ಕನ್ನಡಪ್ರಭ ವಾರ್ತೆ ಗುಬ್ಬಿ

ಪಟ್ಟಣದಲ್ಲಿ ಇರುವ ಗುಬ್ಬಿ ವೀರಣ್ಣ ರಂಗಮಂದಿರವು ಟ್ರಸ್ಟ್ ಅಡಿಯಲ್ಲಿ ನಡೆಸುತ್ತಿದ್ದಾರೆ. ಇವರು ಬೇರೆಯವರಿಗೆ ರಂಗಚಟುವಟಿಕೆ ಮಾಡಲು ಅವಕಾಶ ಕೊಡುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದೇನೆ. ಅಲ್ಲಿಂದ ಉತ್ತರ ಬಂದ ತಕ್ಷಣ ತಹಸೀಲ್ದಾರ್ ರವರ ಸುಪರ್ದಿಗೆ ಕೊಡಿಸುತ್ತೇನೆ ಎಂದು ಕೆ.ಎಸ್.ಆರ್.ಟಿ.ಸಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಎಸ್.ಆರ್ ಶ್ರೀನಿವಾಸ್‌ ತಿಳಿಸಿದರು.

ತಾಲೂಕಿನ ದೊಡ್ಡೇರಿಕಟ್ಟೆ, ನಲ್ಲೂರು, ವಾಲ್ಮೀಕಿ ಬಡವಣೆ, ಮಳೇನಹಳ್ಳಿ ಗ್ರಾಮದ ಗ್ರಾಮಗಳಲ್ಲಿ ಕಾವೇರಿ ನೀರಾವರಿ ನಿಗಮ, ಎತ್ತಿನ ಹೊಳೆ ಯೋಜನೆಯಡಿಯಲ್ಲಿ ಅಂದಾಜು ರು. 4.50 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಯುದ್ಧದ ಪರಿಣಾಮದಿಂದಾಗಿ ಕಚ್ಚಾ ತೈಲದ ಬೆಲೆ ಏರಿದ್ದು ಸಹಜವಾಗಿಯೇ ಡೀಸೆಲ್ ಬೆಲೆ ಏರಿಕೆಯಾಗಿದೆ. ಆದರೆ ಬಸ್ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದ್ದು, ಕಾದು ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು.

ಪಟ್ಟಣದಲ್ಲಿ ಆಟದ ಮೈದಾನಕ್ಕೆ 4 ಕೋಟಿ ಹಣ ಮಂಜೂರು ಮಾಡಿ ನಕ್ಷೆ ತಯಾರಿಸಲು ಹೋದಾಗ ಆಟದ ಮೈದಾನವು ಕ್ರೀಡಾ ಇಲಾಖೆ ಅಥವಾ ಪಟ್ಟಣ ಪಂಚಾಯಿತಿ ಅಧೀನದಲ್ಲಿ ಇಲ್ಲದ ಕಾರಣ ಅಲ್ಲಿಗೆ ಕೈ ಬಿಡಲಾಗಿದೆ. ನ್ಯಾಯಾಲಯದ ತೀರ್ಮಾನ ಬಂದ ನಂತರ ಐದು ಕೋಟಿ ಬಿಡುಗಡೆ ಮಾಡಿ ವಿವಿಧ ಕ್ರೀಡಾ ಚಟುವಟಿಕೆಗಳು ಇಲ್ಲೇ ನಡೆಯುವಂತೆ ಮಾಡಿಸುತ್ತೇನೆ. ಕಾರ್ಯಕ್ರಮದಲ್ಲಿ ಮುಖಂಡರಾದ ಲಿಂಗರಾಜು, ಸಿದ್ದಪ್ಪರಾಜು ಗುರುಬಸವಣ್ಣ, ಜಗದೀಶ್, ಕಾಂತರಾಜು, ಸುಜಾತ, ಶೃತಿ, ತಾರಾಸಿದ್ದರಾಜ, ಕೃಷ್ಣಪ್ಪ, ಮೈಲಾರಯ್ಯ, ಹೇಮಂತ್, ನಟರಾಜು, ವತ್ಸಲರಾಜಣ್ಣ, ಪಿಡಿಓ ಯುವರಾಜು

ಎಇಇ ಸುರೇಶ್,ಇಂಜಿನಿಯರ್ ಪಲ್ಲವಿ, ಗುತ್ತಿಗೆದಾರ ಸಂದೀಪ್, ಸಿದ್ದರಾಜು, ಗುರುಲಿಂಗಯ್ಯ ಮತ್ತಿತರರ ರಾಜಕೀಯ, ಮುಖಂಡರು, ಅಧಿಕಾರಿಗಳು, ಸಾರ್ವಜನಿಕರು ಇತರರು ಇದ್ದರು.