ್ಯಾರಂಟಿ ಹಣದಿಂದ ಅಡವಿಟ್ಟ ತಾಳಿ ಬಿಡಿಸಿಕೊಂಡಿದ್ದೇವೆ ಎಂದು ತಾಳಿಗೆ ಭದ್ರತೆ ಸಿಕ್ಕಿದ್ದರೆ ಅದು ಗ್ಯಾರಂಟಿಯಿಂದ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹತ್ತು ವರ್ಷಗಳ ಅವಕಾಶ ಕೊಟ್ಟಿತ್ತು. ಕಪ್ಪುಹಣ ತರುವುದು, ಬೆಲೆ ಏರಿಕೆ ನಿಯಂತ್ರಣ ಹಾಗೂ ಉದ್ಯೋಗ ಸೃಷ್ಟಿ ಯಾವುದೂ ಈಡೇರಿಲ್ಲ. ಆದರೆ ಈಗ ತಾಳಿಯ ವಿಚಾರವನ್ನು ಬೀದಿಗೆ ತಂದಿದ್ದಾರೆ. ನಾವು ಅವರ ಪತ್ನಿಯನ್ನು ಕೇಳಬೇಕು ಎಂದು ಕಾಂಗ್ರೆಸ್ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಪುಷ್ಪ ಅಮರನಾಥ್ ಹೇಳಿದ್ದಾರೆ.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತನಿಗೆ ಬೆಂಬಲ ಬೆಲೆ ಇಲ್ಲ. ಆದರೆ ಕರ ಹೆಚ್ಚಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಪತ್ನಿಯ ತಾಳಿಯ ಬಗ್ಗೆ ಯೋಚಿಸಿದ್ದಾರಾ? ಕೂಲಿ ಕಾರ್ಮಿಕರ ಪತ್ನಿಯ ತಾಳಿಯ ವಿಚಾರವನ್ನು ಗಂಭೀರವಾಗಿ ಯೋಚಿಸಿ. ಗ್ಯಾರಂಟಿ ಹಣದಿಂದ ಅಡವಿಟ್ಟ ತಾಳಿ ಬಿಡಿಸಿಕೊಂಡಿದ್ದೇವೆ ಎಂದು
ತಾಳಿಗೆ ಭದ್ರತೆ ಸಿಕ್ಕಿದ್ದರೆ ಅದು ಗ್ಯಾರಂಟಿಯಿಂದ ಎಂದು ಹೇಳಿದರು.ಕಾಂಗ್ರೆಸ್ ವಕ್ತಾರೆ ತೇಜಸ್ವಿನಿ ಗೌಡ ಮಾತನಾಡಿ, ಪ್ರತಾಪ್ ಸಿಂಹ ಸಂಸದರಾಗಿ ಏನೂ ಮಾಡಿಲ್ಲ. ಜಗತ್ತಿನ ಸುರಕ್ಷಿತ ಸಂಸತ್ ಗೆ ಭಯೋತ್ಪಾದನೆಯ ಕಳಂಕ ತಂದಿದ್ದಾರೆ. ಅವರನ್ನು ಸಂಸದ ಸ್ಥಾನದಿಂದ ಅಮಾನತು ಮಾಡಲಿಲ್ಲ. ಪ್ರತಾಪ್ ಸಿಂಹ ಅವರಿಗೆ ಯಾಕೆ ಬಿಜೆಪಿ ಟಿಕೆಟ್ ನೀಡಿಲ್ಲ ಎಂದು ಕೊಡಗಿನ ಜನರಿಗೆ ಕಾರಣ ಕೊಡಿ ಎಂದು ಆಗ್ರಹಿಸಿದರು.
ಕೊಡಗಿನ ಮಹಾನ್ ಸೇನಾನಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಯಾಕೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿಲ್ಲ ಎಂದು ತೇಜಸ್ವಿನಿ ಪ್ರಶ್ನಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಪ್ರಮುಖರಾದ ಕೆ.ಪಿ.ಚಂದ್ರಕಲಾ, ಸುರಯ್ಯ ಅಬ್ರಾರ್, ಮಿನಾಜ್ ಮತ್ತಿತರರು ಹಾಜರಿದ್ದರು.