ಯುವ ನಿಧಿಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ೬೮೮ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ
ಕುಕನೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಪಂಚ್ ಗ್ಯಾರಂಟಿ ಸಾರ್ವಜನಿಕರು ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಅನುಷ್ಠಾನ ಮತ್ತು ಪ್ರಗತಿ ಪರೀಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹ ಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಗೃಹ ಜ್ಯೋತಿ ಮತ್ತು ಶಕ್ತಿ ಯೋಜನೆ ಸಾರ್ವಜನಿಕರು ಇದರ ಉಪಯೋಗ ಮಾಡಿದ್ದರಿಂದ ಕೆಲ ಬಡವರ ಜೀವನ ಸುಧಾರಣೆಯಾಗಿದೆ. ಈಗ ಪರಿಷ್ಕರಣೆಗೆ ಗೃಹಜ್ಯೋತಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅಷ್ಟು ಮಾಹಿತಿ ಸಿಗುತ್ತಿಲ್ಲ. ಇದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿ ಇದರ ಉಪಯೋಗ ಜನರಿಗೆ ನೀಡಬೇಕು ಎಂದರು.ತಾಪಂ ಇಓ ಬೆಟದಪ್ಪ ಮಾಳೆಕೊಪ್ಪ ಮಾತನಾಡಿ, ಯುವ ನಿಧಿಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ೬೮೮ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ, ಕೆಲ ವಿದ್ಯಾರ್ಥಿಗಳು ಯುವನಿಧಿ ಬರುವದಿಲ್ಲ ಎನ್ನುವ ಉದ್ದೇಶದಿಂದ ಕೌಶಲ್ಯ ಕೇಂದ್ರದಲ್ಲಿ ನೀಡುವ ಟ್ರೆನಿಂಗ್‌ಗೆ ಸೇರ್ಪಡೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಭಾರತ ಜೋಡೋ ಕಾರ್ಯಕ್ರಮ ಅನುಷ್ಠಾನ ಮಾಡಲು ಈಗಾಗಲೇ ಪ್ರತಿ ಗ್ರಾಪಂಗೆ ಮತ್ತು ಪಟ್ಟಣದ ಕಾಲೇಜ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಪ್ರತಿ ಗ್ರಾಪಂಗೆ ೧೦೦ ಜನರಿಗೆ ಒಂದು ಸಂಘ ರಚನೆ ಮಾಡಬೇಕಿದೆ. ಕುಕನೂರು ಪಟ್ಟಣದಲ್ಲಿ ೨೨ ಸಾವಿರ ಜನಸಂಖ್ಯೆ ಇದೆ ಅದಕ್ಕೆ ೫ ಸಂಘ ರಚನೆ ಮಾಡಬೇಕಿದೆ. ೪೦೦೦ ಜನರಿಗೆ ಒಂದು ಸಂಘ ರಚನೆ ಮಾಡಬೇಕಿದೆ. ಈಗಾಗಲೇ ೫೨೭ ಯುವಕರು ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.
ಗ್ಯಾರಂಟಿ ಸಮಿತಿಯ ಸದಸ್ಯರು ಮಾತನಾಡಿ, ಸಚಿವ ಬಸವರಾಜ ರಾಯರಡ್ಡಿ ಗ್ರಾಮದಿಂದ ತಾಲೂಕು ಕೇಂದ್ರ ಕುಕನೂರಿಗೆ ಬರಲು ಬಸ್ ವ್ಯವಸ್ಥೆ ಇಲ್ಲ. ಆ ಮಾರ್ಗದಲ್ಲಿ ತಳಕಲ್, ತಳಬಾಳ್, ಅಡವಿಹಳ್ಳಿ, ಚಿತ್ತಾಪೂರ ಮತ್ತು ಕೋಮಲಾಪೂರ ಗ್ರಾಮಗಳ ಜನರು ಸ್ವಂತ ವೈಕಲ್‌ನಲ್ಲಿ ಬರಬೇಕಾಗಿದೆ. ಇಟಗಿ ಆದರ್ಶ ಶಾಲೆಗೆ ಬೇರೆ ಬೇರೆ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ ಆದರೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಅನ್ನಭಾಗ್ಯ ಯೋಜನೆಯ ವೃದ್ಧರಿಗೆ ಮನೆ ಮನೆಗೆ ತೆರಳಿ ಆಹಾರದಾನ್ಯ ನೀಡಬೇಕು ಎನ್ನುವ ಆದೇಶವಿದ್ದರು ವಿತರಕರು ಯಾರು ನೀಡುತ್ತಿಲ್ಲ. ಕಳೆದ ಬಾರಿ ಇದರ ಬಗ್ಗೆ ಚರ್ಚೆ ಮಾಡಿದರು ಕಾರ್ಯಕ್ರಮ ಅನುಷ್ಠಾನಗೊಂಡಿಲ್ಲ. ಗ್ಯಾರಂಟಿ ಸಮಿತಿಯ ಸದಸ್ಯರಾಗಿ ನಾವು ಎರಡು ವರ್ಷಗಳಾಯಿತು ಆದರೆ, ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಕೆಲ ಸದಸ್ಯರನ್ನು ದೆಹಲಿ ಇತರೆ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾರೆ ನಮ್ಮನ್ನು ಸ್ಪಲ್ಪ ಕರೆದುಕೊಂಡು ಹೋಗಬೇಕೆಂದು ಸದಸ್ಯರು ಅಧ್ಯಕ್ಷರಿಗೆ ಮನವಿ ಮಾಡಿದರು.ಪಪಂ ಮುಖ್ಯಾಧಿಕಾರಿ ನಾಗೇಶ, ಎಇಇ ನಾಗರಾಜ, ಸದಸ್ಯರಾದ ವಜೀರಸಾಬ್ ತಳಕಲ್, ಶ್ರೀಧರ ದೇಸಾಯಿ, ಸಿರಾಜುದ್ದೀನ್ ಕೊಪ್ಪಳ, ಬಸವರಾಜ, ಪ್ರಕಾಶ ಕಮ್ಮತರ್, ಸಂತೋಷ ಮೆಣಸಿನಕಾಯಿ, ಸುರೇಶ ಮಾಗಳೇಶ, ಮಹಾದೇವಿ ಮಾಳೆಕೊಪ್ಪ, ಜಿಲ್ಲಾ ಉದ್ಯೋಗ ಅಧಿಕಾರಿ ಶಿವಯೋಗಿ ಹೊಸಳ್ಳಿ, ತಾಪಂ ಯೋಜನಾಧಿಕಾರಿ ಆನಂದ ಗೊರೂರು, ಶಿಶು ಅಧಿಕಾರಿ ಮಾಧವಿ ವೈದ್ಯ, ಪಿಡಿಓ ವೈಜನಾಥ ಪಾಟೀಲ್, ನೀಲಂ ಚೆಳಗೇರಿ, ಸಿದ್ದನಗೌಡ ರಬ್ಬನಗೌಡ, ಶೇಖಸಾಬ್ ಇನ್ನಿತರ ಅಧಿಕಾರಿಗಳು ಇದ್ದರು.