ಗ್ಯಾರಂಟಿಗಳಿಂದ ಜನರ ಜೀವನಕ್ಕೆ ಅನುಕೂಲ: ಕರಿಬಸಪ್ಪ

| Published : Sep 02 2025, 12:00 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳು ಸಾಮಾನ್ಯ ಜನರ ಜೀವನಕ್ಕೆ ತುಂಬಾ ಅನುಕೂಲಕರವಾಗಿದೆ.

ಯೋಜನೆಗಳ ಪ್ರಗತಿ ಪರಿಶೀಲನಾ ಮತ್ತು ಕುಂದು ಕೊರತೆ ನಿವಾರಣೆ ಹಾಗೂ ಫಲಾನುಭವಿಗಳೊಂದಿಗೆ ಸಂವಾದ ಸಭೆ

ಕನ್ನಡ ಪ್ರಭ ವಾರ್ತೆ ಸಿರುಗುಪ್ಪ

ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳು ಸಾಮಾನ್ಯ ಜನರ ಜೀವನಕ್ಕೆ ತುಂಬಾ ಅನುಕೂಲಕರವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕರಿಬಸಪ್ಪ ಹೇಳಿದರು.

ತಾಲೂಕಿನ ದೇಶನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ ಗ್ಯಾರಂಟಿ ಯೋಜನೆಗಳ ನಡೆ ಗ್ರಾಮ ಪಂಚಾಯಿತಿ ಕಡೆ ಅಭಿಯಾನದೊಂದಿಗೆ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಮತ್ತು ಕುಂದು ಕೊರತೆ ನಿವಾರಣೆ ಹಾಗೂ ಫಲಾನುಭವಿಗಳೊಂದಿಗೆ ಸಂವಾದ ಸಭೆಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಯು ಮಹಿಳೆಯರಿಗೆ, ಯುವಕರಿಗೆ, ಬಹಳಷ್ಟು ಉಪಯುಕ್ತವಾಗಿವೆ. ಇನ್ನೂ ಇದರ ಸೌಲಭ್ಯ ಪಡೆಯದ ಫಲಾನುಭವಿಗಳು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಅಥವಾ ಗ್ಯಾರಂಟಿ ಸಮಿತಿಗೆ ತಿಳಿಸಿದರೆ ಅವರಿಗೂ ಈ ಯೋಜನೆಗಳ ಅವಕಾಶಗಳನ್ನು ಒದಗಿಸುತ್ತಿದೆ. ಪ್ರತಿಯೊಬ್ಬರು ರಾಜ್ಯ ಸರ್ಕಾರದ ಈ ಪಂಚ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪ್ರದೀಪ್ ಮಾತನಾಡಿ, ಪ್ರತಿಯೊಬ್ಬ ಫಲಾನುಭವಿಗಳು ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ, ಸಾಮಾಜಿಕವಾಗಿ ಸದೃಢವಾಗಿ ಬೆಳೆಯಬೇಕು ಎಂದರು.ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವರಪ್ರಸಾದ್ ರೆಡ್ಡಿ, ಗ್ರಾಪಂ ಅಧ್ಯಕ್ಷೆ ತಾಯಮ್ಮ ಭೀಮಪ್ಪ, ಸಿರುಗುಪ್ಪ ಕೆ.ಕೆ.ಆರ್‌.ಟಿ.ಸಿ ವ್ಯವಸ್ಥಾಪಕ ಉಮಾಮಹೇಶ್ವರ, ಉದ್ಯೋಗ ವಿನಿಮಯ ಕಚೇರಿ ಜಿಲ್ಲಾ ಆಪ್ತ ಸಂಯೋಜಕ ವೆಂಕಟೇಶ್, ಸಿಡಿಪಿಒ ಜಿ.ಪ್ರದೀಪ್, ಆಹಾರ ನಿರೀಕ್ಷಕ ಮಹಾರುದ್ರಗೌಡ, ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಬಸವರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಎಸ್.ಎಂ. ನಾಗರಾಜ ಸ್ವಾಮಿ, ಅಗ್ರಹಾರ ಗೋವಿಂದ. ಬಿಕೆ ಹಾಸೇನ್, ಚನ್ನಬಸವನಗೌಡ ಚನ್ನಬಸವನಗೌಡ, ಕೆ.ಎಚ್. ಗಿರೀಶ್, ಕೃಷ್ಣಪ್ಪ, ಪಿಡಿಒ ಅನ್ನಪೂರ್ಣ ಇದ್ದರು.